HomeLatest Newsಮಾಡಲು ಸರಳ ರುಚಿಕರವಾದ ‘ಅವಲಕ್ಕಿʼ ಪಾಯಸ

ಮಾಡಲು ಸರಳ ರುಚಿಕರವಾದ ‘ಅವಲಕ್ಕಿʼ ಪಾಯಸ

ಮನೆಯಲ್ಲಿ ಹಬ್ಬದೂಟಕ್ಕೆ ಸಿಹಿ ಇಲ್ಲದಿದ್ದರೆ ಆಗುತ್ತದಾ…? ನಾನಾ ಬಗೆಯ ಅಡುಗೆ ಮಾಡುವಾಗ ಸಮಯ ಕೂಡ ಸಾಕಾಗುವುದಿಲ್ಲ. ರುಚಿಯ ಜತೆಗೆ ಥಟ್ಟಂತ ಆಗಿಬಿಡುವ ಅಡುಗೆ ಇದ್ದರೆ ತಲೆಬಿಸಿ ಕಡಿಮೆಯಾಗುತ್ತದೆ. ಇಲ್ಲಿ ಸುಲಭವಾಗಿ ಅವಲಕ್ಕಿ ಪಾಯಸ ಮಾಡುವ ವಿಧಾನವಿದೆ ಟ್ರೈ ಮಾಡಿ.

ಬೇಕಾಗುವ ಸಾಮಗ್ರಿಗಳು

½ ಕಪ್-ಅವಲಕ್ಕಿ, ½ ಕಪ್-ಸಕ್ಕರೆ, 2 ½ ಕಪ್-ಹಾಲು, 2 ಟೇಬಲ್ ಸ್ಪೂನ್-ತುಪ್ಪ, ಗೋಡಂಬಿ-10, ದ್ರಾಕ್ಷಿ-5, ಏಲಕ್ಕಿ ಪುಡಿ-ಚಿಟಿಕೆ.

📱 ಬ್ರೇಕಿಂಗ್ ನ್ಯೂಸ್ ಬೇಗ ಬೇಕೆ?KannadaDunia App ಡೌನ್‌ಲೋಡ್ ಮಾಡಿ, ತಾಜಾ ಸುದ್ದಿ ಮೊದಲು ಪಡೆಯಿರಿ.
APP ತೆರೆಯಿರಿ

ಮಾಡುವ ವಿಧಾನ

ಮೊದಲಿಗೆ ಪ್ಯಾನ್ ವೊಂದನ್ನು ಗ್ಯಾಸ್ ಮೇಲೆ ಇಟ್ಟು ಅದಕ್ಕೆ ತುಪ್ಪ ಹಾಕಿ. ಅದು ಬಿಸಿಯಾಗುತ್ತಲೇ ದ್ರಾಕ್ಷಿ, ಗೋಡಂಬಿ ಹಾಕಿ ಹುರಿದುಕೊಂಡು ಒಂದು ಪ್ಲೇಟ್ ಗೆ ತೆಗೆದುಕೊಳ್ಳಿ.

ಅದೇ ಪ್ಯಾನ್ ಗೆ ಅವಲಕ್ಕಿ ಹಾಕಿ ಕೆಂಪಾಗುವವರೆಗೆ ಹುರಿದುಕೊಳ್ಳಿ. ಇದಕ್ಕೆ ಹಾಲು ಹಾಕಿ ಅವಲಕ್ಕಿ ಮೆದುವಾಗುವವರೆಗೆ ಬೇಯಿಸಿಕೊಳ್ಳಿ. ನಂತರ ಸಕ್ಕರೆ ಸೇರಿಸಿ 5 ನಿಮಿಷ ಬೇಯಿಸಿಕೊಳ್ಳಿ. ಚಿಟಿಕೆ ಏಲಕ್ಕಿ ಪುಡಿ, ಗೋಡಂಬಿ, ದ್ರಾಕ್ಷಿ ಸೇರಿಸಿ ಮಿಕ್ಸ್ ಮಾಡಿ ಗ್ಯಾಸ್ ಆಫ್ ಮಾಡಿ.

For Latest News Updates, Join Our Whatsapp Community🚩
RELATED ARTICLES

Most Popular