HomeIndiaಡಬಲ್ ಆಯ್ತು ಮಾಜಿ ಶಾಸಕರ ಪಿಂಚಣಿ: ಮಾಸಿಕ ಕನಿಷ್ಠ 50 ಸಾವಿರ ರೂ. ಪೆನ್ಷನ್ ಘೋಷಣೆ

ಡಬಲ್ ಆಯ್ತು ಮಾಜಿ ಶಾಸಕರ ಪಿಂಚಣಿ: ಮಾಸಿಕ ಕನಿಷ್ಠ 50 ಸಾವಿರ ರೂ. ಪೆನ್ಷನ್ ಘೋಷಣೆ

ಗ್ಯಾಂಗ್ಟಾಕ್: ಮಾಜಿ ಶಾಸಕರು ಇನ್ನು ಮುಂದೆ ಕನಿಷ್ಠ ಮಾಸಿಕ 50,000 ರೂಪಾಯಿ ಪಿಂಚಣಿ ಪಡೆಯಲಿದ್ದಾರೆ ಎಂದು ಸಿಕ್ಕಿಂ ಮುಖ್ಯಮಂತ್ರಿ ಪ್ರೇಮ್ ಸಿಂಗ್ ತಮಾಂಗ್ ಘೋಷಿಸಿದ್ದಾರೆ.

ಸಿಕ್ಕಿಂನ ಮಾಜಿ ಶಾಸಕರ ಒಕ್ಕೂಟದ(ಎಫ್‌ಎಲ್‌ಎಫ್‌ಎಸ್) 22ನೇ ಸಂಸ್ಥಾಪನಾ ದಿನದಂದು ತಮಾಂಗ್ ಶನಿವಾರ ಈ ಘೋಷಣೆ ಮಾಡಿದ್ದಾರೆ. ಒಂದೇ ಅವಧಿಗೆ ಶಾಸಕರಾಗಿ ಸೇವೆ ಸಲ್ಲಿಸಿದ ಮಾಜಿ ಶಾಸಕರು ಈಗ ಮಾಸಿಕ 50 ಸಾವಿರ ಪಿಂಚಣಿ ಪಡೆಯಲಿದ್ದಾರೆ ಎಂದು ಹೇಳಿದ್ದಾರೆ.

ಸದ್ಯ ಮಾಸಿಕ ಪಿಂಚಣಿಯಾಗಿ 22 ಸಾವಿರ ರೂ. ಎರಡು ಅಥವಾ ಅದಕ್ಕಿಂತ ಹೆಚ್ಚು ಬಾರಿ ಶಾಸಕರಾಗಿ ಸೇವೆ ಸಲ್ಲಿಸಿದ ಮಾಜಿ ಶಾಸಕರು ಈಗ 25,000 ರೂ.ನಿಂದ 55,000 ರೂ.ಗಳನ್ನು ಪಿಂಚಣಿಯಾಗಿ ಪಡೆಯುತ್ತಾರೆ ಎಂದು ತಮಾಂಗ್ ಹೇಳಿದರು.

📱 ಬ್ರೇಕಿಂಗ್ ನ್ಯೂಸ್ ಬೇಗ ಬೇಕೆ?KannadaDunia App ಡೌನ್‌ಲೋಡ್ ಮಾಡಿ, ತಾಜಾ ಸುದ್ದಿ ಮೊದಲು ಪಡೆಯಿರಿ.
APP ತೆರೆಯಿರಿ

ಸಿಕ್ಕಿಂನ ಮಾಜಿ ಶಾಸಕರ ಒಕ್ಕೂಟಕ್ಕೆ ಸಿಕ್ಕಿಂ ಸರ್ಕಾರ ವಾರ್ಷಿಕ 20 ಲಕ್ಷ ರೂಪಾಯಿ ಅನುದಾನ ನೀಡಲಿದೆ. ಈ ನಿಧಿಯು ಮಾಜಿ ಶಾಸಕರ ತುರ್ತು ಮತ್ತು ವೈದ್ಯಕೀಯ ಅಗತ್ಯಗಳನ್ನು ಪೂರೈಸಲು ಮತ್ತು ಅವರ ಬೆಂಬಲ ವ್ಯವಸ್ಥೆಯನ್ನು ಹೆಚ್ಚಿಸಲು ಉದ್ದೇಶಿಸಲಾಗಿದೆ ಎಂದು ಅವರು ಹೇಳಿದ್ದಾರೆ.

For Latest News Updates, Join Our Whatsapp Community🚩
niranjan
niranjan
Niranjan working in media filed from 24 years. He worked in Hubballi Udayavani and local newspapers in Shivamogga. ನಿರಂಜನ ಮೂರ್ತಿ ಎಚ್.ಸಿ. 24 ವರ್ಷಗಳಿಂದ ಮಾಧ್ಯಮ ಕ್ಷೇತ್ರದಲ್ಲಿದ್ದಾರೆ. ಎಂಎ ಕನ್ನಡ, ಪಿಜಿ ಡಿಪ್ಲೊಮಾ ಇನ್ ಜರ್ನಲಿಸಂ ವ್ಯಾಸಂಗ ಮಾಡಿದ್ದಾರೆ. ಶಿವಮೊಗ್ಗದ ಎಚ್ಚರಿಕೆ, ನಮ್ಮನಾಡು, ಜೈ ಕರುನಾಡು, ನುಡಿಗಿಡ, ಕ್ರಾಂತಿ ಭಗತ್ ಸ್ಥಳೀಯ ಪತ್ರಿಕೆಗಳಲ್ಲಿ ವರದಿಗಾರನಾಗಿ, ಹುಬ್ಬಳ್ಳಿಯ ಉದಯವಾಣಿಯಲ್ಲಿ ಉಪ ಸಂಪಾದಕರಾಗಿ ಕಾರ್ಯ ನಿರ್ವಹಣೆ ಮಾಡಿದ್ದಾರೆ.
RELATED ARTICLES

Most Popular