HomeLatest NewsBIG NEWS: 'ಸೆಪ್ಟೆಂಬರ್ ನಲ್ಲಿ ಬದಲಾವಣೆ': ಸಚಿವ ರಾಜಣ್ಣ ಹೇಳಿಕೆಗೆ ಸಿಎಂ ಸಿದ್ದರಾಮಯ್ಯ ಹೇಳಿದ್ದೇನು?

BIG NEWS: ‘ಸೆಪ್ಟೆಂಬರ್ ನಲ್ಲಿ ಬದಲಾವಣೆ’: ಸಚಿವ ರಾಜಣ್ಣ ಹೇಳಿಕೆಗೆ ಸಿಎಂ ಸಿದ್ದರಾಮಯ್ಯ ಹೇಳಿದ್ದೇನು?

ಬೆಂಗಳೂರು: ಸೆಪ್ಟೆಂಬರ್ ನಲ್ಲಿ ರಾಜ್ಯ ರಾಜಕಾರಣದಲ್ಲಿ ಭಾರಿ ಬದಲಾವಣೆಯಾಗಲಿದೆ ಎಂದು ಹೇಳಿಕೆ ನೀಡಿರುವ ಸಚಿವ ಕೆ.ಎನ್.ರಾಜಣ್ಣ ಮಾತು ಭಾರಿ ಚರ್ಚೆಗೆ ಕಾರಣವಾಗಿದೆ. ಈ ನಡುವೆ ರಾಜಣ್ಣ ಹೇಳಿಕೆಗೆ ಮುಖ್ಯಮಂತ್ರಿ ಸಿದ್ದರಾಮಯ್ಯ ಪ್ರತಿಕ್ರಿಯೆ ನೀಡಿದ್ದಾರೆ.

ಬೆಂಗಳೂರಿನಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಸಿಎಂ ಸಿದ್ದರಾಮಯ್ಯ, ಕೆ.ಎನ್.ರಾಜಣ್ಣ, ಸಣ್ಣ ಬದಲಾವಣೆಯಾಗಬಹುದು ಎಂದಿದ್ದಾರಷ್ಟೇ. ಯಾವ ರೀತಿ ಬದಲಾವಣೆ ಎಂದು ಹೇಳಿಲ್ಲವಲ್ಲ ಎಂದರು.

ರಾಜಣ್ಣ ಬದಲಾವಣೆಯಾಗುತ್ತೆ ಅಂದಿದ್ದಾರೆ, ಇಂಥದ್ದೇ ಬದಲಾವಣೆ ಅಂತಾ ಹೇಳಿಲ್ಲ. ಅನಗತ್ಯವಾಗಿ ಮಾಧ್ಯಮದವರು ಕೆಲ ಊಹೆಗಳನ್ನು ಮಾಡಿಕ್ಕೊಂಡು ಸುದ್ದಿ ಮಾಡಿದರೆ ನಾನೇನು ಮಾಡಲು ಆಗಲ್ಲ ಎಂದು ಹೇಳಿದರು.

📱 ಬ್ರೇಕಿಂಗ್ ನ್ಯೂಸ್ ಬೇಗ ಬೇಕೆ?KannadaDunia App ಡೌನ್‌ಲೋಡ್ ಮಾಡಿ, ತಾಜಾ ಸುದ್ದಿ ಮೊದಲು ಪಡೆಯಿರಿ.
APP ತೆರೆಯಿರಿ

ಇದೇ ವೇಳೆ ರಾಜ್ಯ ಕಾಂಗ್ರೆಸ್ ಉಸ್ತುವಾರಿ ರಣದೀಪ್ ಸಿಂಗ್ ಸುರ್ಜೇವಾಲ ಆಗಮನ ವಿಚಾರವಾಗಿ ಪ್ರತಿಕ್ರಿಯಿಸಿದ ಸಿಎಂ ಸಿದ್ದರಾಮಯ್ಯ, ಸುರ್ಜೇವಾಲ ಬೆಂಗಳೂರಿಗೆ ಬರುತ್ತಿರುವುದು ನಿಜ ಎಂದು ಹೇಳಿದ್ದಾರೆ.

For Latest News Updates, Join Our Whatsapp Community🚩
RELATED ARTICLES

Most Popular