HomeKarnatakaBIG NEWS: ಜನತಾದರ್ಶನದ ವೇಳೆ ಊಟಕ್ಕೆ ಹೋದ ಅಧಿಕಾರಿಗಳು; ಸಿಎಂ ಸಿದ್ದರಾಮಯ್ಯ ಗರಂ

BIG NEWS: ಜನತಾದರ್ಶನದ ವೇಳೆ ಊಟಕ್ಕೆ ಹೋದ ಅಧಿಕಾರಿಗಳು; ಸಿಎಂ ಸಿದ್ದರಾಮಯ್ಯ ಗರಂ

ಬೆಂಗಳೂರು: ಗೃಹ ಕಚೇರಿ ಕೃಷ್ಣಾದಲ್ಲಿ ಮುಖ್ಯಮಂತ್ರಿ ಸಿದ್ದರಾಮಯ್ಯ ಬಿಡುವಿಲ್ಲದೇ ಜನತಾದರ್ಶನ ಕಾರ್ಯಕ್ರಮದಲ್ಲಿ ತೊಡಗಿದ್ದು, ಜನರ ಸಮಸ್ಯೆ, ಅಹವಾಲುಗಳನ್ನು ಸ್ವೀಕರಿಸಿ ಸ್ಥಳದಲ್ಲೇ ಪರಿಹಾರ ನೀಡುತ್ತಿದ್ದಾರೆ.

ಮಧ್ಯಾಹ್ನದ ಊಟದ ಸಮಯವಾಗುತ್ತಿದ್ದಂತೆ ಜನತಾದರ್ಶನದಲ್ಲಿದ್ದ ಅಧಿಕಾರಿಗಳು ಊಟಕ್ಕೆ ತೆರಳುತ್ತಿದ್ದಂತೆ ಸಿಎಂ ಸಿದ್ದರಾಮಯ್ಯ ಅಧಿಕಾರಿಗಳ ವಿರುದ್ದ ಕಿಡಿಕಾರಿದ್ದಾರೆ. ಜನತಾದರ್ಶನದ ವೇಳೆ ಇಲಾಖೆಯೊಂದರ ಮಾಹಿತಿಗೆ ಹುಡುಕಾಟ ನಡೆಸಲಾಗಿದೆ. ಈ ವೇಳೆ ಇಲಾಖೆ ಅಧಿಕಾರಿ ಎಲ್ಲಿ ಎಂದು ಸಿಎಂ ಪ್ರಶ್ನಿಸಿದ್ದಾರೆ. ಸಿಬ್ಬಂದಿಗಳು ಅವರು ಊಟಕ್ಕೆ ಹೋಗಿದ್ದಾರೆ ಎಂದು ಹೇಳುತ್ತಿದ್ದಂತೆ ಗರಂ ಆದ ಸಿಎಂ ಸಿದ್ದರಾಮಯ್ಯ ನಾನೇ ಇಲ್ಲಿ ಹಸಿದುಕೊಂಡು ಕೂತಿದ್ದೇನೆ ಎಂದು ಸಿಟ್ಟಾಗಿದ್ದಾರೆ.

📱 ಬ್ರೇಕಿಂಗ್ ನ್ಯೂಸ್ ಬೇಗ ಬೇಕೆ?KannadaDunia App ಡೌನ್‌ಲೋಡ್ ಮಾಡಿ, ತಾಜಾ ಸುದ್ದಿ ಮೊದಲು ಪಡೆಯಿರಿ.
APP ತೆರೆಯಿರಿ

ಜನತಾದರ್ಶನ ಮುಗಿಯುವವರೆಗೂ ಯಾರೂ ಸ್ಥಳದಿಂದ ಹೊರಗೆ ಹೋಗುವಂತಿಲ್ಲ ಎಂದು ತಾಕೀತು ಮಾಡಿದ್ದಾರೆ. ಸಿಎಂ ತಾಕೀತು ಮಾಡುತ್ತಿದ್ದಂತೆ ಯಾರೂ ಸ್ಥಳದಿಂದ ಹೊರಹೋಗದಂತೆ ಮೈಕ್ ನಲ್ಲಿ ಅನೌನ್ಸ್ ಮಾಡಿದ ಪ್ರಸಂಗ ನಡೆದಿದೆ.

ಇನ್ನು ಸಿಎಂ ಸಿದ್ದರಾಮಯ್ಯ ಜನತಾದರ್ಶನದ ವೇಳೆ ಕುಳಿತ ಜಾಗದಲ್ಲೇ ಮೊಸರನ್ನ ತರಿಸಿ, ಬೇಗನೇ ಊಟ ಮುಗಿಸಿ ಮತ್ತೆ ಜನರ ಅಹವಾಲು ಸ್ವೀಕರಿಸುವಲ್ಲಿ ನಿರತರಾದರು.

For Latest News Updates, Join Our Whatsapp Community🚩
RELATED ARTICLES

Most Popular