HomeKarnatakaBIG NEWS: ಟರ್ಫ್ ಕ್ಲಬ್ ಮೆಂಬರ್ ಶಿಪ್ ಕೊಡಿಸಲು ಸಿದ್ದರಾಮಯ್ಯ 1.30ಕೋಟಿ ಲಂಚ ಪಡೆದಿದ್ದಾರೆ: ಸಿಎಂ...

BIG NEWS: ಟರ್ಫ್ ಕ್ಲಬ್ ಮೆಂಬರ್ ಶಿಪ್ ಕೊಡಿಸಲು ಸಿದ್ದರಾಮಯ್ಯ 1.30ಕೋಟಿ ಲಂಚ ಪಡೆದಿದ್ದಾರೆ: ಸಿಎಂ ವಿರುದ್ಧ ಶೋಭಾ ಕರಂದ್ಲಾಜೆ ಗಂಭೀರ ಆರೋಪ

ಬೆಂಗಳೂರು: ಟರ್ಫ್ ಕ್ಲಬ್ ಮೆಂಬರ್ ಶಿಪ್ ಕೊಡಿಸಲು ಸಿಎಂ ಸಿದ್ದರಾಮಯ್ಯ 1.30ಕೋಟಿ ಲಂಚ ಪಡೆದಿದ್ದಾರೆ ಎಂದು ಕೇಂದ್ರ ಸಚಿವೆ ಶೋಭಾ ಕರಂದ್ಲಾಜೆ ಗಂಭೀರ ಆರೋಪ ಮಾಡಿದ್ದಾರೆ.

ಬೆಂಗಳೂರಿನಲ್ಲಿ ಸುದ್ದಿಗೋಷ್ಠಿ ನಡೆಸಿದ ಸಚಿವೆ ಶೋಭಾ ಕರಂದ್ಲಾಜೆ, ವಿವೇಕಾನಂದ ಎನ್ನುವವರಿಗೆ ಟರ್ಫ್ ಕ್ಲಬ್ ಮೆಂಬರ್ ಶಿಪ್ ಕೊಡಿಸಲು ಸಿದ್ದರಾಮಯ್ಯನವರು 1.30 ಕೋಟಿ ಲಂಚ ಪಡೆದಿದ್ದಾರೆ. ಸಿದ್ದರಾಮಯ್ಯ ಚೆಕ್ ಮೂಲಕ ಈ ಹಣ ಪಡೆದಿದ್ದಾರೆ. ಇದಕ್ಕೆ ಪೊಲೀಸರು ಬಿ ರಿಪೋರ್ಟ್ ಸಲ್ಲಿಸಿದ್ದರು. ಇದಕ್ಕೆ ಕೋರ್ಟ್ ಛೀಮಾರಿ ಹಾಕಿದೆ. ಈ ಬಗ್ಗೆ ತನಿಖೆಯಾಗಬೇಕು ಎಂದು ಆಗ್ರಹಿಸಿದರು.

ಸಿದ್ದರಾಮಯ್ಯ ವಿರುದ್ಧ ಮೂಡಾ ಕೇಸ್ ಮಾತ್ರವಲ್ಲ ಟರ್ಫ್ ಕ್ಲಬ್ ಮೆಂಬರ್ ಶಿಪ್ ಗೆ ಹಣ ಪಡೆದ ವಿಚಾರವೂ ತನಿಖೆಯಾಗಬೇಕು. ಅವರು ಬೇರೆಯವರ ಬಗ್ಗೆ ಮಾತನಾಡುತ್ತಾರೆ. ಆದರೆ ಸ್ವತಃ ಸಿದ್ದರಾಮಯ್ಯ ಒಬ್ಬ ಅಪರಾಧಿ. ತಕ್ಷಣ ಅವರು ಸಿಎಂ ಸ್ಥಾನಕ್ಕೆ ರಾಜೀನಾಮೆ ಕೊಡಬೇಕು ಎಂದು ಕಿಡಿಕಾರಿದರು.

📱 ಬ್ರೇಕಿಂಗ್ ನ್ಯೂಸ್ ಬೇಗ ಬೇಕೆ?KannadaDunia App ಡೌನ್‌ಲೋಡ್ ಮಾಡಿ, ತಾಜಾ ಸುದ್ದಿ ಮೊದಲು ಪಡೆಯಿರಿ.
APP ತೆರೆಯಿರಿ

 

For Latest News Updates, Join Our Whatsapp Community🚩
RELATED ARTICLES

Most Popular