HomeKarnatakaBIG NEWS: ಸಿದ್ದರಾಮಯ್ಯನವ್ರನ್ನ ರಾಜಕೀಯವಾಗಿ ಮುಗಿಸಿದ್ರೆ ಕಾಂಗ್ರೆಸ್ ಮುಗಿಸಿದಂತೆ ಎಂಬ ಭ್ರಮೆಯಲ್ಲಿದ್ದಾರೆ: ವಿಪಕ್ಷ ನಾಯಕರ ವಿರುದ್ಧ...

BIG NEWS: ಸಿದ್ದರಾಮಯ್ಯನವ್ರನ್ನ ರಾಜಕೀಯವಾಗಿ ಮುಗಿಸಿದ್ರೆ ಕಾಂಗ್ರೆಸ್ ಮುಗಿಸಿದಂತೆ ಎಂಬ ಭ್ರಮೆಯಲ್ಲಿದ್ದಾರೆ: ವಿಪಕ್ಷ ನಾಯಕರ ವಿರುದ್ಧ ಸಿಎಂ ಕಿಡಿ

ಬೆಂಗಳೂರು: ರಾಜಕೀಯವಾಗಿ ಇಂತಹ ಹೋರಾಟ ಮಾಡಬೇಕು ಎಂದರೆ ಇನ್ನಷ್ಟು ಜೋಶ್ ಬರುತ್ತದೆ ಎಂದು ವಿಪಕ್ಷ ನಾಯಕರಿಗೆ ಸಿಎಂ ಸಿದ್ದರಾಮಯ್ಯ ಟಾಂಗ್ ನೀಡಿದ್ದಾರೆ.

ಬೆಂಗಳೂರಿನಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಸಿಎಂ ಸಿದ್ದರಾಮಯ್ಯ, ರಾಜಕೀಯವಾಗಿ ಹೋರಾಡಬೇಕಾದರೆ ಜೋಶ್ ಬರುತ್ತದೆ ಎಂದರು. ರಾಜ್ಯಪಾಲರು ಪ್ರಾಸಿಕ್ಯೂಷನ್ ಗೆ ಅನುಮತಿ ನೀಡಿದ್ದರಿಂದ ಕುಗ್ಗಿದ್ದೀರಾ? ಎಂಬ ಸುದ್ದಿಗಾರರ ಪ್ರಶ್ನೆಗೆ ಉತ್ತರಿಸಿದ ಸಿಎಂ, ಕುಗ್ಗಿವುದೂ ಇಲ್ಲ, ಬಗ್ಗುವುದೂ ಇಲ್ಲ, ನಾನೇನೂ ಡಲ್ ಆಗಿಲ್ಲ. ರಾಜಕೀಯವಾಗಿ ಈ ರೀತಿ ಹೋರಾಟ ಮಾಡಬೇಕಾದರೆ ಮತ್ತಷ್ಟು ಜೋಶ್ ಬರುತ್ತದೆ ಎಂದರು.

ನಾನು ಬಡವರ ಪರ ಇರುವುದಕ್ಕೆ, ಗ್ಯಾರಂಟಿ ಯೋಜನೆಗಳನ್ನು ಜಾರಿ ಮಾಡಿದ್ದಕ್ಕೆ ಅವರಿಗೆ ಭಯವಿದೆ. ವಿಪಕ್ಷಗಳಿಗೆ ನನ್ನ ಬಗ್ಗೆ ಭಯ. ಹಾಗಾಗಿ ಇಲ್ಲಸಲ್ಲದ ಆರೊಪ ಮಾಡುತ್ತಿದ್ದಾರೆ. ಸಿದ್ದರಾಮಯ್ಯನವರನ್ನು ರಾಜಕೀಯವಾಗಿ ಮುಗಿಸಿದ್ರೆ, ಕಾಂಗ್ರೆಸ್ ನ್ನೇ ಮುಗಿಸಿದಂತೆ ಎಂಬ ಭ್ರಮೆಯಲ್ಲಿದ್ದಾರೆ. ಅವರ ಭ್ರಮೆ ಈಡೇರುವುದಿಲ್ಲ ಎಂದು ಹೇಳಿದರು.

📱 ಬ್ರೇಕಿಂಗ್ ನ್ಯೂಸ್ ಬೇಗ ಬೇಕೆ?KannadaDunia App ಡೌನ್‌ಲೋಡ್ ಮಾಡಿ, ತಾಜಾ ಸುದ್ದಿ ಮೊದಲು ಪಡೆಯಿರಿ.
APP ತೆರೆಯಿರಿ

For Latest News Updates, Join Our Whatsapp Community🚩
RELATED ARTICLES

Most Popular