HomeKarnatakaಹೋಗ್ಲಿ ಬಿಡು ಎಂದು ಬಿಟ್ಟಿದ್ದೇ ನನಗೆ ಮುಳ್ಳಾಗಿದೆ....ವಿಪಕ್ಷ ನಾಯಕರ ಎಲ್ಲ ಹಳೆ ಕಥೆ ಓಪನ್ ಮಾಡ್ತೀವಿ;...

ಹೋಗ್ಲಿ ಬಿಡು ಎಂದು ಬಿಟ್ಟಿದ್ದೇ ನನಗೆ ಮುಳ್ಳಾಗಿದೆ….ವಿಪಕ್ಷ ನಾಯಕರ ಎಲ್ಲ ಹಳೆ ಕಥೆ ಓಪನ್ ಮಾಡ್ತೀವಿ; ಕಿಡಿಕಾರಿದ ಸಿಎಂ

ಮೈಸೂರು: ತಪ್ಪೇ ಮಾಡದ ನನ್ನ ವಿರುದ್ಧ ಸುಳ್ಳು ಆರೋಪಗಳನ್ನು ಮಾಡುತ್ತಾ ಬೀದಿ ಬೀದಿ ಸುತ್ತಿದ್ದಾರೆ. ಇನ್ಮುಂದೆ ವಿಪಕ್ಷ ನಾಯಕರ ಮೇಲೆ ಯಾವುದೇ ಕರುಣೆ ತೋರಲ್ಲ ಎಂದು ಸಿಎಂ ಸಿದ್ದರಾಮಯ್ಯ ಕಿಡಿಕಾರಿದ್ದಾರೆ.

ಮೈಸೂರಿನಲ್ಲಿ ಮಾತನಾಡಿದ ಸಿಎಂ ಸಿದ್ದರಾಮಯ್ಯ, ನಾನು ಈಗ ಮೊದಲಿನ ಸಿದ್ದರಾಮಯ್ಯ ಅಲ್ಲ, ಇನ್ಮುಂದೆ ವಿಪಕ್ಷದ ಯಾವ ನಾಯಕರ ಮೇಲೂ ಕರುಣೆ ತೋರಲ್ಲ. ಎಲ್ಲರ ಬಗ್ಗೆ ಹೋಗ್ಲಿ ಬಿಡು, ಹೋಗ್ಲಿ ಬಿಡು ಎಂದು ನಾನು ಹೇಳ್ತಿದ್ದೆ. ಅದೇ ನನಗೆ ಈಗ ಮುಳ್ಳಾಗ್ತಿದೆ. ಇನ್ಮುಂದೆ ವಿಪಕ್ಷಗಳ ಎಲ್ಲಾ ನಾಯಕರ ಹಳೇ ಕಥೆಗಳನ್ನು ಓಪನ್ ಮಾಡ್ತೇವೆ ಎಂದು ಗುಡುಗಿದರು.

ತಪ್ಪು ಮಾಡದ ನನ್ನ ಮೇಲೆ ಬೀದಿ ಬೀದಿ ಸುತ್ತಿಕೊಂಡು ಸುಳ್ಳು ಆರೋಪ ಹಬ್ಬಿಸಿ, ಹೆಸರು ಕೆಡಿಸುವ ಕೆಲಸ ಮಾಡಿದ್ದಾರೆ. ಈ ವಿಚಾರದಲ್ಲಿ ನಾನಿನ್ನೂ ತಾಳ್ಮೆಯಿಂದ ಇರಲ್ಲ. ವಿಪಕ್ಷಗಳ ಯಾವ ನಾಯಕರ ಒತ್ತಡಕ್ಕೂ ಮಣಿಯುವ ಪ್ರಶ್ನೆ ಇಲ್ಲ ಎಂದು ಹೇಳಿದ್ದಾರೆ.

📱 ಬ್ರೇಕಿಂಗ್ ನ್ಯೂಸ್ ಬೇಗ ಬೇಕೆ?KannadaDunia App ಡೌನ್‌ಲೋಡ್ ಮಾಡಿ, ತಾಜಾ ಸುದ್ದಿ ಮೊದಲು ಪಡೆಯಿರಿ.
APP ತೆರೆಯಿರಿ

For Latest News Updates, Join Our Whatsapp Community🚩
RELATED ARTICLES

Most Popular