BIG NEWS: ಸಿಎಂ ಸಿದ್ದರಾಮಯ್ಯ ಆಧುನಿಕ ತುಘಲಕ್ ಎಂದು ಕಿಡಿಕಾರಿದ ಬಿಜೆಪಿ

ಬೆಂಗಳೂರು: ಸಿಎಂ ಸಿದ್ದರಾಮಯ್ಯ ನೇತೃತ್ವದ ರಾಜ್ಯ ಸಚಿವ ಸಂಪುಟ ಸಭೆಯಲ್ಲಿ ಕೈಗೊಂಡ ಕೆಲ ನಿರ್ಣಯಗಳ ಬಗ್ಗೆ ಕಿಡಿಕಾರಿರುವ ರಾಜ್ಯ ಬಿಜೆಪಿ ಅಧುನಿಕ ತುಘಲಕ್ ಸಿದ್ದರಾಮಯ್ಯ ಆಡಳಿತದಲ್ಲಿ ಇದನ್ನೆಲ್ಲ ನೋಡಬಹುದು ಎಂದು ವ್ಯಂಗ್ಯವಾಡಿದೆ.

ದೇಶದಲ್ಲಿ ಮಾಹಿತಿ ಹಕ್ಕು ಕಾಯ್ದೆಯನ್ನು ಜಾರಿಗೆ ತಂದಿದ್ದೇವೆ ಎಂದು ಬಡಾಯಿ ಕೊಚ್ಚಿಕೊಳ್ಳುತ್ತಿದ್ದ ಕಾಂಗ್ರೆಸ್ ವರಿಷ್ಠರ ಮರ್ಯಾದೆ ಹರಾಜು ಹಾಕಲು ರಾಜ್ಯ ಕಾಂಗ್ರೆಸ್ ಸರ್ಕಾರ ಸದಾ “ಸಿದ್ದ” ಎಂದು ಟೀಕಿಸಿದೆ.

ಕರ್ನಾಟಕದ ಪ್ರಥಮ ಪ್ರಜೆ ಘನತೆವೆತ್ತ ರಾಜ್ಯಪಾಲರು ಕೇಳಿದ ಮಾಹಿತಿಯನ್ನು ಒದಗಿಸಲು ಮುಖ್ಯ ಕಾರ್ಯದರ್ಶಿಗಳಿಗೆ ಸಂಪುಟದ ಅನುಮತಿ ಬೇಕಂತೆ!!
ಮೊಹಮ್ಮದ್ ಬಿನ್ ತುಘಲಕ್ ಆಡಳಿತದಲ್ಲಿ ಮಾತ್ರ ಕಾಣಬಹುದಾಗಿದ್ದ ನಿರ್ಧಾರಗಳು, ಆಧುನಿಕ ತುಘಲಕ್ ಸಿದ್ದರಾಮಯ್ಯ ಅವರ ಆಡಳಿತದಲ್ಲಿ ಕಾಣ ಸಿಗುತ್ತಿವೆ ಎಂದು ವಾಗ್ದಾಳಿ ನಡೆಸಿದೆ.

Share This Article

Latest News

ಬಸನಗೌಡ ಪಾಟೀಲ್ ಯತ್ನಾಳ್ ಉಚ್ಚಾಟನೆಯಿಂದ ಬಿಜೆಪಿಗೆ ಹಿನ್ನಡೆಯಾಗುತ್ತದಾ ?

View Results

Loading ... Loading ...

Most Read