HomeKarnatakaಎಫ್ಐಆರ್ ರಿಜಿಸ್ಟರ್ ಆದರೂ ರಾಜೀನಾಮೆ ಕೊಡದೇ ಸಿದ್ದರಾಮಯ್ಯ ಮೊಂಡುವಾದ: ಅರೆಸ್ಟ್ ಆದರೂ ಇದೇ ಉದ್ಧಟತನ ತೋರುತ್ತೀರಾ?...

ಎಫ್ಐಆರ್ ರಿಜಿಸ್ಟರ್ ಆದರೂ ರಾಜೀನಾಮೆ ಕೊಡದೇ ಸಿದ್ದರಾಮಯ್ಯ ಮೊಂಡುವಾದ: ಅರೆಸ್ಟ್ ಆದರೂ ಇದೇ ಉದ್ಧಟತನ ತೋರುತ್ತೀರಾ? ಬಿಜೆಪಿ ಪ್ರಶ್ನೆ

ಬೆಂಗಳೂರು: A1 ಆರೋಪಿ ಸಿದ್ದರಾಮಯ್ಯ ವಿರುದ್ಧ ಮೈಸೂರು ಲೋಕಾಯುಕ್ತ ಪೊಲೀಸ್ ಠಾಣೆಯಲ್ಲಿ ಕೊನೆಗೂ ಎಫ್ಐಆರ್ ದಾಖಲಾಗಿದೆ. ಆದರೂ ಸಿಎಂ ಸಿದ್ದರಾಮಯ್ಯ ತಾನು ರಾಜೀನಾಮೆ ಕೊಡುವುದಿಲ್ಲ ಎಂದು ಮತ್ತೆ ಮತ್ತೆ ಪುನರುಚ್ಛರಿಸುತ್ತಿದ್ದಾರೆ. ಈ ಬಗ್ಗೆ ರಾಜ್ಯ ಬಿಜೆಪಿ ಕಿಡಿಕಾರಿದೆ.

ಮುಡಾ ಹಗರಣದಲ್ಲಿ A2 ಆಗಿ A1 ಆರೋಪಿಯ ಪತ್ನಿ ಬಿ.ಎಂ.ಪಾರ್ವತಿ, A3 ಆಗಿ A1 ಆರೋಪಿಯ ಭಾಮೈದ ಮಲ್ಲಿಕಾರ್ಜುನ ಸ್ವಾಮಿ ಹಾಗೂ A4 ಜಮೀನು ಮಾರಾಟ ಮಾಡಿದ ದೇವರಾಜು ವಿರುದ್ಧ ಪ್ರಕರಣ ದಾಖಲಾಗಿದೆ.

ಎಫ್ಐಆರ್ ರಿಜಿಸ್ಟರ್ ಆದಮೇಲೂ ರಾಜೀನಾಮೆ ನೀಡದೆ ಮೊಂಡುವಾದ ಮಾಡುತ್ತಿರುವ A1 ಆರೋಪಿ ಸಿದ್ದರಾಮಯ್ಯ ಅವರೇ, ಬಂಧನಕ್ಕೆ ಒಳಗಾದರೂ ಇದೇ ಉದ್ದಟತನ ತೋರುತ್ತೀರಾ? ಎಂದು ಪ್ರಶ್ನಿಸಿದೆ.

📱 ಬ್ರೇಕಿಂಗ್ ನ್ಯೂಸ್ ಬೇಗ ಬೇಕೆ?KannadaDunia App ಡೌನ್‌ಲೋಡ್ ಮಾಡಿ, ತಾಜಾ ಸುದ್ದಿ ಮೊದಲು ಪಡೆಯಿರಿ.
APP ತೆರೆಯಿರಿ

For Latest News Updates, Join Our Whatsapp Community🚩
RELATED ARTICLES

Most Popular