ತುಮಕೂರು: ಆರೋಪಿಯ ಮೊಬೈಲ್ ಪಡೆದುಕೊಂಡು ಆನ್ಲೈನ್ ನಲ್ಲಿ ಬೆಟ್ಟಿಂಗ್ ಆಡಿದ ಸಬ್ ಇನ್ಸ್ಪೆಕ್ಟರ್ ಅಮಾನತುಗೊಂಡಿದ್ದಾರೆ.
ತುಮಕೂರು ಜಿಲ್ಲೆ ತುರುವೇಕೆರೆ ಸಬ್ ಇನ್ಸ್ಪೆಕ್ಟರ್ ಸಂಗಮೇಶ ಮೇಟಿ ಅಮಾನತುಗೊಂಡವರು. ಪ್ರಕರಣವೊಂದರಲ್ಲಿ ತಪ್ಪಿಸ್ಥಸ್ಥನಾಗಿದ್ದ ಆರೋಪಿಯನ್ನು ಜೈಲಿಗೆ ಬಿಡುವಾಗ ಆತನ ಮೊಬೈಲ್ ನಲ್ಲಿ ಫೋನ್ ಪೇ ಪಾಸ್ವರ್ಡ್ ಪಡೆದು ಆನ್ಲೈನ್ ನಲ್ಲಿ ಬೆಟ್ಟಿಂಗ್ ಆಡಿದ್ದಾರೆ.
ಈ ಬಗ್ಗೆ ಆರೋಪಿ ಹಿರಿಯ ಅಧಿಕಾರಿಗಳಿಗೆ ದೂರು ನೀಡಿ, ಸಬ್ ಇನ್ ಸ್ಪೆಕ್ಟರ್ ಸಂಗಮೇಶ ಮೇಟಿ ನನ್ನ ಮೊಬೈಲ್ ನಲ್ಲಿ ಬೆಟ್ಟಿಂಗ್ ಆಡಿ ಖಾತೆಯಲ್ಲಿದ್ದ 95 ಸಾವಿರ ರೂ. ದುರುಪಯೋಗ ಮಾಡಿಕೊಂಡಿದ್ದಾರೆ ಎಂದು ದೂರು ನೀಡಿದ್ದು, ತನಿಖೆ ನಡೆಸಿದಾಗ ಆರೋಪ ಸಾಬೀತಾಗಿದೆ. ಈ ಹಿನ್ನೆಲೆಯಲ್ಲಿ ಕ್ರಮಕ್ಕೆ ಹಿರಿಯ ಅಧಿಕಾರಿಗಳು ಸೂಚನೆ ನೀಡಿದ್ದಾರೆ. ಅಂತೆಯೇ ಸಬ್ ಇನ್ಸ್ಪೆಕ್ಟರ್ ಸಂಗಮೇಶ ಮೇಟಿ ಅವರನ್ನು ಜಿಲ್ಲಾ ಪೊಲೀಸ್ ಅಧೀಕ್ಷಕ ಅಶೋಕ್ ಅಮಾನತು ಮಾಡಿದ್ದಾರೆ.