HomeLatest Newsತನ್ನ ಕೆಟ್ಟ ಆಟದಿಂದ ನಾಯಕತ್ವ ಕಳೆದುಕೊಂಡ ವಿಶ್ವಕಪ್ ಗೆಲ್ಲಿಸಿದ ಸೂರ್ಯಕುಮಾರ್ ಯಾದವ್: ವಿಶ್ವಕಪ್ ಗೆದ್ದ ಭಾರತ...

ತನ್ನ ಕೆಟ್ಟ ಆಟದಿಂದ ನಾಯಕತ್ವ ಕಳೆದುಕೊಂಡ ವಿಶ್ವಕಪ್ ಗೆಲ್ಲಿಸಿದ ಸೂರ್ಯಕುಮಾರ್ ಯಾದವ್: ವಿಶ್ವಕಪ್ ಗೆದ್ದ ಭಾರತ ತಂಡದಲ್ಲೇ ಇರದಿದ್ದ ಆಟಗಾರನಿಗೆ ಸಿಕ್ತು ನಾಯಕತ್ವ!

19ನೇ ಆವೃತ್ತಿಯ ಇಂಡಿಯನ್ ಪ್ರೀಮಿಯರ್ ಲೀಗ್ ಮುಕ್ತಾಯವಾದ ಬೆನ್ನಲ್ಲೇ ಸದ್ಯ ಕ್ರಿಕೆಟ್ ಪ್ರೇಮಿಗಳ ಚಿತ್ತ ಹಾಗೂ ಬಿಸಿಸಿಐ ಆದ್ಯತೆ ಸದ್ಯ ಅಂತಾರಾಷ್ಟ್ರೀಯ ಕ್ರಿಕೆಟ್‌ನತ್ತ ತಿರುಗಿದೆ.

ಐಪಿಎಲ್ ಮುಗಿಯುತ್ತಿದ್ದಂತೆ ಭಾರತ ಟಿ ಟ್ವೆಂಟಿ ನಾಯಕತ್ವದ ವಿಚಾರ ಮುನ್ನೆಲೆಗೆ ಬಂದಿದ್ದು, ಬಿಸಿಸಿಐ ಇದರಲ್ಲಿ ಬದಲಾವಣೆ ತರಲು ಮುಂದಾಗಿದೆ ಎನ್ನಲಾಗಿದೆ. ಬಲ್ಲ ಮೂಲಗಳ ಮಾಹಿತಿ ಪ್ರಕಾರ ಬಿಸಿಸಿಐ ಆಯ್ಕೆಗಾರರ ಸಮಿತಿ ಈಗಾಗಲೇ ಕೋಚ್ ಗೌತಮ್ ಗಂಭೀರ್ ಜತೆ ಚರ್ಚೆ ನಡೆಸಿ ಸೂರ್ಯಕುಮಾರ್ ಯಾದವ್ ಬದಲಿಗೆ ಶ್ರೇಯಸ್ ಐಯ್ಯರ್ ಅವರನ್ನು ನಾಯಕನನ್ನಾಗಿ ನೇಮಿಸಲು ಸಜ್ಜಾಗಿದೆ ಎನ್ನಲಾಗಿದೆ.

ಕಳೆದ ಫೆಬ್ರವರಿ ಹಾಗೂ ಮಾರ್ಚ್ ತಿಂಗಳಿನಲ್ಲಿ ನಡೆದ ಟಿ ಟ್ವೆಂಟಿ ವಿಶ್ವಕಪ್ ಟೂರ್ನಿಯಲ್ಲಿ ಭಾರತ ಸೂರ್ಯಕುಮಾರ್ ಯಾದವ್ ನಾಯಕತ್ವದಡಿಯಲ್ಲಿ ಟ್ರೋಫಿ ಗೆದ್ದು ಚಾಂಪಿಯನ್ ಆಯಿತಾದರೂ ನಾಯಕ ಸೂರ್ಯಕುಮಾರ್ ಯಾದವ್ ಕೊಡುಗೆ ಹೆಚ್ಚೇನೂ ಇರಲಿಲ್ಲ. ತಂಡದ ಬ್ಯಾಟಿಂಗ್ ವಿಭಾಗದ ಅಪಾರ ಕೊಡುಗೆಯಿಂದ ಭಾರತಕ್ಕೆ ಕಪ್ ಒಲಿದುಬಂದಿತ್ತು.

📱 ಬ್ರೇಕಿಂಗ್ ನ್ಯೂಸ್ ಬೇಗ ಬೇಕೆ?KannadaDunia App ಡೌನ್‌ಲೋಡ್ ಮಾಡಿ, ತಾಜಾ ಸುದ್ದಿ ಮೊದಲು ಪಡೆಯಿರಿ.
APP ತೆರೆಯಿರಿ

ಇದನ್ನೇ ಗಮನದಲ್ಲಿಟ್ಟುಕೊಂಡು ಸೂರ್ಯಕುಮಾರ್ ಯಾದವ್ ಫಾರ್ಮ್ ಮತ್ತು ಭಾರತ ಕ್ರಿಕೆಟ್‌ನ ಭವಿಷ್ಯವನ್ನು ಗಣನೆಗೆ ತೆಗೆದುಕೊಂಡು ಈ ನಿರ್ಧಾರವನ್ನು ಬಿಸಿಸಿಐ ಕೈಗೊಂಡಿದ್ದು, ಶೀಘ್ರದಲ್ಲೇ ಸೂರ್ಯಗೆ ಈ ವಿಷಯವನ್ನು ತಿಳಿಸಲಾಗುವುದು ಎನ್ನಲಾಗಿದೆ.

ಇನ್ನು ಸೂರ್ಯಕುಮಾರ್ ಯಾದವ್ ಬಳಿಕ ಭಾರತ ತಂಡವನ್ನು ಯಾರು ಮುನ್ನಡೆಸಲಿದ್ದಾರೆ ಎಂಬ ಪ್ರಶ್ನೆ ಇದೇ ವೇಳೆ ಎದ್ದಿದ್ದು, ಬಿಸಿಸಿಐ ಆಯ್ಕೆಗಾರರ ಸಮಿತಿ ಟಿ ಟ್ವೆಂಟಿ ವಿಶ್ವಕಪ್ ಗೆದ್ದ ಭಾರತ ತಂಡದಲ್ಲಿ ಸ್ಥಾನವನ್ನೇ ಪಡೆದುಕೊಳ್ಳದಿದ್ದ ಶ್ರೇಯಸ್ ಐಯ್ಯರ್ ಕಡೆ ಬೊಟ್ಟು ಮಾಡಿದೆ.

2024ರಲ್ಲಿ ಕೊಲ್ಕತ್ತಾ ನೈಟ್ ರೈಡರ್ಸ್ ತಂಡವನ್ನು ಚಾಂಪಿಯನ್ ಮಾಡಿ ಕಳೆದ ವರ್ಷ ಪಂಜಾಬ್ ಕಿಂಗ್ಸ್ ತಂಡವನ್ನು ಫೈನಲ್‌ವರೆಗೆ ಕೊಂಡೊಯ್ದ ಯಶಸ್ವಿ ಐಪಿಎಲ್ ನಾಯಕ ಶ್ರೇಯಸ್ ಐಯ್ಯರ್‌ಗೆ ನಾಯಕನ ಪಟ್ಟ ಒಲಿದು ಬಂದಿದೆ.

For Latest News Updates, Join Our Whatsapp Community🚩
RELATED ARTICLES

LEAVE A REPLY

Please enter your comment!
Please enter your name here

Most Popular