HomeKarnatakaಗ್ಯಾರಂಟಿ ಯೋಜನೆಗಳನ್ನು ರದ್ದು ಮಾಡಲು ರಾಜ್ಯ ಸರ್ಕಾರ ಹುನ್ನಾರ ನಡೆಸಿದೆ: ಶ್ರೀರಾಮುಲು ಆರೋಪ

ಗ್ಯಾರಂಟಿ ಯೋಜನೆಗಳನ್ನು ರದ್ದು ಮಾಡಲು ರಾಜ್ಯ ಸರ್ಕಾರ ಹುನ್ನಾರ ನಡೆಸಿದೆ: ಶ್ರೀರಾಮುಲು ಆರೋಪ

ಬೆಂಗಳೂರು: ಗೃಹಲಕ್ಷ್ಮೀ ಯೋಜನೆ ಪರಿಷ್ಕರಣೆ ಹೆಸರಲ್ಲಿ ರಾಜ್ಯ ಸರ್ಕಾರ ಗ್ಯಾರಂಟಿ ಯೋಜನೆ ರದ್ದು ಮಾಡುವ ಹುನ್ನಾರ ನಡೆಸಿದೆ ಎಂದು ಮಾಜಿ ಸಚಿವ ಶ್ರೀರಾಮುಲು ಆರೋಪಿಸಿದ್ದಾರೆ.

ಬೆಂಗಳೂರಿನಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಶ್ರೀರಾಮುಲು, ಗೃಹಲಕ್ಷ್ಮಿ ಫಲಾನುಭವಿಗಳ ಪಟ್ಟಿಗೆ ಕತ್ತರಿ ಹಾಕಿರೋ ವಿಚಾರಕ್ಕೆ ಪ್ರತಿಕ್ರಿಯಿಸಿ, ಸಿಎಂ ಡಿ.ಕೆ ಶಿವಕುಮಾರ್ ಅವರು ಗ್ಯಾರಂಟಿ ವಿಚಾರದಲ್ಲಿ ಪರಿಷ್ಕಣೆ ಮಾಡೋ ತೀರ್ಮಾನ ಮಾಡಿದ್ದಾರೆ‌. ಮುಂದಿನ ದಿನಗಳಲ್ಲಿ ಗ್ಯಾರಂಟಿ ಯೋಜನೆ ಬಂದ್ ಮಾಡೋ ಹುನ್ನಾರ ಈ ಸಿಎಂ ಮಾಡಿದ್ದಾರೆ ಎಂದು ಹೇಳಿದರು.

ಡಿ.ಕೆ ಶಿವಕುಮಾರ್ ಅವರಿಗೆ ಏನ್ ಹೇಳಬೇಕೋ ಗೊತ್ತಾಗ್ತಿಲ್ಲ. ಸಿದ್ದರಾಮಯ್ಯ ಕೊಟ್ಟ ಯೋಜನೆ ವಿರುದ್ಧ ಇದ್ದಾರಾ ಅಂತ ಸ್ಪಷ್ಟನೆ ಕೊಟ್ಟಿಲ್ಲ. ಗ್ಯಾರಂಟಿ ಯೋಜನೆಯಲ್ಲಿ ಮೃತರ ಹೆಸರಿಗೆ ಹೋಗಿದೆ ಅಂತಾರೆ. ಸಿದ್ದರಾಮಯ್ಯ ಸರ್ಕಾರ ಸರಿ ಇರಲಿಲ್ಲ ಅಂತ ಡಿಕೆಶಿ ಹೇಳೋಕೆ ಹೊರಟಿದ್ದಾರಾ ಗೊತ್ತಿಲ್ಲ. ಗ್ಯಾರಂಟಿ ಯೋಜನೆ ನಿಲ್ಲಿಸಬೇಕಾ? ಎಂಬ ಗೊಂದಲದಲ್ಲಿ ಡಿ.ಕೆಶಿವಕುಮಾರ್ ಇದ್ದಾರೆ ಎಂದು ಕಿಡಿಕಾರಿದರು.

📱 ಬ್ರೇಕಿಂಗ್ ನ್ಯೂಸ್ ಬೇಗ ಬೇಕೆ?KannadaDunia App ಡೌನ್‌ಲೋಡ್ ಮಾಡಿ, ತಾಜಾ ಸುದ್ದಿ ಮೊದಲು ಪಡೆಯಿರಿ.
APP ತೆರೆಯಿರಿ

ಇವರು ಸುಳ್ಳು ಹೇಳಿ ಅಧಿಕಾರಕ್ಕೆ ಬಂದಿದ್ದಾರೆ. ಎಲ್ಲಾ ಗ್ಯಾರಂಟಿ ಕೊಡ್ತೀವಿ ಅಂತ ಹೇಳಿ ಎಲ್ಲರಿಗೂ ಕೊಡ್ತೀವಿ ಅಂದರು. ಕಾಕಾ ಪಾಟೀಲ್, ಮಹದೇವಪ್ಪಗೆ ಫ್ರೀ ಅಂದು ಅಧಿಕಾರಕ್ಕೆ ಬಂದು ಇವತ್ತು ಜನರಿಗೆ ಸುಳ್ಳು ಹೇಳಿ ಅಧಿಕಾರಕ್ಕೆ ಬಂದಿದ್ದಾರೆ. ಜನರು ಗ್ಯಾರಂಟಿ ಕೊಡಿ ಅಂತ ಕೇಳಲಿಲ್ಲ. ನಿಮ್ಮ ಸ್ವಾರ್ಥಕ್ಕೆ ಗ್ಯಾರಂಟಿ ತಂದ್ರಿ. ಇವತ್ತು ಪರಿಷ್ಕಣೆ ಹೆಸರಿನಲ್ಲಿ ಗ್ಯಾರಂಟಿ ಬಂದ್ ಮಾಡೋಕೆ ಹೊರಟಿದ್ದೀರಾ? ನೀವು ರಾಜ್ಯದ ಮಹಿಳೆಯರ ಮುಂದೆ ಕ್ಷಮೆ ಯಾಚನೆ ಮಾಡಬೇಕು ಅಂತ ಆಗ್ರಹ ಮಾಡಿದ್ರು.

ಇವರು ಸುಳ್ಳು ಹೇಳಿ ಅಧಿಕಾರಕ್ಕೆ ಬಂದಿದ್ದಾರೆ. ಎಲ್ಲಾ ಗ್ಯಾರಂಟಿ ಕೊಡ್ತೀವಿ ಅಂತ ಹೇಳಿ ಎಲ್ಲರಿಗೂ ಕೊಡ್ತೀವಿ ಅಂದರು. ಕಾಕಾ ಪಾಟೀಲ್, ಮಹದೇವಪ್ಪಗೆ ಫ್ರೀ ಅಂದು ಅಧಿಕಾರಕ್ಕೆ ಬಂದು ಇವತ್ತು ಜನರಿಗೆ ಸುಳ್ಳು ಹೇಳಿ ಅಧಿಕಾರಕ್ಕೆ ಬಂದಿದ್ದಾರೆ. ಜನರು ಗ್ಯಾರಂಟಿ ಕೊಡಿ ಅಂತ ಕೇಳಲಿಲ್ಲ. ನಿಮ್ಮ ಸ್ವಾರ್ಥಕ್ಕೆ ಗ್ಯಾರಂಟಿ ತಂದ್ರಿ. ಇವತ್ತು ಪರಿಷ್ಕಣೆ ಹೆಸರಿನಲ್ಲಿ ಗ್ಯಾರಂಟಿ ಬಂದ್ ಮಾಡೋಕೆ ಹೊರಟಿದ್ದೀರಾ? ನೀವು ರಾಜ್ಯದ ಮಹಿಳೆಯರ ಮುಂದೆ ಕ್ಷಮೆ ಯಾಚನೆ ಮಾಡಬೇಕುಎಂದು ಆಗ್ರಹಿಸಿದರು.

For Latest News Updates, Join Our Whatsapp Community🚩
RELATED ARTICLES

LEAVE A REPLY

Please enter your comment!
Please enter your name here

Most Popular