ದಕ್ಷಿಣ ಭಾರತ ಹಾಗೂ ಬಾಲಿವುಡ್ ಚಿತ್ರರಂಗದಲ್ಲಿ ತಮ್ಮದೇ ಆದ ಛಾಪು ಮೂಡಿಸಿರುವ ನಟಿ ಮತ್ತು ಮಾಡೆಲ್ ಶ್ರದ್ಧಾ ದಾಸ್ ತಮ್ಮ ಹೊಸ ಫೋಟೋಶೂಟ್ ಮೂಲಕ ಅಂತರ್ಜಾಲದಲ್ಲಿ ಧೂಳೆಬ್ಬಿಸಿದ್ದಾರೆ. ಪ್ರತಿಯೊಂದು ಲುಕ್‌ನಲ್ಲೂ ಸೈ ಎನಿಸಿಕೊಳ್ಳುವ ಈ ಸುಂದರಿ, ಇದೀಗ ತಮ್ಮ ಇನ್‌ಸ್ಟಾಗ್ರಾಮ್ ಖಾತೆಯಲ್ಲಿ ಹಂಚಿಕೊಂಡಿರುವ ನೂತನ ಫೋಟೋಗಳು ಸೋಷಿಯಲ್ ಮೀಡಿಯಾದಲ್ಲಿ ಸಕ್ಕತ್ ವೈರಲ್ ಆಗುತ್ತಿವೆ.
ಸೀರೆಯುಟ್ಟು ಅತ್ಯಂತ ಗ್ಲಾಮರಸ್ ಹಾಗೂ ಹಾಟ್ ಆಗಿ ಕ್ಯಾಮೆರಾಗೆ ಪೋಸ್ ನೀಡಿರುವ ಶ್ರದ್ಧಾ ದಾಸ್ ಅವರ ಲುಕ್‌ಗೆ ಅಭಿಮಾನಿಗಳು ಮರುಳಾಗಿದ್ದಾರೆ. ನಟಿಯ ಸೌಂದರ್ಯ ಹಾಗೂ ಕಿಲ್ಲರ್ ಲುಕ್‌ಗೆ ನೆಟ್ಟಿಗರು ಫಿದಾ ಆಗಿದ್ದು, ಲೈಕ್ಸ್ ಹಾಗೂ ಕಾಮೆಂಟ್ಸ್‌ಗಳ ಸುರಿಮಳೆ ಗೈಯುತ್ತಿದ್ದಾರೆ. ಸೀರೆಯಲ್ಲೂ ಇಷ್ಟೊಂದು ಬೋಲ್ಡ್ ಆಗಿ ಕಾಣಿಸಿಕೊಳ್ಳಲು ಶ್ರದ್ಧಾ ಅವರಿಂದ ಮಾತ್ರ ಸಾಧ್ಯ ಎಂದು ಹಲವರು ಕಾಮೆಂಟ್ ಮಾಡುತ್ತಿದ್ದಾರೆ.
2008 ರಲ್ಲಿ ತೆರೆಕಂಡ ತೆಲುಗಿನ ‘ಸಿದ್ದು ಫ್ರಮ್ ಶ್ರೀಕಾಕುಳಂ’ ಚಿತ್ರದ ಮೂಲಕ ಚಿತ್ರರಂಗಕ್ಕೆ ಪಾದಾರ್ಪಣೆ ಮಾಡಿದ ಶ್ರದ್ಧಾ ದಾಸ್, ತೆಲುಗು ಮತ್ತು ಹಿಂದಿ ಸೇರಿದಂತೆ ಸುಮಾರು ಆರು ಭಾಷೆಗಳ ಚಿತ್ರರಂಗದಲ್ಲಿ ನಟಿಸಿ ಸೈ ಎನಿಸಿಕೊಂಡಿದ್ದಾರೆ. ತಮ್ಮ ವಿಭಿನ್ನ ಪಾತ್ರಗಳು ಹಾಗೂ ಸೋಶಿಯಲ್ ಮೀಡಿಯಾ ಪೋಸ್ಟ್‌ಗಳ ಮೂಲಕ ಸದಾ ಸುದ್ದಿಯಲ್ಲಿರುವ ಈ ನಟಿ, ಈಗ ಮತ್ತೆ ತಮ್ಮ ದೇಶಿ ಅವತಾರದಲ್ಲಿ ಬೋಲ್ಡ್ ಲುಕ್ ನೀಡಿ ಅಭಿಮಾನಿಗಳ ಗಮನ ಸೆಳೆದಿದ್ದಾರೆ.

