HomeLatest Newsಪಹಲ್ಗಾಮ್ ದಾಳಿ ಬಗ್ಗೆ ಕೆಟ್ಟದಾಗಿ ವಿಡಿಯೋ ಹಾಕಿದ್ದ ವ್ಯಕ್ತಿಯ ಅಂಗಡಿ ಧ್ವಂಸ

ಪಹಲ್ಗಾಮ್ ದಾಳಿ ಬಗ್ಗೆ ಕೆಟ್ಟದಾಗಿ ವಿಡಿಯೋ ಹಾಕಿದ್ದ ವ್ಯಕ್ತಿಯ ಅಂಗಡಿ ಧ್ವಂಸ

ಯಾದಗಿರಿ: ಕಾಶ್ಮೀರದ ಪಹಲ್ಗಾಮ್ ನಲ್ಲಿ ನಡೆದ ಉಗ್ರರ ದಾಳಿಯಲ್ಲಿ ಧರ್ಮ ಕೇಳಿ ಹತ್ಯೆ ಮಾಡಿಲ್ಲ ಎನ್ನುವ ಅರ್ಥ ಬರುವ ರೀತಿ ಹೇಳಿಕೆ ನೀಡಿದ್ದ ಮೃತ ಭರತ್ ಪತ್ನಿಯ ಹೇಳಿಕೆಯ ವಿಡಿಯೋ ತುಣುಕನ್ನು ಸ್ಟೇಟಸ್ ಹಾಕಿಕೊಂಡಿದ್ದ ವ್ಯಕ್ತಿಯ ಎಗ್ ರೈಸ್ ಅಂಗಡಿಯನ್ನು ಯುವಕರ ಗುಂಪು ಧ್ವಂಸ ಮಾಡಿದೆ.

ಯಾದಗಿರಿ ಜಿಲ್ಲೆಯ ರಾಜನಕೋಳೂರು ಗ್ರಾಮದ ಮೀರ್ ಸಾಬ್ ಸೇರಿದಂತೆ ಮೂವರ ವಿರುದ್ಧ ಕೊಡೇಕಲ್ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ. ಘಟನೆಯಿಂದ ಆಕ್ರೋಶಗೊಂಡ ರಾಜನಕೋಡೂರು ಗ್ರಾಮದ ಕೆಲವು ಯುವಕರು ಶನಿವಾರ ರಾತ್ರಿ ಎಗ್ ರೈಸ್ ಗಾಡಿಯನ್ನು ಧ್ವಂಸ ಮಾಡಿದ್ದಾರೆ.

ರಾಜನಕೋಳೂರು ಗ್ರಾಮದ ಹೆದ್ದಾರಿ ಪಕ್ಕದಲ್ಲಿ ಮೀರ್ ಸಾಬ್ ಎಗ್ ರೈಸ್ ಅಂಗಡಿ ಇಟ್ಟುಕೊಂಡಿದ್ದ. ಮೂರು ದಿನಗಳ ಹಿಂದೆ ಸಾಮಾಜಿಕ ಜಾಲತಾಣದಲ್ಲಿ ವಿಡಿಯೋ ಹಂಚಿಕೊಂಡಿದ್ದ. ದೊಡ್ಡವರು ಇದನ್ನು ನೋಡಿ ತಿಳಿದುಕೊಳ್ಳಿ ಎಂಬ ವಾಕ್ಯಗಳನ್ನು ಬರೆದು ಸಮಾಜದಲ್ಲಿ ಅಶಾಂತಿ ಮೂಡಿಸುವ ಪೋಸ್ಟ್ ಹಾಕಿದ್ದ. ಉಳಿದವರು ಇದನ್ನು ತಮ್ಮ ಖಾತೆಗಳಲ್ಲಿ ಹಂಚಿಕೊಂಡಿದ್ದರು.

📱 ಬ್ರೇಕಿಂಗ್ ನ್ಯೂಸ್ ಬೇಗ ಬೇಕೆ?KannadaDunia App ಡೌನ್‌ಲೋಡ್ ಮಾಡಿ, ತಾಜಾ ಸುದ್ದಿ ಮೊದಲು ಪಡೆಯಿರಿ.
APP ತೆರೆಯಿರಿ

For Latest News Updates, Join Our Whatsapp Community🚩
niranjan
niranjan
Niranjan working in media filed from 24 years. He worked in Hubballi Udayavani and local newspapers in Shivamogga. ನಿರಂಜನ ಮೂರ್ತಿ ಎಚ್.ಸಿ. 24 ವರ್ಷಗಳಿಂದ ಮಾಧ್ಯಮ ಕ್ಷೇತ್ರದಲ್ಲಿದ್ದಾರೆ. ಎಂಎ ಕನ್ನಡ, ಪಿಜಿ ಡಿಪ್ಲೊಮಾ ಇನ್ ಜರ್ನಲಿಸಂ ವ್ಯಾಸಂಗ ಮಾಡಿದ್ದಾರೆ. ಶಿವಮೊಗ್ಗದ ಎಚ್ಚರಿಕೆ, ನಮ್ಮನಾಡು, ಜೈ ಕರುನಾಡು, ನುಡಿಗಿಡ, ಕ್ರಾಂತಿ ಭಗತ್ ಸ್ಥಳೀಯ ಪತ್ರಿಕೆಗಳಲ್ಲಿ ವರದಿಗಾರನಾಗಿ, ಹುಬ್ಬಳ್ಳಿಯ ಉದಯವಾಣಿಯಲ್ಲಿ ಉಪ ಸಂಪಾದಕರಾಗಿ ಕಾರ್ಯ ನಿರ್ವಹಣೆ ಮಾಡಿದ್ದಾರೆ.
RELATED ARTICLES

Most Popular