ರೀಲ್ಸ್ ಮಾಡಲು ಹೋಗಿ ಯುವತಿಯೋರ್ವಳು ನದಿಯಲ್ಲಿ ಕೊಚ್ಚಿಕೊಂಡು ಹೋಗಿದ್ದು, ಈ ವೀಡಿಯೋ ಸೋಶಿಯಲ್ ಮೀಡಿಯಾದಲ್ಲಿ ವೈರಲ್ ಆಗಿದೆ.
ಇತ್ತೀಚಿನ ದಿನಗಳಲ್ಲಿ ಜನರು ಸೋಶಿಯಲ್ ಮೀಡಿಯಾದಲ್ಲಿ ವೈರಲ್ ಆಗುವುದಕ್ಕೆ ಎಷ್ಟು ವ್ಯಸನಿಯಾಗಿದ್ದಾರೆಂದರೆ ಸಾವಿಗೂ ಅಂಜಲ್ಲ. ಇತ್ತೀಚೆಗೆ ಸಾಮಾಜಿಕ ಮಾಧ್ಯಮದಲ್ಲಿ ವೀಡಿಯೊವೊಂದು ವೈರಲ್ ಆಗುತ್ತಿದೆ, ಇದರಲ್ಲಿ ಹುಡುಗಿಯೊಬ್ಬಳು ಉಕ್ಕಿ ಹರಿಯುವ ನದಿಯ ದಡದಲ್ಲಿ ನಿಂತು ಸರಪಳಿಯಲ್ಲಿ ನೇತಾಡುತ್ತಾ ಅಪಾಯಕಾರಿ ಸಾಹಸಗಳನ್ನು ಮಾಡುತ್ತಿದ್ದಾಳೆ.
ಹುಡುಗಿ ಸರಪಳಿ ಹಿಡಿದುಕೊಂಡು ತೂಗಾಡುತ್ತಾ, ಇನ್ನೊಂದು ಸರಪಣಿಯನ್ನು ಜಿಗಿದು ಹಿಡಿಯಲು ಪ್ರಯತ್ನಿಸುತ್ತಾಳೆ. ಸರಪಳಿ ಅವಳ ಕೈಯಿಂದ ಜಾರಿ, ಹುಡುಗಿ ನೀರಿನ ವೇಗದಲ್ಲಿ ಹರಿಯುವಾಗ ಬೀಳುತ್ತಾಳೆ. ಅದೃಷ್ಟವಶಾತ್, ಈ ಹುಡುಗಿಯ ಜೊತೆಗಿದ್ದ ಯುವಕನೊಬ್ಬ ಬಟ್ಟೆಯನ್ನು ಎಸೆಯುತ್ತಾನೆ. ಯುವತಿ ಬಟ್ಟೆ ಹಿಡಿದುಕೊಂಡು ಹೊರಬರುತ್ತಾಳೆ. ಬಟ್ಟೆ ಹಿಡಿಯುವಲ್ಲಿ ಸ್ವಲ್ಪ ಎಡವಟ್ಟು ಆಗಿದ್ದರೆ, ಹುಡುಗಿಯ ಜೀವ ಏನಾಗುತ್ತಿತ್ತು ಎಂದು ದೇವರೇ ಬಲ್ಲ. ಆದರೆ ಅದೃಷ್ಟವಶಾತ್ ಆಕೆಯ ಜೀವ ಉಳಿದಿದೆ.
रील के चक्कर में अपनी जान से न खेलें।
— Shifa Khan (@Shifakhanbpl22) July 7, 2025
जिंदगी से बड़ी कोई चीज नहीं है अगर मान लो ये आगे दुप्पटा नहीं पकड़ता तो फिर….
इसलिए ऐसे वीडियो बनाने से बचे प्रकृति से खिलवाड़ न करे । pic.twitter.com/XvHSUwgI10