HomeAutoShocking Video: 2 ಗುಂಪುಗಳ ನಡುವೆ ಘರ್ಷಣೆ; ಹಾಡಹಗಲೇ ಕಾರುಗಳ ಮುಖಾಮುಖಿ 'ಡಿಕ್ಕಿ'

Shocking Video: 2 ಗುಂಪುಗಳ ನಡುವೆ ಘರ್ಷಣೆ; ಹಾಡಹಗಲೇ ಕಾರುಗಳ ಮುಖಾಮುಖಿ ‘ಡಿಕ್ಕಿ’

ಬಹಳ ಕಾಲದಿಂದ ಎರಡು ಗುಂಪುಗಳ ನಡುವೆ ಇದ್ದ ಕಾಳಗ ಹಾಡಹಗಲೇ ನಡು ರಸ್ತೆಯಲ್ಲಿ ಪ್ರಕಟವಾಗಿದೆ. ನಿಂತಿದ್ದ ಕಾರಿಗೆ ಮತ್ತೊಂದು ಕಾರಿನಲ್ಲಿ ಬಂದ ಎದುರಾಳಿ ಗುಂಪು ಹಿಂದಿನಿಂದ ಡಿಕ್ಕಿ ಹೊಡೆದಿದ್ದು, ಸಾಲದೆಂಬಂತೆ ಮತ್ತೆ ತಿರುಗಿಸಿಕೊಂಡು ಬಂದು ನೇರವಾಗಿ ಗುದ್ದಿದೆ. ಇದರ ವಿಡಿಯೋ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿದೆ.

ಘಟನೆ ಮಹಾರಾಷ್ಟ್ರದ ಥಾಣೆ ಜಿಲ್ಲೆಯ ಬದ್ಲಾಪುರ್ – ಅಂಬೇರ್ನಾಥ್ ರಸ್ತೆಯಲ್ಲಿ ನಡೆದಿದ್ದು, ಕಪ್ಪು ಬಣ್ಣದ ಎಸ್ಯುವಿನಲ್ಲಿ ಬಂದ ದುಷ್ಕರ್ಮಿಗಳು ಮೊದಲಿಗೆ ಟೊಯೋಟಾ ಫಾರ್ಚುನರ್ ಕಾರಿಗೆ ಹಿಂಬದಿಯಿಂದ ಗುದ್ದಿದ್ದಾರೆ. ಇದರಿಂದ ಉಂಟಾದ ದೊಡ್ಡ ಸದ್ದಿಗೆ ಸಾರ್ವಜನಿಕರ ಬೆಚ್ಚಿಬಿದ್ದು ಏನೆಂದು ನೋಡುವಷ್ಟರಲ್ಲಿ ಮತ್ತೆ ತಿರುಗಿಸಿಕೊಂಡು ಬಂದ ಎಸ್ಯುವಿ, ಫಾರ್ಚುನರ್ ಕಾರಿಗೆ ಎದುರಿನಿಂದ ಗುದ್ದಿದೆ.

ಏಕಾಏಕಿ ನಡೆದ ಈ ಘಟನೆಯಿಂದ ಸಾರ್ವಜನಿಕರು ಆತಂಕಕ್ಕೆ ಒಳಗಾಗಿದ್ದು, ಇದರ ಮಧ್ಯೆ ತಮ್ಮ ಮೊಬೈಲ್ ನಲ್ಲಿ ವಿಡಿಯೋ ರೆಕಾರ್ಡ್ ಮಾಡಿಕೊಂಡ ಒಬ್ಬರು, ಸೋಶಿಯಲ್ ಮೀಡಿಯಾದಲ್ಲಿ ಇದನ್ನು ಅಪ್ಲೋಡ್ ಮಾಡಿದ್ದಾರೆ. ಈ ವಿಡಿಯೋ ವೈರಲ್ ಆಗುತ್ತಿದ್ದಂತೆ ಹಲವು ನೆಟ್ಟಿಗರು ಹಾಡಹಗಲೇ ಈ ಘಟನೆ ನಡೆದಿರುವುದು ಖಂಡನೀಯ ಎಂದಿದ್ದಾರಲ್ಲದೆ ದುಷ್ಕರ್ಮಿಗಳ ವಿರುದ್ಧ ಪೊಲೀಸರು ಕೂಡಲೇ ಕ್ರಮ ಕೈಗೊಳ್ಳಬೇಕೆಂದು ಒತ್ತಾಯಿಸಿದ್ದಾರೆ.

📱 ಬ್ರೇಕಿಂಗ್ ನ್ಯೂಸ್ ಬೇಗ ಬೇಕೆ?KannadaDunia App ಡೌನ್‌ಲೋಡ್ ಮಾಡಿ, ತಾಜಾ ಸುದ್ದಿ ಮೊದಲು ಪಡೆಯಿರಿ.
APP ತೆರೆಯಿರಿ

For Latest News Updates, Join Our Whatsapp Community🚩
RELATED ARTICLES

Most Popular