ಪ್ರೀತಿಸಿದವಳ ಎದುರೇ ಆಕೆಯ ತಂದೆಯನ್ನು ಚಾಕುವಿನಿಂದ ಇರಿದು ಕೊಂದ ಶಿಕ್ಷಕ; ಬೆಚ್ಚಿಬೀಳಿಸುತ್ತೆ ವಿಡಿಯೋ

ಆಘಾತಕಾರಿ ಘಟನೆಯೊಂದರಲ್ಲಿ ಶಿಕ್ಷಕನೋರ್ವ ವ್ಯಕ್ತಿಯೊಬ್ಬರನ್ನು ಆತನ ಮಗಳ ಎದುರೇ ಚಾಕುವಿನಿಂದ ಇರಿದು ಹತ್ಯೆ ಮಾಡಿದ್ದಾನೆ. ಜೂನ್ 27 ರಂದು ಆಂಧ್ರಪ್ರದೇಶದ ವಿಜಯವಾಡದಲ್ಲಿ ನಡೆದ ಉದ್ದೇಶಿತ ಘಟನೆಯ ವೀಡಿಯೊ ಸಾಮಾಜಿಕ ಮಾಧ್ಯಮದಲ್ಲಿ ಕಾಣಿಸಿಕೊಂಡಿದೆ.

ಹತ್ಯೆಯಾದವರನ್ನು ಕಿರಾಣಿ ಅಂಗಡಿ ಮಾಲೀಕ ಶ್ರೀರಾಮಚಂದ್ರ ಪ್ರಸಾದ್ ಎಂದು ಗುರುತಿಸಲಾಗಿದ್ದು ಆತನ ಮಗಳನ್ನ ದೈಹಿಕ ಶಿಕ್ಷಣ ಶಿಕ್ಷಕನಾಗಿರುವ ಆರೋಪಿ ಶಿವಮಣಿಕಂಠ ಪ್ರೀತಿಸುತ್ತಿದ್ದ. ಇದಕ್ಕೆ ವಿರೋಧ ವ್ಯಕ್ತಪಡಿಸಿದ್ದಕ್ಕೆ ತನ್ನ ಗೆಳತಿಯ ಎದುರೇ ಆಕೆಯ ತಂದೆಯನ್ನು ಬರ್ಬರವಾಗಿ ಇರಿದು ಕೊಂದಿದ್ದಾನೆ. .

ಬೃಂದಾವನ ಕಾಲೋನಿಯಲ್ಲಿರುವ ಇಂಜಿನಿಯರಿಂಗ್ ವಿದ್ಯಾರ್ಥಿನಿ ದರ್ಶಿನಿ ಮತ್ತು ಆಕೆಯ ತಂದೆ ಕಿರಾಣಿ ಅಂಗಡಿ ಮಾಲೀಕ ಶ್ರೀರಾಮಚಂದ್ರ ಪ್ರಸಾದ್ ತಮ್ಮ ಅಂಗಡಿಯಿಂದ ಸ್ಕೂಟರ್‌ನಲ್ಲಿ ಮನೆಗೆ ಹಿಂದಿರುಗುತ್ತಿದ್ದರು.

ಅವರ ಬರುವಿಕೆಗಾಗಿ ಕಾಯುತ್ತಾ ಮರದ ಕೆಳಗೆ ಅವಿತುಕೊಂಡಿದ್ದ ಮಣಿಕಂಠ ಅವರನ್ನು ತಡೆದಿದ್ದ. ದರ್ಶಿನಿ ಮಧ್ಯಪ್ರವೇಶಿಸಿ ಹಲ್ಲೆಯನ್ನು ತಡೆಯಲು ಹತಾಶ ಪ್ರಯತ್ನ ಮಾಡಿದರೂ ಶಿವಮಣಿಕಂಠ, ಪ್ರಸಾದ್‌ಗೆ ಚಾಕುವಿನಿಂದ ಪದೇ ಪದೇ ಇರಿದಿದ್ದಾನೆ. ಯುವತಿಯ ಕಿರುಚಾಟ ಕೇಳಿ ಸ್ಥಳೀಯರು ಓಡಿಬಂದಾಗ ಹಂತಕ ಓಡಿಹೋಗಿದ್ದಾನೆ.

ತಕ್ಷಣ ಪ್ರಸಾದ್ ಅವರನ್ನು ಖಾಸಗಿ ಆಸ್ಪತ್ರೆಗೆ ಸಾಗಿಸಲಾಯಿತಾದರೂ ಅವರು ಚಿಕಿತ್ಸೆ ಫಲಕಾರಿಯಾಗದೆ ಮೃತಪಟ್ಟಿದ್ದರು. ನಂತರ ಅವರ ಮೃತದೇಹವನ್ನು ಹೆಚ್ಚಿನ ಪರೀಕ್ಷೆಗಾಗಿ ಸರ್ಕಾರಿ ಆಸ್ಪತ್ರೆಯ ಶವಾಗಾರಕ್ಕೆ ರವಾನಿಸಲಾಗಿದೆ.

ವರದಿಗಳ ಪ್ರಕಾರ ಹಲ್ಲೆಯ ಸಮಯದಲ್ಲಿ ಮಣಿಕಂಠ, ದರ್ಶಿನಿಗೆ ಬೆದರಿಕೆ ಹಾಕಿದ್ದು ತಾವಿಬ್ಬರೂ ಒಟ್ಟಿಗೆ ಇರುವ ವೀಡಿಯೊಗಳನ್ನು ಸಾಮಾಜಿಕ ಮಾಧ್ಯಮದಲ್ಲಿ ಬಿಡುಗಡೆ ಮಾಡುವ ಬಗ್ಗೆ ಎಚ್ಚರಿಕೆ ನೀಡಿದ್ದ. ದರ್ಶಿನಿ ಮತ್ತು ಮಣಿಕಂಠ ಇನ್ ಸ್ಟಾಗ್ರಾಂನಲ್ಲಿ ಪರಿಚಿತರಾಗಿ ಕಳೆದ ನಾಲ್ಕು ವರ್ಷಗಳಿಂದ ರಿಲೇಷನ್ ಶಿಪ್ ನಲ್ಲಿದ್ದರು. ಈ ಬಗ್ಗೆ ಆಕೆಯ ತಂದೆ ಶ್ರೀರಾಮಚಂದ್ರ ಪ್ರಸಾದ್ ಆಕ್ಷೇಪಿಸಿದ್ದರೂ ಇಬ್ಬರೂ ತಮ್ಮ ಸಂಬಂಧವನ್ನು ಮುಂದುವರೆಸಿದ್ದರು.

ಅವರಿಬ್ಬರನ್ನೂ ಒಮ್ಮೆ ಒಟ್ಟಿಗೆ ನೋಡಿದ್ದ ಅವರು ವಿದ್ಯಾಭ್ಯಾಸ ಮತ್ತು ಭವಿಷ್ಯದ ಬಗ್ಗೆ ಗಮನಹರಿಸುವಂತೆ ಹೇಳಿದ್ದರು. ಅವರ ಈ ಹಸ್ತಕ್ಷೇಪವು ಉದ್ವಿಗ್ನತೆಗೆ ಕಾರಣವಾಯಿತು ಮತ್ತು ಒಂದು ಹಂತದಲ್ಲಿ ಶ್ರೀರಾಮಚಂದ್ರ ಪ್ರಸಾದ್ ಅವರು ಸಮಸ್ಯೆಯನ್ನು ಪರಿಹರಿಸಲು ಮಣಿಕಂಠ ಅವರ ಮನೆಯಲ್ಲಿ ಮಾತುಕತೆ ಕೂಡ ನಡೆಸಿದ್ರು. ಈ ಕ್ರಮಗಳು ಪರಿಸ್ಥಿತಿಯನ್ನು ಉಲ್ಬಣಗೊಳಿಸಿ ಮಣಿಕಂಠನ ಮನೆಯಲ್ಲಿ ಮತ್ತಷ್ಟು ಭಿನ್ನಾಭಿಪ್ರಾಯವನ್ನು ಉಂಟುಮಾಡಿತು. ಇದರಿಂದ ಕೆರಳಿದ ಮಣಿಕಂಠ ಈ ಕೃತ್ಯವೆಸಗಿದ್ದ.

ವರದಿಗಳ ಪ್ರಕಾರ ಪೊಲೀಸರು ಮಣಿಕಂಠನನ್ನು ಬಂಧಿಸಿ ವಶಕ್ಕೆ ಪಡೆದಿದ್ದಾರೆ.

https://twitter.com/TeluguScribe/status/1806582417458913470?ref_src=twsrc%5Etfw%7Ctwcamp%5Etweetembed%7Ctwterm%5E1806582417458913470%7Ctwgr%5E8d26bc88f68c048d8beb32719cc852beb3a504b3%7Ctwcon%5Es1_&ref_u

Share This Article

Latest News

ಬಸನಗೌಡ ಪಾಟೀಲ್ ಯತ್ನಾಳ್ ಉಚ್ಚಾಟನೆಯಿಂದ ಬಿಜೆಪಿಗೆ ಹಿನ್ನಡೆಯಾಗುತ್ತದಾ ?

View Results

Loading ... Loading ...

Most Read