ಕೋಟಾ: ಪಶ್ಚಿಮ ಬಂಗಾಳದ 20 ವರ್ಷದ ನೀಟ್ ಆಕಾಂಕ್ಷಿ ಯುವಕನೊಬ್ಬ ಇಲ್ಲಿನ ಜವಾಹರ್ ನಗರ ಪ್ರದೇಶದಲ್ಲಿನ ಹಾಸ್ಟೆಲ್ ಕಟ್ಟಡದ ಆರನೇ ಮಹಡಿಯಿಂದ ಬಿದ್ದು ಸಾವನ್ನಪ್ಪಿದ್ದಾನೆ.
ಇಶಾಂಶು ಭಟ್ಟಾಚಾರ್ಯ ಎಂಬ ಯುವಕ ಸಮತೋಲನ ಕಳೆದುಕೊಂಡು ಬಾಲ್ಕನಿಯ ಅಲ್ಯೂಮಿನಿಯಂ ರೇಲಿಂಗ್‌ಗೆ ಬಿದ್ದು ಮೃತಪಟ್ಟಿದ್ದಾನೆ. ಆತನ ತೂಕದ ಕಾರಣಕ್ಕೆ ರೇಲಿಂಗ್ ಮುರಿದು ಬಿದ್ದಿರುವ ಶಂಕೆ ಇದೆ ಎಂದು ಸರ್ಕಲ್ ಆಫೀಸರ್ ಅಮರ್ ಸಿಂಗ್ ತಿಳಿಸಿದ್ದಾರೆ. ಇದರ ದೃಶ್ಯ ಸಿಸಿಟಿವಿಯಲ್ಲಿ ಸೆರೆಯಾಗಿದೆ.
ಪಶ್ಚಿಮ ಬಂಗಾಳದ ಜಲ್ಪೈಗುರಿ ಜಿಲ್ಲೆಯ ಧುಪ್ಗುರಿ ನಿವಾಸಿಯಾದ ಭಟ್ಟಾಚಾರ್ಯ ಅವರು ಕಳೆದ ವರ್ಷ ಆಗಸ್ಟ್‌ನಲ್ಲಿ ಕೋಟಾಕ್ಕೆ ಬಂದು ವೈದ್ಯಕೀಯ ಪ್ರವೇಶ ಪರೀಕ್ಷೆಯ ನೀಟ್‌ಗೆ ತಯಾರಿ ನಡೆಸುತ್ತಿದ್ದರು. ಕಟ್ಟಡದ ಆರನೇ ಮಹಡಿಯಲ್ಲಿರುವ ಬಾಲ್ಕನಿಯಲ್ಲಿ ಭಟ್ಟಾಚಾರ್ಯ ತನ್ನ ಮೂವರು ಹಾಸ್ಟೆಲ್ ಮೇಟ್‌ಗಳೊಂದಿಗೆ ಮಾತನಾಡುತ್ತಿದ್ದ.
ಮಧ್ಯರಾತ್ರಿಯ ಸುಮಾರಿಗೆ, ಅವರು ತಮ್ಮ ಕೋಣೆಗೆ ಹಿಂತಿರುಗುತ್ತಿದ್ದಾಗ, ಭಟ್ಟಾಚಾರ್ಯ ಶೂಸ್ ಹಾಕಿಕೊಳ್ಳಲು ಹೋದಾಗ ಸಮತೋಲನ ತಪ್ಪಿ ಬಿದ್ದಿರುವುದನ್ನು ವಿಡಿಯೋದಲ್ಲಿ ನೋಡಬಹುದು.
https://twitter.com/shubhankrmishra/status/1621458406174507011?ref_src=twsrc%5Etfw%7Ctwcamp%5Etweetembed%7Ctwterm%5E1621458406174507011%7Ctwgr%5E28594eee9ed1fc2928521542d36e7aa622b5ed37%7Ctwcon%5Es1_&ref_url=https%3A%2F%2Fwww.freepressjournal.in%2Fviral%2Fon-camera-shocking-neet-aspirant-from-kota-accidentally-falls-from-6th-floor-of-unmaintained-hostel-building-dies