ಬೆಂಗಳೂರು: ಬೆಂಗಳೂರು ಹೊರ ವಲಯದ ಆವಲಹಳ್ಳಿ ಸಮೀಪದ ಕೆರೆಯಲ್ಲಿ ಮೀನು ಹಿಡಿಯಲು ಹೋಗಿದ್ದ ವಿದ್ಯಾರ್ಥಿ ಮೃತಪಟ್ಟಿದ್ದಾನೆ.
ಬಿದರಹಳ್ಳಿ ಕೆರೆಯಲ್ಲಿ ಬಿಹಾರ ಮೂಲದ ಕಿರಣ್(14) ಮೃತಪಟ್ಟಿದ್ದಾನೆ. ಎಂಟು ಯುವಕರು ಮೀನು ಹಿಡಿಯಲು ಬಿದರಹಳ್ಳಿ ಕೆರೆಗೆ ಹೋಗಿದ್ದರು. ಈ ವೇಳೆ ಕೆರೆಯ ಒಳಗೆ ಹೋಗಿದ್ದ ವಿದ್ಯಾರ್ಥಿ ಕಿರಣ್ ಹೂಳು ಇದ್ದ ಜಾಗದಲ್ಲಿ ಸಿಲುಕಿಕೊಂಡು ಹೊರಗೆ ಬರಲಾಗದೆ ಸಾವನ್ನಪ್ಪಿದ್ದಾನೆ. ಆವಲಹಳ್ಳಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ. ಹೆಚ್ಚಿನ ವಿವರ ನಿರೀಕ್ಷಿಸಲಾಗಿದೆ.

