HomeKarnatakaSHOCKING : ಬೆಂಗಳೂರಲ್ಲಿ ಶಾಕಿಂಗ್ ಘಟನೆ ; ಯುವಕನ ಮರ್ಮಾಂಗ ಕತ್ತರಿಸಿ ಲಿಂಗ ಪರಿವರ್ತಿಸಿದ ಮಂಗಳಮುಖಿಯರು...

SHOCKING : ಬೆಂಗಳೂರಲ್ಲಿ ಶಾಕಿಂಗ್ ಘಟನೆ ; ಯುವಕನ ಮರ್ಮಾಂಗ ಕತ್ತರಿಸಿ ಲಿಂಗ ಪರಿವರ್ತಿಸಿದ ಮಂಗಳಮುಖಿಯರು ..!

ಬೆಂಗಳೂರು : ಬೆಂಗಳೂರಲ್ಲಿ ನಡೆದಿರುವಂತಹ ಘಟನೆ ಎಲ್ಲರನ್ನೂ ಬೆಚ್ಚಿ ಬೀಳಿಸಿದೆ. 18 ವರ್ಷದ ಯುವಕನೋರ್ವನನ್ನು ಕಿಡ್ನ್ಯಾಪ್ ಮಾಡಿದ ಮಂಗಳಮುಖಿಗಳು ಆತನ ಮರ್ಮಾಂಗ ಕತ್ತರಿಸಿ ಲಿಂಗ ಪರಿವರ್ತಿಸಿದ ಶಾಕಿಂಗ್ ಘಟನೆ ನಡೆದಿದೆ.

ಹೌದು. ಅಂಬೇಡ್ಕರ್ ಕಾಲೇಜು ಬಳಿ ಯುವಕನೊಬ್ಬ ಟೀ ಅಂಗಡಿಯಲ್ಲಿ ಕೆಲಸ ಮಾಡುತ್ತಿದ್ದನು. ಅಲ್ಲಿಗೆ ಬಂದ ಮಂಗಳಮುಖಿಗಳು ಆತನನ್ನು ಮನವೊಲಿಸುವ ಕೆಲಸ ಮಾಡಿದರು. ನೀನು ನನ್ನ ಜೊತೆ ಬಂದರೆ ಒಳ್ಳೆಯ ಮನೆಯಲ್ಲಿ ಇರಿಸಿ ಉತ್ತಮ ಸಂಪಾದನೆ ಮಾಡಲು ದಾರಿ ಮಾಡಿಕೊಡುವುದಾಗಿ ಹೇಳಿದ್ದಾರೆ. ಆತ ಬರಲು ಒಪ್ಪದಿದ್ದರೂ ಕೂಡ ಬಲವಂತವಾಗಿ ಮನೆಯೊಂದಕ್ಕೆ ಎಳೆದುಕೊಂಡು ಹೋಗಿದ್ದಾರೆ. ನೀನು ಹೆಣ್ಣಾದರೆ ಹೆಚ್ಚು ದುಡಿಯಬಹುದು , ಇದಕ್ಕೆ ಒಪ್ಪದಿದ್ರೆ ನಿಮ್ಮ ಪೋಷಕರನ್ನು ಕೊಲೆ ಮಾಡುತ್ತೇನೆ ಎಂದು ಬೆದರಿಸಿ ಮನೆಗೆ ಕರೆದುಕೊಂಡು ಬಂದು ಮತ್ತು ಬರುವ ಇಂಜೆಕ್ಷನ್ ನೀಡಿ ಆತ ಪ್ರಜ್ಞೆ ತಪ್ಪಿದಾಗ ಆತನ ಮರ್ಮಾಂಗವನ್ನು ಕತ್ತರಿಸಿ ಲಿಂಗ ಪರಿವರ್ತನೆ ಮಾಡಿದ್ದಾರೆ.

ನಂತರ ಆತನನ್ನು 3 ದಿನ ಮನೆಯಲ್ಲಿ ಕೂಡಿಹಾಕಿ ಎಲ್ಲೋ ಕರೆದುಕೊಂಡು ಹೋಗಿ ಪೂಜೆ ಕೂಡ ಮಾಡಿಸಿದ್ದಾರೆ. ನಂತರ ಮಂಗಳಮುಖಿಗಳ ಹಿಂಸೆ ತಾಳಲಾರದೇ ತಪ್ಪಿಸಿಕೊಂಡು ಪೊಲೀಸರಿಗೆ ದೂರು ನೀಡಿದ್ದಾನೆ ಎಂದು ತಿಳಿದು ಬಂದಿದೆ. 18 ವರ್ಷದ ಸಂತ್ರಸ್ತ ನೀಡಿದ ದೂರಿನ ಮೇರೆಗೆ ಪೊಲೀಸರು ಎಫ್ ಐ ಆರ್ ದಾಖಲಿಸಿ ಆರೋಪಿಗಳ ಪತ್ತೆಗೆ ಬಲೆ ಬೀಸಿದ್ದಾರೆ.

📱 ಬ್ರೇಕಿಂಗ್ ನ್ಯೂಸ್ ಬೇಗ ಬೇಕೆ?KannadaDunia App ಡೌನ್‌ಲೋಡ್ ಮಾಡಿ, ತಾಜಾ ಸುದ್ದಿ ಮೊದಲು ಪಡೆಯಿರಿ.
APP ತೆರೆಯಿರಿ

 

 

 

For Latest News Updates, Join Our Whatsapp Community🚩
ranjith
ranjith
Ranjith S S has a decade of experience in digital media. covering stories that spark conversations across the internet, Breaking news, viral moments and celebrity updates to everyday news that gets people talking.
RELATED ARTICLES

Most Popular