HomeCrimeSHOCKING NEWS: ರೈಲು ನಿಲ್ದಾಣದಲ್ಲಿ ಬಾಕ್ಸ್ ನಲ್ಲಿ ಯುವತಿಯ ಮೃತದೇಹ ಪತ್ತೆ; ಪ್ಲಾಸ್ಟಿಕ್ ಕವರ್ ನಲ್ಲಿ...

SHOCKING NEWS: ರೈಲು ನಿಲ್ದಾಣದಲ್ಲಿ ಬಾಕ್ಸ್ ನಲ್ಲಿ ಯುವತಿಯ ಮೃತದೇಹ ಪತ್ತೆ; ಪ್ಲಾಸ್ಟಿಕ್ ಕವರ್ ನಲ್ಲಿ ಶವವಿಟ್ಟು ಸೀಲ್ ಮಾಡಿರುವ ದುಷ್ಕರ್ಮಿಗಳು

ಬೆಂಗಳೂರು: ರಾಜ್ಯ ರಾಜಧಾನಿ ಬೆಂಗಳೂರಿನಲ್ಲಿ ಮತ್ತೊಂದು ಭಯಂಕರ ಘಟನೆ ನಡೆದಿದೆ. ಅಪರಿಚಿತ ಯುವತಿಯ ಮೃತದೇಹ ರೈಲ್ವೆ ನಿಲ್ದಾಣದಲ್ಲಿ ಬಾಕ್ಸ್ ವೊಂದರಲ್ಲಿ ಪತ್ತೆಯಾಗಿದೆ.

ಕಳೆದ ತಿಂಗಳಷ್ಟೇ ಮಹಿಳೆಯ ಮೃತದೇಹವೊಂದು ರೈಲಿನಲ್ಲಿ ಪತ್ತೆಯಾಗಿತ್ತು. ಆ ಮಹಿಳೆ ಯಾರೆಂಬುದು ಈವರೆಗೂ ತಿಳಿದು ಬಂದಿಲ್ಲ. ಈ ಮಧ್ಯೆಯೇ ಅಂತಹದ್ದೇ ಮಾದರಿಯ ಇನ್ನೊಂದು ಘಟನೆ ಯಶವಂತಪುರ ರೈಲು ನಿಲ್ದಾಣದಲ್ಲಿ ಬೆಳಕಿಗೆ ಬಂದಿದ್ದು, 23 ವರ್ಷದ ಅಪರಿಚಿತ ಯುವತಿಯ ಶವವೊಂದು ಪ್ಲಾಸ್ಟಿಕ್ ಕವರ್ ನಲ್ಲಿ ಸುತ್ತಿಟ್ಟ ರೀತಿಯಲ್ಲಿ ಪತ್ತೆಯಾಗಿದೆ.

ಯಶವಂತಪುರ ರೈಲು ನಿಲ್ದಾಣದ ಗೂಡ್ಸ್ ಪ್ಲಾಟ್ ಫಾರ್ಮ್ 1ರಲ್ಲಿ ಬಾಕ್ಸ್ ನಲ್ಲಿ ಯುವತಿಯ ಶವ ಪತ್ತೆಯಾಗಿದೆ. ಪ್ಲಾಸ್ಟಿಕ್ ಕವರ್ ನಲ್ಲಿ ಮೃತದೇಹವನ್ನು ಸೀಲ್ ಮಾಡಿ ದುಷ್ಕರ್ಮಿಗಳು ಇಟ್ಟಿದ್ದಾರೆ. ಕಳೆದ ನಾಲ್ಕು ದಿನಗಳಿಂದ ಈ ಬಾಕ್ಸ್ ಗೂಡ್ಸ್ ಪ್ಲಾಟ್ ಫಾರ್ಮ್ ನಲ್ಲಿ ಇದ್ದರೂ ಯಾರು ಅಷ್ಟಾಗಿ ಈ ಬಗ್ಗೆ ಗಮನ ಹರಿಸಿಲ್ಲ ಎನ್ನಲಾಗಿದೆ. ಆದರೆ ಬಾಕ್ಸ್ ನಿಂದ ತುಂಬಾ ವಾಸನೆ ಬರುತ್ತಿದ್ದ ಹಿನ್ನೆಲೆಯಲ್ಲಿ ಇಂದು ಬಾಕ್ಸ್ ಪರಿಶೀಲನೆ ನಡೆಸಿದಾಗ ಅದರಲ್ಲಿ ಯುವತಿಯ ಶವ ಕೊಳೆತ ಸ್ಥಿತಿಯಲ್ಲಿ ಪತ್ತೆಯಾಗಿದೆ. ಯಶವಂತಪುರ ರೈಲ್ವೆ ಪೊಲೀಸ್ ಠಾಣೆಯಲ್ಲಿ ಕೇಸ್ ದಾಖಲಾಗಿದೆ.

📱 ಬ್ರೇಕಿಂಗ್ ನ್ಯೂಸ್ ಬೇಗ ಬೇಕೆ?KannadaDunia App ಡೌನ್‌ಲೋಡ್ ಮಾಡಿ, ತಾಜಾ ಸುದ್ದಿ ಮೊದಲು ಪಡೆಯಿರಿ.
APP ತೆರೆಯಿರಿ

For Latest News Updates, Join Our Whatsapp Community🚩
RELATED ARTICLES

Most Popular