SHOCKING NEWS: ಪೊಲೀಸರ ಕೈಲಿದ್ದ ಲೋಡೆಡ್ ಪಿಸ್ತೂಲ್ ಕಸಿದು ಮರವೇರಿ ಕುಳಿತ ಖತರ್ನಾಕ್ ಕಳ್ಳ

ಕಲಬುರ್ಗಿ: ಕುಖ್ಯಾತ ಕಳ್ಳನೊಬ್ಬನನ್ನು ಬೆನ್ನಟ್ಟಿ ಹಿಡಿಯಲು ಹೋದಾಗ ಪೊಲೀಸ್ ಸಬ್ ಇನ್ಸ್ ಪೆಕ್ಟರ್ ಅವರ ರಿವಾಲ್ವರ್ ಅನ್ನೇ ಕಿತ್ತುಕೊಂಡು ಕಳ್ಳ ಎಸ್ಕೇಪ್ ಆಗಿರುವ ಘಟನೆ ಕಲಬುರ್ಗಿ ಜಿಲ್ಲೆಯ ಅಫಜಲಪುರದಲ್ಲಿ ನಡೆದಿದೆ.

ಖಾಜಾ ಎಂಬ ಖತರ್ನಾಕ್ ಕಳ್ಳನನ್ನು ಹಿಡಿಯಲು ಹೋದಾಗ ಆತ ಕಾರಿನಲ್ಲಿ ಅವಿತುಕೊಂಡಿದ್ದು, ಈ ವೇಳೆ ಪಿ ಎಸ್ ಐ ಭೀಮರಾವ್ ಬಂಕಲಿ ಕಾರಿನ ಗಾಜು ಒಡೆದು ಕಳ್ಳನನ್ನು ಹಿಡಿಯಲು ಯತ್ನಿಸಿದ್ದಾರೆ. ಈ ವೇಳೆ ಪಿ ಎಸ್ ಐ ಅವರ ಕೈಲಿದ್ದ ಲೋಡೆಡ್ ಪಿಸ್ತೂಲ್ ಕಸಿದುಕೊಂಡ ಕಳ್ಳ ಪರಾರಿಯಾಗಿದ್ದಾನೆ. ಆದರೂ ಪೊಲೀಸರು ಆತನನ್ನು ಹಿಂಬಾಲಿಸಿದ್ದಾರೆ. ಅಷ್ಟರಲ್ಲಿ ಕಳ್ಳ ಪೊಲೀಸ್ ಪಿಸ್ತೂಲ್ ಹಿಡಿದುಕೊಂಡೇ ಮರವೇರಿ ಕುಳಿತು ದಮ್ಕಿ ಹಾಕಿದ್ದಾನೆ.

ಖಾಜಾ ಬಳ್ಳೂರ್ಗಿ ಮೂಲದವನಾಗಿದ್ದು, ಬೆಂಗಳೂರು, ಕಲಬುರ್ಗಿ, ಅಫಜಲಪುರ ಸೇರಿದಂತೆ ಹಲವೆಡೆ ಕಳ್ಳತನ ಪ್ರಕರಣಗಳಲ್ಲಿ ಭಾಗಿಯಾಗಿದ್ದು 20ಕ್ಕೂ ಹೆಚ್ಚು ಪ್ರಕರಣಗಳು ಆತನ ಮೇಲಿದೆ. ಕಳ್ಳನ ಬಂಧನಕ್ಕಾಗಿ ಸಿಸಿಬಿ ಪೊಲೀಸರು ಕಾರ್ಯಾಚರಣೆ ಮುಂದುವರೆಸಿದ್ದಾರೆ.

Share This Article

Latest News

ಬಸನಗೌಡ ಪಾಟೀಲ್ ಯತ್ನಾಳ್ ಉಚ್ಚಾಟನೆಯಿಂದ ಬಿಜೆಪಿಗೆ ಹಿನ್ನಡೆಯಾಗುತ್ತದಾ ?

View Results

Loading ... Loading ...

Most Read