SHOCKING: ಜಾಲತಾಣದಲ್ಲಿ ರೀಲ್ಸ್ ಹಾಕಿ, ಹೊಸ ಫ್ರೆಂಡ್ಸ್ ಮಾಡಿಕೊಂಡಿದ್ದಕ್ಕೆ ಪತ್ನಿಯ ಕತ್ತು ಸೀಳಿ ಕೊಂದ ಪತಿ

ಕೋಲ್ಕತ್ತಾ: ಜೋಯನಗರ ಪೊಲೀಸ್ ಠಾಣಾ ವ್ಯಾಪ್ತಿಯ ಹರಿನಾರಾಯಣಪುರದಲ್ಲಿ 38 ವರ್ಷದ ವ್ಯಕ್ತಿಯೊಬ್ಬ ತನ್ನ ಪತ್ನಿಯ ಕತ್ತು ಸೀಳಿ ಕೊಲೆ ಮಾಡಿರುವ ಘಟನೆ ನಡೆದಿದೆ.

35 ವರ್ಷದ ಮಹಿಳೆ ಪೋಸ್ಟ್ ಮಾಡಿದ ಇನ್‌ಸ್ಟಾಗ್ರಾಮ್ ರೀಲ್‌ಗಳು ಮತ್ತು ವಿಡಿಯೊಗಳಿಂದಾಗಿ ಇಬ್ಬರ ನಡುವೆ ಜಗಳವಾಗಿತ್ತು. ಆರೋಪಿ ಪರಿಮಳ್ ವೈದ್ಯ ತನ್ನ ಪತ್ನಿ ಅಪರ್ಣಾ ವಿವಾಹೇತರ ಸಂಬಂಧ ಹೊಂದಿದ್ದಾಳೆ ಎಂದು ಶಂಕಿಸಿ ಆಕೆಯ ಕತ್ತು ಸೀಳಿ ಹತ್ಯೆ ಮಾಡಿದ್ದಾನೆ. ಮೇಸ್ತ್ರಿಯಾಗಿ ಕೆಲಸ ಮಾಡುತ್ತಿರುವ ಪರಿಮಳ್ ಸದ್ಯ ತಲೆಮರೆಸಿಕೊಂಡಿದ್ದಾನೆ.

7 ನೇ ತರಗತಿಯಲ್ಲಿ ಒಬ್ಬ ಮಗ ಮತ್ತು ನರ್ಸರಿಯಲ್ಲಿ ಓದುತ್ತಿರುವ ಮಗಳನ್ನು ದಂಪತಿ ಹೊಂದಿದ್ದಾರೆ. ಭೀಕರ ಕೃತ್ಯ ಸಂಭವಿಸಿದಾಗ ಮಕ್ಕಳು ಇರಲಿಲ್ಲ.

ಪೊಲೀಸ್ ಅಧಿಕಾರಿಯ ಪ್ರಕಾರ, ಅಪರ್ಣಾ ಸಾಮಾಜಿಕ ಮಾಧ್ಯಮದಲ್ಲಿ ರೀಲ್‌ಗಳನ್ನು ರಚಿಸಲು ಮತ್ತು ಹಂಚಿಕೊಳ್ಳಲು ಪ್ರಾರಂಭಿಸಿದ್ದು, ಇದು ಹೊಸ ಸ್ನೇಹವನ್ನು ಬೆಸೆಯಲು ಕಾರಣವಾಯಿತು. ವಿಶೇಷವಾಗಿ ಹಣ-ಸಾಲ ನೀಡುವ ಏಜೆನ್ಸಿಯ ಅಧಿಕಾರಿಯೊಂದಿಗಿನ ಸ್ನೇಹದ ಬಗ್ಗೆ ಪರಿಮಳ್ ಅಸಮಾಧಾನಗೊಂಡಿದ್ದ ಎನ್ನಲಾಗಿದೆ.

ಇದೇ ವಿಚಾರಕ್ಕೆ ದಂಪತಿ ನಡುವಿನ ಜಗಳ ತಾರಕ್ಕೇರಿ ಕೊಲೆ ಮಾಡಿದ್ದಾನೆ. ಟ್ಯೂಷನ್ ತರಗತಿಯಿಂದ ಮನೆಗೆ ಹಿಂದಿರುಗಿದ ಮಗ ತನ್ನ ತಾಯಿ ರಕ್ತದ ಮಡುವಿನಲ್ಲಿ ಬಿದ್ದಿರುವುದನ್ನು ಕಂಡು ಕೂಗಿದ ಕೂಡಲೇ ನೆರೆಹೊರೆಯವರು ಸ್ಥಳಕ್ಕೆ ಧಾವಿಸಿ ಪೊಲೀಸರಿಗೆ ಮಾಹಿತಿ ನೀಡಿದ್ದಾರೆ.

Share This Article

Latest News

ಬಸನಗೌಡ ಪಾಟೀಲ್ ಯತ್ನಾಳ್ ಉಚ್ಚಾಟನೆಯಿಂದ ಬಿಜೆಪಿಗೆ ಹಿನ್ನಡೆಯಾಗುತ್ತದಾ ?

View Results

Loading ... Loading ...

Most Read