SHOCKING: ಬೆಂಗಳೂರಲ್ಲಿ ಉಸಿರುಗಟ್ಟಿಸಿ ವೃದ್ಧೆ ಕೊಂದು ಮಾಂಗಲ್ಯ ಸರ ದೋಚಿದ ದುಷ್ಕರ್ಮಿಗಳು

ಬೆಂಗಳೂರು: ಬೆಂಗಳೂರಿನ ಉತ್ತರಹಳ್ಳಿಯ ನ್ಯೂ ಮಿಲೇನಿಯಂ ಸ್ಕೂಲ್ ರಸ್ತೆಯಲ್ಲಿ ಉಸಿರುಗಟ್ಟಿಸಿ 65 ವರ್ಷದ ವೃದ್ಧೆ ಶ್ರೀ ಲಕ್ಷ್ಮಿ ಅವರನ್ನು ಕೊಲೆ ಮಾಡಲಾಗಿದೆ.

ವೃದ್ಧೆಯನ್ನು ಕೊಂದು ಮಾಂಗಲ್ಯ ಸರ ದೋಚಿ ದುಷ್ಕರ್ಮಿ ಪರಾರಿಯಾಗಿದ್ದಾನೆ. ನವೆಂಬರ್ 4ರಂದು ಬೆಳಗ್ಗೆ 9:30ಕ್ಕೆ ಪತಿ ಅಶ್ವತ್ಥ್ ನಾರಾಯಣ ಕೆಲಸಕ್ಕೆ ಹೋಗಿದ್ದರು. ಮಧ್ಯಾಹ್ನ 2.15ಕ್ಕೆ ಪತ್ನಿಗೆ ಅಶ್ವತ್ಥ್ ನಾರಾಯಣ ಕರೆ ಮಾಡಿದ್ದರು. ಆದರೆ ಪತ್ನಿ ಕರೆ ಸ್ವೀಕರಿಸಿದ ಹಿನ್ನೆಲೆಯಲ್ಲಿ ಮನೆ ಬಾಡಿಗೆದಾರನಿಗೆ ಕರೆ ಮಾಡಿದ್ದಾರೆ.

ಸಂಜೆ ಸುಮಾರು 5:30ಕ್ಕೆ ಮನೆ ಬಾಡಿಗೆದಾರನಿಗೆ ಕರೆ ಮಾಡಿ, ನನ್ನ ಹೆಂಡತಿ ಶ್ರೀ ಲಕ್ಷ್ಮಿ ಮಧ್ಯಾಹ್ನದಿಂದ ಫೋನ್ ಸ್ವೀಕರಿಸುತ್ತಿಲ್ಲ. ಹೋಗಿ ನೋಡುವಂತೆ ಬಾಡಿಗೆದಾರ ಫಣಿರಾಜ್ ಅವರಿಗೆ ಹೇಳಿದ್ದಾರೆ. ಆದರೆ, ಫಲಿರಾಜ್ ಕೂಡ ಹೊರಗೆ ಹೋಗಿದ್ದು, ತನ್ನ ಪತ್ನಿಗೆ ತಿಳಿಸುವುದಾಗಿ ಹೇಳಿದ್ದಾರೆ. ಸಂಜೆ 6 ಗಂಟೆಗೆ ಹೋಗಿ ನೋಡಿದ ವೇಳೆ ಶ್ರೀಲಕ್ಷ್ಮಿ ಅವರು ಬಿದ್ದಿರುವುದು ಕಂಡು ಬಂದಿದೆ. ಅಶ್ವತ್ಥ್ ನಾರಾಯಣ್ ಅವರಿಗೆ ಕರೆ ಮಾಡಿದ ಫಣರಾಜ್ ನಿಮ್ಮ ಹೆಂಡತಿ ನೆಲದ ಮೇಲೆ ಬಿದ್ದಿದ್ದಾರೆ ಎಂದು ತಿಳಿಸಿದ್ದಾನೆ.

 ಬಂದು ನೋಡಿದಾಗ ಪತ್ನಿ ನೆಲದ ಮೇಲೆ ಬಿದ್ದಿದ್ದು ಉಸಿರಾಡುತ್ತಿರಲಿಲ್ಲ. ಬೆಡ್ ಮೇಲೆ ಮಲಗಿಸಿ ನೋಡಿದಾಗ ಗಾಯದ ಗುರುತು ಪತ್ತೆಯಾಗಿದೆ. ಸುಬ್ರಹ್ಮಣ್ಯಪುರ ಪೊಲೀಸ್ ಠಾಣೆಗೆ ದೂರು ನೀಡಲಾಗಿದೆ. ಪೊಲೀಸರು ಎಫ್ಐರ್ ದಾಖಲಿಸಿ ತನಿಖೆ ಕೈಗೊಂಡಿದ್ದಾರೆ.

Share This Article

Latest News

ಬಸನಗೌಡ ಪಾಟೀಲ್ ಯತ್ನಾಳ್ ಉಚ್ಚಾಟನೆಯಿಂದ ಬಿಜೆಪಿಗೆ ಹಿನ್ನಡೆಯಾಗುತ್ತದಾ ?

View Results

Loading ... Loading ...

Most Read