ನವದೆಹಲಿ: ಮಧ್ಯ ದೆಹಲಿಯ ಹೌಜ್ ಖಾಜಿ ಪ್ರದೇಶದಲ್ಲಿ ತನ್ನ ತಾಯಿಯ ಮೇಲೆ ‘ಕೆಟ್ಟ ಸ್ವಭಾವ’ದ(ನಡತೆ ಸರಿ ಇಲ್ಲ) ಆರೋಪ ಹೊರಿಸಿ ಅತ್ಯಾಚಾರ ಎಸಗಿದ 39 ವರ್ಷದ ವ್ಯಕ್ತಿಯನ್ನು ಬಂಧಿಸಲಾಗಿದೆ.
ಸೌದಿ ಅರೇಬಿಯಾಕ್ಕೆ ತೀರ್ಥಯಾತ್ರೆಗೆ ಹೋಗಿದ್ದ ತನ್ನ ಪೋಷಕರನ್ನು ಕರೆಸಿದ ನಂತರ ಆ ವ್ಯಕ್ತಿ ಈ ಕೃತ್ಯ ಎಸಗಿದ್ದಾನೆ.
ದೂರುದಾರ ಮಹಿಳೆ ತಮ್ಮ 25 ವರ್ಷದ ಮಗಳೊಂದಿಗೆ ಹೌಜ್ ಖಾಜಿ ಪೊಲೀಸ್ ಠಾಣೆಗೆ ದೂರು ನೀಡಿದ್ದು, ಈ ತಿಂಗಳು ಹಲವು ಬಾರಿ ತನ್ನ ಮೇಲೆ ಹಲ್ಲೆ ನಡೆಸಿ ಲೈಂಗಿಕ ದೌರ್ಜನ್ಯ ಎಸಗಿದ್ದಾನೆ ಎಂದು ಆರೋಪಿಸಿದ್ದಾರೆ.
ಆರೋಪಿ ಪದವೀಧರನಾಗಿದ್ದರೂ ಪ್ರಸ್ತುತ ನಿರುದ್ಯೋಗಿಯಾಗಿದ್ದರೆ, ದೂರುದಾರರು ಅನಕ್ಷರಸ್ಥ ಗೃಹಿಣಿಯಾಗಿದ್ದು, ನಿವೃತ್ತ ಸರ್ಕಾರಿ ಉದ್ಯೋಗಿಯನ್ನು ವಿವಾಹವಾಗಿದ್ದಾರೆ. ದೂರಿನ ಪ್ರಕಾರ, ಮಹಿಳೆ ತನ್ನ ಪತಿ, ಅವರ ನಿರುದ್ಯೋಗಿ ಮಗ(ಆರೋಪಿ) ಮತ್ತು ಅವರ ಒಬ್ಬ ಮಗಳೊಂದಿಗೆ ಹೌಜ್ ಖಾಜಿ ಪ್ರದೇಶದಲ್ಲಿ ವಾಸಿಸುತ್ತಿದ್ದಾರೆ. ಕುಟುಂಬದ ಹಿರಿಯ ಮಗಳು ವಿವಾಹಿತಳಾಗಿದ್ದು, ಅದೇ ನೆರೆಹೊರೆಯಲ್ಲಿ ತನ್ನ ಮಾವನ ಮನೆಯಲ್ಲಿದ್ದಾಳೆ.
ಮಹಿಳೆ ಜುಲೈ 25 ರಂದು ತನ್ನ 72 ವರ್ಷದ ಪತಿ ಮತ್ತು ಮಗಳೊಂದಿಗೆ ತೀರ್ಥಯಾತ್ರೆಗೆ ಸೌದಿ ಅರೇಬಿಯಾಕ್ಕೆ ಪ್ರಯಾಣ ಬೆಳೆಸಿದ್ದರು. ಪ್ರವಾಸದ ಸಮಯದಲ್ಲಿ ಆಕೆಯ ಮಗ ತನ್ನ ಗಂಡನ ಫೋನ್ ಗೆ ಕರೆ ಮಾಡಿ ಆಕೆ ‘ಕೆಟ್ಟ ಸ್ವಭಾವ’ದವಳೆಂದು ಆರೋಪಿಸಿ, ತನ್ನ ತಂದೆ ತಕ್ಷಣ ದೆಹಲಿಗೆ ಹಿಂತಿರುಗಿ ವಿಚ್ಛೇದನ ನೀಡಬೇಕೆಂದು ಒತ್ತಾಯಿಸಿದ್ದಾನೆ ಎಂದು ಹಿರಿಯ ಪೊಲೀಸ್ ಅಧಿಕಾರಿಯೊಬ್ಬರು ತಿಳಿಸಿದ್ದಾರೆ.
ಆಗಸ್ಟ್ 1 ರಂದು ಕುಟುಂಬವು ಮನೆಗೆ ಹಿಂದಿರುಗಿದ ನಂತರ ಆರೋಪಿಯು ತನ್ನ ತಾಯಿಯ ಮೇಲೆ ಹಲ್ಲೆ ನಡೆಸಿದ್ದ. ಮರುದಿನ ಮತ್ತೆ ಆಕೆಯ ಮೇಲೆ ಹಲ್ಲೆಗೆ ಯತ್ನಿಸಿದ್ದಾನೆ. ಭಯದಿಂದ ದೂರುದಾರ ಮಹಿಳೆ ಹಿರಿಯ ಮಗಳ ಅತ್ತೆಯ ಮನೆಯಲ್ಲಿ ಸ್ವಲ್ಪ ಸಮಯದವರೆಗೆ ಇರಲು ಹೋಗಿದ್ದರು.
ಆಗಸ್ಟ್ 11 ರಂದು ರಾತ್ರಿ 9.30 ರ ಸುಮಾರಿಗೆ ಮನೆಗೆ ಹಿಂದಿರುಗಿದಾಗ, ಮಗ ತನ್ನೊಂದಿಗೆ ಖಾಸಗಿಯಾಗಿ ಮಾತನಾಡಲು ಒತ್ತಾಯಿಸಿದನು. ನಂತರ ಅವನು ಅವಳನ್ನು ಕೋಣೆಯಲ್ಲಿ ಬಂಧಿಸಿ, ಚಾಕು ಮತ್ತು ಕತ್ತರಿಯಿಂದ ಬೆದರಿಸಿ, ಆಕೆಯ ಮೇಲೆ ಅತ್ಯಾಚಾರ ಮಾಡಿದನೆಂದು ಆರೋಪಿಸಲಾಗಿದೆ ಎಂದು ಅಧಿಕಾರಿ ಹೇಳಿದ್ದಾರೆ.
ಭಯ ಮತ್ತು ನಾಚಿಕೆಯಿಂದ, ಆಕೆ ತಕ್ಷಣ ಘಟನೆಯನ್ನು ಬಹಿರಂಗಪಡಿಸಲಿಲ್ಲ ಮತ್ತು ತನ್ನ ಮಗಳೊಂದಿಗೆ ಅದೇ ಕೋಣೆಯಲ್ಲಿ ಮಲಗಲು ಪ್ರಾರಂಭಿಸಿದಳು. ಆದಾಗ್ಯೂ, ಆಗಸ್ಟ್ 14 ರಂದು ಬೆಳಗಿನ ಜಾವ 3.30 ರ ಸುಮಾರಿಗೆ, ಆರೋಪಿಯು ಈ ಕೃತ್ಯವನ್ನು ಪುನರಾವರ್ತಿಸಿದ್ದಾನೆ ಎಂದು ಆರೋಪಿಸಲಾಗಿದೆ, ನಂತರ ಮಹಿಳೆ ಧೈರ್ಯ ತಂದುಕೊಂಡು ಪೊಲೀಸರನ್ನು ಸಂಪರ್ಕಿಸಿದಳು. ಬಿಎನ್‌ಎಸ್‌ನ ಸಂಬಂಧಿತ ವಿಭಾಗದ ಅಡಿಯಲ್ಲಿ ಪ್ರಕರಣ ದಾಖಲಿಸಲಾಗಿದ್ದು, ತನಿಖೆ ಕೈಗೊಳ್ಳಲಾಗಿದೆ ಎಂದು ಪೊಲೀಸರು ತಿಳಿಸಿದ್ದಾರೆ.