HomeIndiaಬಿಸಿ ಸಾರಿನ ಕಡಾಯಿಗೆ ಬಿದ್ದು ಯುವಕ ಸಾವು; ಅರೆಕಾಲಿಕ ಉದ್ಯೋಗಿಯಾಗಿ ಅಡುಗೆ ಕೆಲಸಕ್ಕೆ ಬಂದಿದ್ದ ನತದೃಷ್ಟ...

ಬಿಸಿ ಸಾರಿನ ಕಡಾಯಿಗೆ ಬಿದ್ದು ಯುವಕ ಸಾವು; ಅರೆಕಾಲಿಕ ಉದ್ಯೋಗಿಯಾಗಿ ಅಡುಗೆ ಕೆಲಸಕ್ಕೆ ಬಂದಿದ್ದ ನತದೃಷ್ಟ ವಿದ್ಯಾರ್ಥಿ

ಆಘಾತಕಾರಿ ಸುದ್ದಿಯೊಂದರಲ್ಲಿ, ತಮಿಳುನಾಡಿನ ತಿರುವಳ್ಳೂರು ಜಿಲ್ಲೆಯಲ್ಲಿ ಆಕಸ್ಮಿಕವಾಗಿ ಬಿಸಿಯಾದ ಸಾರಿನ ಕಡಾಯಿಗೆ ಬಿದ್ದು 21 ವರ್ಷದ ಯುವಕ ಸುಟ್ಟ ಗಾಯಗಳಿಂದ ಸಾವನ್ನಪ್ಪಿದ್ದಾನೆ. ಸಂತ್ರಸ್ತ ಕಾಲೇಜು ವಿದ್ಯಾರ್ಥಿಯಾಗಿದ್ದು, ಅಡುಗೆ ಸಂಸ್ಥೆಯಲ್ಲಿ ಅರೆಕಾಲಿಕ ಕೆಲಸ ಮಾಡುತ್ತಿದ್ದ.

ಕಳೆದ ವಾರ ಮದುವೆ ಸಮಾರಂಭವೊಂದರಲ್ಲಿ ಅತಿಥಿಗಳಿಗೆ ಊಟ ಬಡಿಸುತ್ತಿದ್ದಾಗ ಈ ಘಟನೆ ನಡೆದಿದೆ ಎಂದು ಪೊಲೀಸರು ಮಾಹಿತಿ ನೀಡಿದ್ದಾರೆ. ಅತಿಥಿಗಳಿಗೆ ಬಡಿಸಲು ಉದ್ದೇಶಿಸಿದ್ದ ಸಾರನ್ನು ಕುದಿಸುತ್ತಿರುವಾಗ ಕಡಾಯಿಗೆ ಬಿದ್ದು ಈ ಘಟನೆ ನಡೆದಿದೆ.

📱 ಬ್ರೇಕಿಂಗ್ ನ್ಯೂಸ್ ಬೇಗ ಬೇಕೆ?KannadaDunia App ಡೌನ್‌ಲೋಡ್ ಮಾಡಿ, ತಾಜಾ ಸುದ್ದಿ ಮೊದಲು ಪಡೆಯಿರಿ.
APP ತೆರೆಯಿರಿ

ತೀವ್ರ ಸುಟ್ಟಗಾಯಗಳಾಗಿರುವ ಯುವಕನನ್ನು ನಗರದ ಸರ್ಕಾರಿ ಆಸ್ಪತ್ರೆಗೆ ದಾಖಲಿಸಲಾಗಿತ್ತು. ಚಿಕಿತ್ಸೆ ಫಲಕಾರಿಯಾಗದೆ ಭಾನುವಾರ ಮೃತಪಟ್ಟಿದ್ದಾನೆ.

For Latest News Updates, Join Our Whatsapp Community🚩
RELATED ARTICLES

Most Popular