ಬೆಂಗಳೂರು : ಕೆಲಸಕ್ಕೆ ಹೋಗು ಎಂದಿದ್ದಕ್ಕೆ ಸಿಟ್ಟಿಗೆದ್ದ ಮಗ ತಂದೆಯನ್ನೇ ಹತ್ಯೆಗೈದ ಘಟನೆ ಬೆಂಗಳೂರಿನಲ್ಲಿ ನಡೆದಿದೆ.
ಕೊಲೆಯಾದವರನ್ನು ಮಂಜು ಎಂದು ಗುರುತಿಸಲಾಗಿದೆ. ಮಗ ಮನೋಜ್ ಈ ಕೃತ್ಯ ಎಸಗಿ ಇದೀಗ ಜೈಲು ಪಾಲಾಗಿದ್ದಾನೆ.
ಬೆಂಗಳೂರಿನ ನೆಲಮಂಗದ ದಾಸರಹಳ್ಳಿಯಲ್ಲಿ ಈ ಘಟನೆ ನಡೆದಿದೆ. ತಂದೆ ಹತ್ಯೆಗೈದು ನಾಟಕವಾಡಿದ ಮಗ ತಂದೆಯ ಶವದ ಮುಂದೆ ಕಣ್ಣೀರಿಟ್ಟಿದ್ದನು. ಪೊಲೀಸರು ತನಿಖೆ ನಡೆಸಿದಾಗ ಸತ್ಯ ಬಯಲಾಗಿದೆ.
ನಮ್ಮ ತಂದೆ ಆತ್ಮಹತ್ಯೆ ಮಾಡಿಕೊಂಡಿದ್ದಾರೆ ಎಂದು ಮನೋಜ್ ಮೊದಲು ಪೊಲೀಸರಿಗೆ ಮಾಹಿತಿ ನೀಡಿದ್ದನು. ಸೋಫಾ ಮೇಲೆ ಮಲಗಿದ್ದ ಸ್ಥಿತಿಯಲ್ಲಿ ಮಂಜು ಶವ ಪತ್ತೆಯಾಗಿತ್ತು . ಮಂಜು ಮನೆಗೆ ಪ್ರವೀಣ್ ಎಂಬ ಯುವಕ ಬಂದು ಹೋಗಿದ್ದನು. ಆತನನ್ನು ಪೊಲೀಸರು ವಿಚಾರಣೆ ನಡೆಸಿದಾಗ ಸತ್ಯ ಬಾಯಿ ಬಿಟ್ಟಿದ್ದಾನೆ. ಮನೋಜ್ ಕುಡಿಯಲು ಹಣ ನೀಡು ಎಂದು ತಂದೆಯನ್ನು ಪೀಡಿಸುತ್ತಿದ್ದನು. ಹಾಗಾಗಿ ಮನೋಜ್ ತಂದೆಯನ್ನೇ ಹತ್ಯೆ ಮಾಡಿದ್ದಾನೆ ಎಂದು ಸ್ನೇಹಿತ ಪ್ರವೀಣ್ ಪೊಲೀಸರ ಬಳಿ ಹೇಳಿದ್ದಾನೆ ಎನ್ನಲಾಗಿದೆ.