HomeLatest NewsSHOCKING: ಹೊಲದಲ್ಲಿ ರಾಶಿ ಯಂತ್ರಕ್ಕೆ ಸೀರೆ ಸಿಲುಕಿ ರೈತ ಮಹಿಳೆ ಸಾವು

SHOCKING: ಹೊಲದಲ್ಲಿ ರಾಶಿ ಯಂತ್ರಕ್ಕೆ ಸೀರೆ ಸಿಲುಕಿ ರೈತ ಮಹಿಳೆ ಸಾವು

ಕಲಬುರಗಿ: ಹೊಲದಲ್ಲಿ ರಾಶಿ ಮಾಡುವಾಗ ಯಂತ್ರಕ್ಕೆ ಸಿಲುಕಿ ಮಹಿಳೆ ಮೃತಪಟ್ಟ ಘಟನೆ ಕಲಬುರಗಿ ಜಿಲ್ಲೆ ಕಮಲಾಪುರ ತಾಲೂಕಿನ ಮುದ್ದಡಗಾ ಗ್ರಾಮದಲ್ಲಿ ನಡೆದಿದೆ.

ರೈತ ಮಹಿಳೆ ಗಂಗಮ್ಮ ಸುಧಾಕರ ಹಾಗರಗಿ(35) ಮೃತಪಟ್ಟವರು. ಹೊಲದಲ್ಲಿ ಸೋಯಾಬಿನ್ ರಾಶಿ ಮಾಡುತ್ತಿದ್ದ ಅವರು ಫಸಲಿನ ಕಟ್ಟುಗಳನ್ನು ಹಾಕುವಾಗ ಯಂತ್ರಕ್ಕೆ ಸೀರೆ ಸಿಲುಕಿದೆ. ವೇಗವಾಗಿದ್ದ ಯಂತ್ರಕ್ಕೆ ಗಂಗಮ್ಮ ಅವರ ತಲೆ, ದೇಹ ಭಾಗಶಃ ಯಂತ್ರಕ್ಕೆ ಸಿಲುಕಿ ತುಂಡಾಗಿದೆ. ಇದರಿಂದಾಗಿ ಗಂಗಮ್ಮ ಮೃತಪಟ್ಟಿದ್ದಾರೆ. ನರೋಣಾ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

For Latest News Updates, Join Our Whatsapp Community🚩
niranjan
niranjan
Niranjan working in media filed from 24 years. He worked in Hubballi Udayavani and local newspapers in Shivamogga. ನಿರಂಜನ ಮೂರ್ತಿ ಎಚ್.ಸಿ. 24 ವರ್ಷಗಳಿಂದ ಮಾಧ್ಯಮ ಕ್ಷೇತ್ರದಲ್ಲಿದ್ದಾರೆ. ಎಂಎ ಕನ್ನಡ, ಪಿಜಿ ಡಿಪ್ಲೊಮಾ ಇನ್ ಜರ್ನಲಿಸಂ ವ್ಯಾಸಂಗ ಮಾಡಿದ್ದಾರೆ. ಶಿವಮೊಗ್ಗದ ಎಚ್ಚರಿಕೆ, ನಮ್ಮನಾಡು, ಜೈ ಕರುನಾಡು, ನುಡಿಗಿಡ, ಕ್ರಾಂತಿ ಭಗತ್ ಸ್ಥಳೀಯ ಪತ್ರಿಕೆಗಳಲ್ಲಿ ವರದಿಗಾರನಾಗಿ, ಹುಬ್ಬಳ್ಳಿಯ ಉದಯವಾಣಿಯಲ್ಲಿ ಉಪ ಸಂಪಾದಕರಾಗಿ ಕಾರ್ಯ ನಿರ್ವಹಣೆ ಮಾಡಿದ್ದಾರೆ.
RELATED ARTICLES

Most Popular