ನವದೆಹಲಿ: ನಟ ಕಾರ್ತಿಕ್ ಆರ್ಯನ್ ಮತ್ತು ನಟಿ ಶ್ರೀಲೀಲಾ ಪ್ರಸ್ತುತ ಅನುರಾಗ್ ಬಸು ಅವರ ಮುಂಬರುವ ನಿರ್ದೇಶನದ ಚಿತ್ರದಲ್ಲಿ ಒಟ್ಟಿಗೆ ಕೆಲಸ ಮಾಡುತ್ತಿದ್ದಾರೆ, ಇದನ್ನು ಗ್ಯಾಂಗ್ಟಾಕ್ ಮತ್ತು ಡಾರ್ಜಿಲಿಂಗ್ನ ಸುಂದರವಾದ ಸ್ಥಳಗಳಲ್ಲಿ ಚಿತ್ರೀಕರಿಸಲಾಗುತ್ತಿದೆ.
ಡಾರ್ಜಿಲಿಂಗ್ ನಲ್ಲಿ ಕಿಕ್ಕಿರಿದ ಜನಸಮೂಹದದಲ್ಲಿ ನಟಿ ಶ್ರೀಲೀಲಾಗೆ ಕಹಿ ಅನುಭವವಾಗಿದೆ. ಕಾರ್ತಿಕ್ ಮತ್ತು ಶ್ರೀಲೀಲಾ ಜನಸಮೂಹದಲ್ಲಿ ನಡೆದುಕೊಂಡು ಹೋಗುತ್ತಿದ್ದಾಗ ವ್ಯಕ್ತಿಯೊಬ್ಬರು ನಟಿಯ ಕೈ ಹಿಡಿದು ಎಳೆದಿದ್ದಾರೆ. ಕೂಡಲೇ ಬಾಡಿಗಾರ್ಡ್ ನಟಿಯನ್ನು ರಕ್ಷಿಸಿದ್ದಾರೆ. ಆದರೆ ನಟಿ ಶ್ರೀಲೀಲಾ ಯಾವುದೇ ಪ್ರತಿಕ್ರಿಯೆ ನೀಡದೇ ಮುಂದೆ ಸಾಗಿದ್ದಾರೆ.
ವೈರಲ್ ಆದ ಕ್ಷಣಕ್ಕೆ ಪ್ರತಿಕ್ರಿಯಿಸಿದ ಇನ್ಸ್ಟಾಗ್ರಾಮ್ ಬಳಕೆದಾರರು, “ಶ್ರೀಲೀಲಾ ಅವರನ್ನು ಎಳೆದವರನ್ನು ಶಿಕ್ಷಿಸಿ” ಎಂದು ಬರೆದಿದ್ದಾರೆ. “”ಭೀದ್ ಮೇ ಕಾರ್ತಿಕ್ ಆರ್ಯನ್ ಕೋ ಖುದ್ ಸುರಕ್ಷಾ ಕಿ ಜರೂರತ್ ಹೈ (ಈ ರೀತಿಯ ಜನಸಮೂಹದಲ್ಲಿ ಕಾರ್ತಿಕ್ ಆರ್ಯನ್ ಅವರಿಗೂ ರಕ್ಷಣೆ ಬೇಕು)” ಎಂದು ಕಾಮೆಂಟ್ ಮಾಡಲಾಗಿದೆ.
https://www.instagram.com/reel/DIF6NRtpFD4/?utm_source=ig_web_copy_link