HomeKarnatakaSHOCKING : ರಾಜ್ಯದಲ್ಲಿ 'ರಾಕ್ಷಸಿ ಕೃತ್ಯ' : ಮಗುವಿನ ಕೈಗೆ ಬರೆ, ಗುದದ್ವಾರಕ್ಕೆ ಖಾರದಪುಡಿ ಹಾಕಿದ...

SHOCKING : ರಾಜ್ಯದಲ್ಲಿ ‘ರಾಕ್ಷಸಿ ಕೃತ್ಯ’ : ಮಗುವಿನ ಕೈಗೆ ಬರೆ, ಗುದದ್ವಾರಕ್ಕೆ ಖಾರದಪುಡಿ ಹಾಕಿದ ಅಂಗನವಾಡಿ ಸಹಾಯಕಿ.!

ಕನಕಪುರ : ರಾಜ್ಯದಲ್ಲಿ ರಾಕ್ಷಸಿ ಕೃತ್ಯವೊಂದು ನಡೆದಿದ್ದು, ಮಗುವಿನ ಕೈಗೆ ಬರೆ ಹಾಕಿ, ಗುದದ್ವಾರಕ್ಕೆ ಕಾರದಪುಡಿ ಹಾಕಿ  ಅಂಗನವಾಡಿ ಸಹಾಯಕಿ ರಾಕ್ಷಸಿ ವರ್ತನೆ ತೋರಿಸಿದ  ಘಟನೆ  ಕನಕಪುರದಲ್ಲಿ ನಡೆದಿದೆ.

ಮಗುವಿನ ಮೇಲೆ ಅಂಗನವಾಡಿ ಸಹಾಯಕಿ ಚಾಕುವಿನಿಂದ ಬರೆ ಹಾಕಿ ಗುದದ್ವಾರಕ್ಕೆ ಖಾರದಪುಡಿ ಹಾಕಿ ವಿಕೃತಿ ಮೆರೆದಿದ್ದಾಳೆ.ನಗರದ ಮಹಾರಾಜರಕಟ್ಟೆಯ ಅಂಗನವಾಡಿ ಕೇಂದ್ರದಲ್ಲಿ ಈ ಘಟನೆ ನಡೆದಿದೆ. ಪಟ್ಟಣದ ಜ್ಯೋತಿ ಬಾಯಿ ಮತ್ತು ರಮೇಶ್ ದಂಪತಿಯ ಪುತ್ರ ದೀಕ್ಷಿತ್ ಎಂಬ ಮಗುವಿನ ಮೇಲೆ ಈ ಕೃತ್ಯ ಎಸಗಲಾಗಿದೆ. ಕಾದ ಚಾಕುವಿನಿಂದ ಬರೆ ಹಾಕಿ ಗುದದ್ವಾರಕ್ಕೆ ಖಾರದಪುಡಿ ಹಾಕಿದ್ದಾಳೆ.

ಮಗು ಜೋರಾಗಿ ಅಳುತ್ತಿರುವುದನ್ನು ಕಂಡ ತಾಯಿ ಕೂಡಲೇ ಅಂಗನವಾಡಿ ಕೇಂದ್ರದ ಬಳಿ ಬಂದು ಮಗುವನ್ನು ಪರಿಶೀಲಿಸಿದಾಗ ಘಟನೆ ಬೆಳಕಿಗೆ ಬಂದಿದೆ. ಏನೂ ತಪ್ಪು ಮಾಡದಿದ್ದರೂ ಮಗುವಿಗೆ ಈ ರೀತಿ ಮಾಡಿದ್ದಾರೆ ಎಂದು ಪೋಷಕರು ದೂರಿದ್ದಾರೆ. ಈ ಸಂಬಂಧ ನಗರ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

📱 ಬ್ರೇಕಿಂಗ್ ನ್ಯೂಸ್ ಬೇಗ ಬೇಕೆ?KannadaDunia App ಡೌನ್‌ಲೋಡ್ ಮಾಡಿ, ತಾಜಾ ಸುದ್ದಿ ಮೊದಲು ಪಡೆಯಿರಿ.
APP ತೆರೆಯಿರಿ

For Latest News Updates, Join Our Whatsapp Community🚩
ranjith
ranjith
Ranjith S S has a decade of experience in digital media. covering stories that spark conversations across the internet, Breaking news, viral moments and celebrity updates to everyday news that gets people talking.
RELATED ARTICLES

Most Popular