HomeLatest NewsSHOCKING: ರಸ್ತೆಯಲ್ಲೇ ಮಹಿಳೆ ಚುಂಬಿಸಲು ಯತ್ನಿಸಿದ ಬೈಕ್ ಸವಾರ

SHOCKING: ರಸ್ತೆಯಲ್ಲೇ ಮಹಿಳೆ ಚುಂಬಿಸಲು ಯತ್ನಿಸಿದ ಬೈಕ್ ಸವಾರ

ಉತ್ತರ ಪ್ರದೇಶದ ಮೀರತ್ ನಗರದ ಕಿರಿದಾದ ಲೇನ್‌ ನಲ್ಲಿ ಬೈಕ್ ಸವಾರನೊಬ್ಬ ಮಹಿಳೆಯನ್ನು ಚುಂಬಿಸಲು ಯತ್ನಿಸಿದ ಘಟನೆ ಸಿಸಿಟಿವಿ ಕ್ಯಾಮೆರಾದಲ್ಲಿ ಸೆರೆಯಾಗಿದೆ.

ಮಗುವಿನೊಂದಿಗೆ ಮಹಿಳೆ ತೆರಳುತ್ತಿದ್ದಾಗ ಎದುರಾಗಿ ಬಂದ ಬೈಕ್ ಸವಾರ ಕಿಸ್ ಕೊಡಲು ಪ್ರಯತ್ನಿಸಿದ್ದಾನೆ. ಆಘಾತಕ್ಕೊಳಗಾದ ಮಹಿಳೆ ಬೈದಾಡಿದ ನಂತರ ಪರಾರಿಯಾಗಿದ್ದಾನೆ.

ಬೈಕರ್ ಅಪರಾಧಕ್ಕೆ ಯತ್ನಿಸಿದಾಗ ಮಹಿಳೆ ಆಕಸ್ಮಿಕವಾಗಿ ಸಿಕ್ಕಿಬಿದ್ದಿದ್ದಾಳೆ. ಘಟನೆಯ ವಿಡಿಯೋ ಸಾಮಾಜಿಕ ಮಾಧ್ಯಮದಲ್ಲಿ ವೈರಲ್ ಆಗಿದೆ. ವೀಡಿಯೊ ಕ್ಲಿಪ್‌ನಲ್ಲಿ, ಮಹಿಳೆ ಬೈಕ್ ಸವಾರನ ಮೇಲೆ ನಿಂದಿಸುತ್ತಿರುವುದನ್ನು ಕೇಳಬಹುದಾಗಿದ್ದು, ಆತ ಸ್ಥಳದಿಂದ ಪರಾರಿಯಾಗಿದ್ದಾನೆ. ಲಿಸಾರಿ ಗೇಟ್ ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ ಈ ಘಟನೆ ನಡೆದಿದೆ.

📱 ಬ್ರೇಕಿಂಗ್ ನ್ಯೂಸ್ ಬೇಗ ಬೇಕೆ?KannadaDunia App ಡೌನ್‌ಲೋಡ್ ಮಾಡಿ, ತಾಜಾ ಸುದ್ದಿ ಮೊದಲು ಪಡೆಯಿರಿ.
APP ತೆರೆಯಿರಿ

ಮೀರತ್ ಪೊಲೀಸರು ಸೊಹೈಲ್ ಎಂದು ಗುರುತಿಸಲಾದ ಆರೋಪಿಯನ್ನು ಬಂಧಿಸಿದ್ದಾರೆ. ಪ್ರಕರಣ ದಾಖಲಿಸಿ ಸೂಕ್ತ ಕಾನೂನು ಪ್ರಕ್ರಿಯೆಯನ್ನು ಅನುಸರಿಸಲಾಗುತ್ತಿದೆ.

https://www.facebook.com/reel/1041630354586493

For Latest News Updates, Join Our Whatsapp Community🚩
niranjan
niranjan
Niranjan working in media filed from 24 years. He worked in Hubballi Udayavani and local newspapers in Shivamogga. ನಿರಂಜನ ಮೂರ್ತಿ ಎಚ್.ಸಿ. 24 ವರ್ಷಗಳಿಂದ ಮಾಧ್ಯಮ ಕ್ಷೇತ್ರದಲ್ಲಿದ್ದಾರೆ. ಎಂಎ ಕನ್ನಡ, ಪಿಜಿ ಡಿಪ್ಲೊಮಾ ಇನ್ ಜರ್ನಲಿಸಂ ವ್ಯಾಸಂಗ ಮಾಡಿದ್ದಾರೆ. ಶಿವಮೊಗ್ಗದ ಎಚ್ಚರಿಕೆ, ನಮ್ಮನಾಡು, ಜೈ ಕರುನಾಡು, ನುಡಿಗಿಡ, ಕ್ರಾಂತಿ ಭಗತ್ ಸ್ಥಳೀಯ ಪತ್ರಿಕೆಗಳಲ್ಲಿ ವರದಿಗಾರನಾಗಿ, ಹುಬ್ಬಳ್ಳಿಯ ಉದಯವಾಣಿಯಲ್ಲಿ ಉಪ ಸಂಪಾದಕರಾಗಿ ಕಾರ್ಯ ನಿರ್ವಹಣೆ ಮಾಡಿದ್ದಾರೆ.
RELATED ARTICLES

Most Popular