ಬೆಳಗಾವಿ : ಅನಾರೋಗ್ಯದಿಂದ ತಮ್ಮ ಮೃತಪಟ್ಟ ವಿಷಯ ತಿಳಿದು ಹೃದಯಾಘಾತಕ್ಕೆ ಒಳಗಾಗಿ ಅಣ್ಣನೂ ಮೃತಪಟ್ಟ ಘಟನೆ ಬೆಳಗಾವಿಯ ಕಪರಟ್ಟಿ ಗ್ರಾಮದಲ್ಲಿ ನಡೆದಿದೆ.
ಅನಾರೋಗ್ಯದಿಂದ ಸಹೋದರ ಸತೀಶ್ ಮೃತಪಟ್ಟ ವಿಷಯ ತಿಳಿದು 24 ವರ್ಷದ ಅಣ್ಣ ಬಸವರಾಜ್ ಗೆ ಹೃದಯಾಘಾತವಾಗಿದೆ. ಆಸ್ಪತ್ರೆಗೆ ಸಾಗಿಸುವ ಮಾರ್ಗಮಧ್ಯೆ ಬಸವರಾಜ್ ಕೊನೆಯುಸಿರೆಳೆದಿದ್ದಾರೆ.
ಇಬ್ಬರು ಮಕ್ಕಳನ್ನು ಕಳೆದುಕೊಂಡ ಕಳೆದುಕೊಂಡ ತಂದೆ ತಾಯಿ ಆಕ್ರಂದನ ಮುಗಿಲು ಮುಟ್ಟಿದೆ. ಸಾವಿನಲ್ಲೂ ಸಹೋದರರು ಒಂದಾಗಿದ್ದಾರೆ. ಅಣ್ಣತಮ್ಮಂದಿರ ಸಾವಿಗೆ ಕಪರಟ್ಟಿ ಗ್ರಾಮದ ಜನ ಕಣ್ಣೀರಿಟ್ಟಿದ್ದಾರೆ.