Shocking Video: ಸರ್ಕಸ್ ನಲ್ಲಿ ತರಬೇತುದಾರನ ಮೇಲೆ ಕರಡಿ ದಾಳಿ

ಸರ್ಕಸ್‌ ಗೆ ತರುವ ಪ್ರಾಣಿಗಳನ್ನು ಪಳಗಿಸಲಾಗುತ್ತದೆ. ಅದು ಮಾತುಕೇಳುವ ಸ್ಥಿತಿಗೆ ಬಂದ್ಮೇಲೆ, ತರಬೇತುದಾರ ಹೇಳಿದ್ದೆಲ್ಲವನ್ನು ಅದು ಮಾಡುತ್ತೆ ಅಂದ್ಮೇಲಷ್ಟೇ ಅದನ್ನು ಸ್ಟೇಜ್‌ ಗೆ ತರಲಾಗುತ್ತೆ. ಎಷ್ಟೇ ತರಬೇತಿ ನೀಡಿದ್ರೂ ಪ್ರಾಣಿ ಪ್ರಾಣಿಯೆ. ಅದು ಯಾವ ಸಮಯದಲ್ಲಿ ಹೇಗೆ ವರ್ತಿಸುತ್ತೆ ಅನ್ನೋದನ್ನು ಹೇಳೋದು ಕಷ್ಟ. ಅದಕ್ಕೆ ಈ ವಿಡಿಯೋ ಸಾಕ್ಷ್ಯವಾಗಿದೆ.

ಸಾಮಾಜಿಕ ಜಾಲತಾಣದಲ್ಲಿ ಸರ್ಕಸ್‌ ವಿಡಿಯೋ ಒಂದು ವೈರಲ್‌ ಆಗಿದೆ. ಅಲ್ಲಿ ಕರಡಿ ವರ್ತನೆ ಭಿನ್ನವಾಗಿದೆ. ಸರ್ಕಸ್‌ ನೋಡಲು ಬಂದ ಜನರೆಲ್ಲ ಭಯಗೊಳ್ಳುವಂತೆ ಮಾಡಿದೆ. ಅಷ್ಟಕ್ಕೂ ಆ ಕರಡಿ ಮಾಡಿದ್ದೇನು ಗೊತ್ತಾ?.

ವೈರಲ್‌ ವಿಡಿಯೋ ಪ್ರಕಾರ, ಕರಡಿ ಮೊದಲು ತರಬೇತುದಾರ ಹೇಳಿದಂತೆ ಮಾಡುತ್ತದೆ. ಆತನನ್ನು ಹಿಡಿದುಕೊಳ್ಳುತ್ತದೆ. ಮತ್ತೊಂದು ಆರ್ಡರ್‌ ನೀಡುವ ಮೊದಲೇ ಕೋಪಗೊಳ್ಳುವ ಕರಡಿ, ತರಬೇತುದಾರನ ಮೇಲೆ ಆಕ್ರಮಣ ಮಾಡುತ್ತದೆ. ಆತನನ್ನು ಹಿಡಿದು ನೆಲಕ್ಕೆ ಎಸೆದು ಆತನ ಮೇಲೆ ಬೀಳುತ್ತದೆ. ಪಕ್ಕದಲ್ಲಿರುವ ಇನ್ನೊಬ್ಬ ಸಹಾಯಕ, ಕರಡಿಯಿಂದ ತರಬೇತುದಾರನನ್ನು ಬಿಡಿಸುವ ಪ್ರಯತ್ನ ನಡೆಸ್ತಾನೆ. ಆದ್ರೆ ಅದು ಸಾಧ್ಯವಾಗೋದಿಲ್ಲ.

ಈ ವಿಡಿಯೋ ನೋಡಿದ ಜನರು ಆತಂಕ ವ್ಯಕ್ತಪಡಿಸಿದ್ದಾರೆ. momentos.animais ಚಾನೆಲ್‌ ನಲ್ಲಿ ವಿಡಿಯೋ ಅಪ್ಲೋಡ್‌ ಆಗಿದ್ದು, ಎಲ್ಲಿ ನಡೆದ ಘಟನೆ ಇದು ಎಂಬುದು ಗೊತ್ತಾಗಿಲ್ಲ. ವಿಡಿಯೋ ನೋಡಿದ ಜನರು, ಸರ್ಕಸ್‌ ಮನರಂಜನೆ ನೀಡಿದ್ರೂ, ಕಾಡುಪ್ರಾಣಿಗಳನ್ನು ಇದಕ್ಕೆ ಬಳಸಿಕೊಳ್ಳಬಾರದು ಎಂದು ಅನೇಕರು ಕಮೆಂಟ್‌ ಮಾಡಿದ್ದಾರೆ.

https://www.youtube.com/shorts/6hObNmIQTuc?feature=share

Share This Article

Latest News

ಬಸನಗೌಡ ಪಾಟೀಲ್ ಯತ್ನಾಳ್ ಉಚ್ಚಾಟನೆಯಿಂದ ಬಿಜೆಪಿಗೆ ಹಿನ್ನಡೆಯಾಗುತ್ತದಾ ?

View Results

Loading ... Loading ...

Most Read