ಹೈದರಾಬಾದ್ : ಟಿಎಸ್ಆರ್ಟಿಸಿ ಮಹಿಳಾ ಕಂಡಕ್ಟರ್ ಮೇಲೆ ಮತ್ತೊಬ್ಬ ಮಹಿಳೆ ನಾಗರಹಾವನ್ನು ಎಸೆದ ಘಟನೆ ಹೈದರಾಬಾದ್ ವಿದ್ಯಾನಗರ ಪ್ರದೇಶದಲ್ಲಿ ಗುರುವಾರ ಮಧ್ಯಾಹ್ನ ನಡೆದಿದೆ.
ಮೂಲಗಳ ಪ್ರಕಾರ, ಬಸ್ ವಿದ್ಯಾನಗರದ ಮೂಲಕ ಹಾದುಹೋಗುತ್ತಿದ್ದಂತೆ, ರಸ್ತೆ ಬದಿಯಲ್ಲಿ ನಿಂತಿದ್ದ ಮಹಿಳೆಯೊಬ್ಬರು ಬಸ್ ನಿಲ್ಲಿಸಲು ಸಿಗ್ನಲ್ ನೀಡಿದರು. ಆದರೆ ಬಸ್ ನಿಲ್ಲಿಸದೇ ಇದ್ದಾಗ ಮಹಿಳೆ ಇದ್ದಕ್ಕಿದ್ದಂತೆ ಬಸ್ ಮೇಲೆ ಬಿಯರ್ ಬಾಟಲಿಯನ್ನು ಎಸೆದು, ಹಿಂಭಾಗದ ವಿಂಡೋ ಸ್ಕ್ರೀನ್ ಒಡೆದುಹೋಗಿದ್ದಾಳೆ. ಕೂಡಲೇ ಚಾಲಕ ಮತ್ತು ಕಂಡಕ್ಟರ್ ( ಮಹಿಳಾ ಕಂಡಕ್ಟರ್ ಸ್ವಪ್ನ) ಕೆಲವು ಪ್ರಯಾಣಿಕರೊಂದಿಗೆ ಬೇಗನೆ ಬಸ್ಸಿನಿಂದ ಇಳಿದು ತರಾಟೆಗೆ ತೆಗೆದುಕೊಂಡಿದ್ದಾರೆ.
ಮಹಿಳೆಯ ವಶದಿಂದ ಇನ್ನೂ ಎರಡು ಹಾವುಗಳು ಪತ್ತೆ
ವಿದ್ಯಾನಗರದ ಸ್ಥಳೀಯ ಪೊಲೀಸರಿಗೆ ತಕ್ಷಣ ಮಾಹಿತಿ ನೀಡಿ ಘಟನಾ ಸ್ಥಳಕ್ಕೆ ಧಾವಿಸಿದರು. ಕಂಡಕ್ಟರ್ ಮತ್ತು ಚಾಲಕ ಮಹಿಳೆಯ ಬಳಿ ನಿಂತಾಗ ಅವಳು ತನ್ನ ಚೀಲದಿಂದ ನಾಗರಹಾವನ್ನು ಹೊರತೆಗೆದಳು. ನಂತರ ಸ್ವಪ್ನಾ ಮೇಲೆ ಹಾವನ್ನು ಎಸೆದರು.
‘ನಾನು ಸಮಯಕ್ಕೆ ಸರಿಯಾಗಿ ಪಕ್ಕಕ್ಕೆ ಸರಿದೆ, ಮತ್ತು ಹಾವು ಹತ್ತಿರದ ಸಾರ್ವಜನಿಕ ಶೌಚಾಲಯಕ್ಕೆ ಜಾರಿತು’ ಎಂದು ಸ್ವಪ್ನಾ ಹೇಳಿದರು. ನಂತರ ಪೊಲೀಸರು ಮಹಿಳೆಯನ್ನು ಬಂಧಿಸಿ ಆಕೆಯ ಚೀಲದಿಂದ ಎರಡು ಹೆಚ್ಚುವರಿ ಹಾವುಗಳನ್ನು ವಶಪಡಿಸಿಕೊಂಡಿದ್ದಾರೆ. ಮಹಿಳೆ ವಿರುದ್ಧ ಪ್ರಕರಣ ದಾಖಲಾಗಿದ್ದು, ಹೆಚ್ಚಿನ ತನಿಖೆ ನಡೆಯುತ್ತಿದೆ. ಈ ಘಟನೆಯು ಇತರ ನಾಗರಿಕರನ್ನು ಬೆಚ್ಚಿಬೀಳಿಸಿದೆ.
A drunken woman threw a snake on a Bus conductor at Vidyanagar bus stop in #Hyderabad. She first threw a beer bottle on the bus when it didn’t stop and then she threw a snake on the conductor. pic.twitter.com/54MIhCnQz3
— Sowmith Yakkati (@YakkatiSowmith) August 8, 2024

