HomeIndiaSHOCKING : ‘ಗರ್ಭಿಣಿ’ ಮಾಡಿ ಕೈಕೊಟ್ಟ ಪ್ರಿಯಕರನ ಖಾಸಗಿ ಅಂಗ ಕತ್ತರಿಸಿದ ಮಹಿಳೆ..!

SHOCKING : ‘ಗರ್ಭಿಣಿ’ ಮಾಡಿ ಕೈಕೊಟ್ಟ ಪ್ರಿಯಕರನ ಖಾಸಗಿ ಅಂಗ ಕತ್ತರಿಸಿದ ಮಹಿಳೆ..!

ಬಿಹಾರ : ಮದುವೆಯಾಗಲು ನಿರಾಕರಿಸಿದ ಪ್ರಿಯಕರನ ಖಾಸಗಿ ಭಾಗಗಳನ್ನು ಕತ್ತರಿಸಿ ಶೌಚಾಲಯದಲ್ಲಿ ಎಸೆದ ಮಹಿಳೆಯನ್ನು ಪೊಲೀಸರು ಬಂಧಿಸಿದ ಘಟನೆ ಬಿಹಾರದಲ್ಲಿ ನಡೆದಿದೆ.

ಬಿಹಾರದ ಮಧೌರಾದಲ್ಲಿ ನರ್ಸಿಂಗ್ ಹೋಂ ನಡೆಸುತ್ತಿದ್ದ ಮಹಿಳೆಯೊಬ್ಬಳು ಗರ್ಭಿಣಿಯಾಗಿದ್ದಳು. ಗರ್ಭಿಣಿ ಮಾಡಿ ಮದುವೆಗೆ ಒಪ್ಪದೇ ಯುವಕ ನಿರಾಕರಿಸಿದಾಗ ಅವನ ಖಾಸಗಿ ಭಾಗಗಳನ್ನು ಕತ್ತರಿಸಿ ಮಹಿಳೆ ಶೌಚಾಲಯದಲ್ಲಿ ಎಸೆದಿದ್ದಾಳೆ. ನಂತರ ಈಕೆಯನ್ನು ಬಂಧಿಸಲಾಗಿದೆ ಎಂದು ಪೊಲೀಸರು ತಿಳಿಸಿದ್ದಾರೆ.

ಅಭಿಲಾಷಾ ಎಂದು ಗುರುತಿಸಲ್ಪಟ್ಟ ಮಹಿಳೆ ಕಳೆದ ಹಲವಾರು ವರ್ಷಗಳಿಂದ ಅದೇ ನರ್ಸಿಂಗ್ ಹೋಂನ ವಾರ್ಡ್ ಕೌನ್ಸಿಲರ್ ವೇದಪ್ರಕಾಶ್ ಅವರೊಂದಿಗೆ ಸಂಬಂಧ ಹೊಂದಿದ್ದರು.ವರದಿಯ ಪ್ರಕಾರ, ಅಭಿಲಾಷಾ ತಾನು ಗರ್ಭಿಣಿಯಾಗಿದ್ದೇನೆ ಮತ್ತು ವೇದಪ್ರಕಾಶ್ ಮದುವೆಯ ಹೆಸರಿನಲ್ಲಿ ಅನೇಕ ಬಾರಿ ಮೋಸ ಮಾಡಿದ್ದಾನೆ ಎಂದು ಆರೋಪಿಸಿದ್ದಾರೆ.

📱 ಬ್ರೇಕಿಂಗ್ ನ್ಯೂಸ್ ಬೇಗ ಬೇಕೆ?KannadaDunia App ಡೌನ್‌ಲೋಡ್ ಮಾಡಿ, ತಾಜಾ ಸುದ್ದಿ ಮೊದಲು ಪಡೆಯಿರಿ.
APP ತೆರೆಯಿರಿ

ಆತ ಮದುವೆಯಾಗಲು ನಿರಾಕರಿಸಿದಾಗ, ಮಹಿಳೆ ಚಾಕುವಿನಿಂದ ಅವನ ಖಾಸಗಿ ಭಾಗಗಳನ್ನು ಕತ್ತರಿಸಿ ಶೌಚಾಲಯದಲ್ಲಿ ಎಸೆದಿದ್ದಾಳೆ. ವೇದಪ್ರಕಾಶ್ ಅವರನ್ನು ಪಾಟ್ನಾ ವೈದ್ಯಕೀಯ ಕಾಲೇಜಿಗೆ ದಾಖಲಿಸಲಾಗಿದ್ದು, ಅವರ ಸ್ಥಿತಿ ಗಂಭೀರವಾಗಿದೆ ಎಂದು ವರದಿಯಾಗಿದೆ.

For Latest News Updates, Join Our Whatsapp Community🚩
ranjith
ranjith
Ranjith S S has a decade of experience in digital media. covering stories that spark conversations across the internet, Breaking news, viral moments and celebrity updates to everyday news that gets people talking.
RELATED ARTICLES

Most Popular