ಹಾಸನ : ಹಾಸನದಲ್ಲಿ ಹೃದಯಾಘಾತಕ್ಕೆ 30 ನೇ ಬಲಿಯಾಗಿದ್ದು, ಮಲಗಿದ್ದಲ್ಲೇ ಗ್ರಾಮ ಪಂಚಾಯತ್ ಸದಸ್ಯ ಮೃತಪಟ್ಟಿದ್ದಾರೆ.
ಆಲೂರು ತಾಲೂಕಿನ ಕಲ್ಲಾರೆ ಗ್ರಾಮದಲ್ಲಿ ಈ ಘಟನೆ ನಡೆದಿದೆ. ಮೃತರನ್ನು ಗ್ರಾಮ ಪಂಚಾಯತ್ ಸದಸ್ಯ ಸಂತೋಷ್ (41) ಎಂದು ಗುರುತಿಸಲಾಗಿದೆ.
ಸಂತೋಷ್ ನಿನ್ನೆ ರಾತ್ರಿ ಊಟ ಮಾಡಿ ಮಲಗಿದ್ದರು. ಆದರೆ ರಾತ್ರಿ ಮಲಗಿದ್ದಲ್ಲೇ ಹೃದಯಾಘಾತವಾಗಿದೆ.ಬೆಳಗ್ಗೆ ಕುಟುಂಬದವರು ಸಂತೋಷ್ ಅವರನ್ನು ಎಬ್ಬಿಸಲು ಹೋದಾಗ ಅವರು ಏಳಲಿಲ್ಲ. ಕೂಡಲೇ ಅವರನ್ನು ಆಸ್ಪತ್ರೆಗೆ ಕರೆದುಕೊಂಡು ಹೋಗಲಾಯಿತು. ಆದರೆ ಅಲ್ಲಿ ವೈದ್ಯರು ಅವರು ಮೃತಪಟ್ಟಿದ್ದಾರೆ ಎಂದು ಘೋಷಿಸಿದರು. ಇತ್ತೀಚೆಗಷ್ಟೇ ಸಂತೋಷ್ ಹೃದಯಾಘಾತಕ್ಕೆ ಚಿಕಿತ್ಸೆ ಪಡೆದಿದ್ದರು ಎಂಬ ಮಾಹಿತಿ ಲಭ್ಯವಾಗಿದೆ.
You Might Also Like
TAGGED:ಹೃದಯಾಘಾತ