ಬೆಂಗಳೂರು: ಬೆಂಗಳೂರಿನಲ್ಲಿ ಕಾವೇರಿ ನೀರು ದುರ್ಬಳಕೆ ಮಾಡಿಕೊಂಡ 692 ಜನರಿಗೆ ದಂಡ ವಿಧಿಸಲಾಗಿದೆ. ಕುಡಿಯುವ ನೀರನ್ನು ವಾಹನ ತೊಳೆಯಲು, ಕಟ್ಟಡ ಕೆಲಸಕ್ಕೆ ಬಳಕೆ ಮಾಡಿದ ಹಿನ್ನೆಲೆಯಲ್ಲಿ BWSSB 692 ಜನರಿಗೆ ತಲಾ 5000 ರೂ. ದಂಡ ವಿಧಿಸಿದೆ.
ಒಟ್ಟು 34.60 ಲಕ್ಷ ರೂಪಾಯಿ ದಂಡ ವಸೂಲಿ ಮಾಡಲಾಗಿದೆ. ನೀರು ದುರ್ಬಳಕೆ ಮಾಡಿದ ಪ್ರತಿಯೊಬ್ಬರಿಗೆ ತಲಾ 5,000 ರೂ. ದಂಡ ವಿಧಿಸಲಾಗಿದೆ. ಉತ್ತರ ವಲಯದ 86, ಪೂರ್ವ ವಲಯದಲ್ಲಿ 100 ರೂ., ಪಶ್ಚಿಮ ವಲಯ 165, ದಕ್ಷಿಣ ವಲಯ 206 ಮತ್ತು ಬೆಂಗಳೂರು ಕೇಂದ್ರ ವಲಯದಲ್ಲಿ 135 ಜನರಿಗೆ ತಲಾ 5 ಸಾವಿರ ರೂಪಾಯಿ ದಂಡ ವಿಧಿಸಲಾಗಿದೆ.

