HomeKarnatakaBIG NEWS: ಶಿವಮೊಗ್ಗ DCC ಬ್ಯಾಂಕ್ ನಲ್ಲಿ ಹಗರಣ: ಹುದ್ದೆಗಾಗಿ 40 ಲಕ್ಷ ಲಂಚ; ಸಂಸದರ...

BIG NEWS: ಶಿವಮೊಗ್ಗ DCC ಬ್ಯಾಂಕ್ ನಲ್ಲಿ ಹಗರಣ: ಹುದ್ದೆಗಾಗಿ 40 ಲಕ್ಷ ಲಂಚ; ಸಂಸದರ ಪಾತ್ರವೂ ಇದೆ; ಶಾಸಕ ಬೇಳೂರು ಗೋಪಾಲಕೃಷ್ಣ ಗಂಭೀರ ಆರೋಪ

ಶಿವಮೊಗ್ಗ: ಶಿವಮೊಗ್ಗ ಡಿಸಿಸಿ ಬ್ಯಾಂಕ್ ನಲ್ಲಿ ಭಾರಿ ಹಗರಣ ನಡೆದಿದ್ದು, ಇದರಲ್ಲಿ ಸಂಸದ ಬಿ.ವೈ.ರಾಘವೇಂದ್ರ ಪಾತ್ರವೂ ಇದೆ ಎಂದು ಕಾಂಗ್ರೆಸ್ ಶಾಸಕ ಬೇಲೂರು ಗೋಪಾಲಕೃಷ್ಣ ಆರೋಪಿಸಿದ್ದಾರೆ.

ಡಿಸಿಸಿ ಬ್ಯಾಂಕ್ ನಲ್ಲಿ ಒಂದೊಂದು ಹುದ್ದೆ ಕೊಡಿಸಲು 40 ಲಕ್ಷ ಲಂಚ ಪಡೆದಿದ್ದಾರೆ. ಅಲ್ಲದೇ ಲಂಚದ ಹಣ ಪಡೆಯಲು ಉದ್ಯೋಗಿಗಳಿಗೆ ಬ್ಯಾಂಕ್ ನಲ್ಲೇ ಸಾಲ ಕೊಡಿಸಿದ್ದಾರೆ. ಸಂಸದ ಬಿ.ವೈ.ರಾಘವೇಂದ್ರ ಪಾತ್ರವೂ ಇದೆ. ಈ ಬಗ್ಗೆ ಸರ್ಕಾರ ತನಿಖೆ ನಡೆಸಬೇಕು ಎಂದು ಆಗ್ರಹಿಸಿದ್ದಾರೆ.

📱 ಬ್ರೇಕಿಂಗ್ ನ್ಯೂಸ್ ಬೇಗ ಬೇಕೆ?KannadaDunia App ಡೌನ್‌ಲೋಡ್ ಮಾಡಿ, ತಾಜಾ ಸುದ್ದಿ ಮೊದಲು ಪಡೆಯಿರಿ.
APP ತೆರೆಯಿರಿ

ಇದೇ ವೇಳೆ ಸರ್ಕಾರಿ ನೌಕರರ ಸಂಘದ ರಾಜ್ಯಾಧ್ಯಕ್ಷ ಷಡಕ್ಷರಿ ವರ್ಗಾವಣೆ ವಿಚಾರವಾಗಿ ಮಾತನಾಡಿದ ಗೋಪಾಲಕೃಷ್ಣ, ಷಡಕ್ಷರಿ ವರ್ಗಾವಣೆ ದೊಡ್ಡ ವಿಚಾರವಲ್ಲ, ಆತ ಸಾಕಷ್ಟು ಅಕ್ರಮ ಆಸ್ತಿ ಸಂಪಾದಿಸಿದ್ದಾರೆ. ಯಾರು ಯಾರದ್ದೋ ತನಿಖೆ ಮಾಡ್ತಾರೆ ಈತನ ವಿರುದ್ಧವೂ ತನಿಖೆ ಮಾಡಲಿ ಎಂದು ಹೇಳಿದರು.

For Latest News Updates, Join Our Whatsapp Community🚩
RELATED ARTICLES

Most Popular