HomeKarnatakaಇದ್ದಕ್ಕಿದ್ದಂತೆ ಆತ್ಮಹತ್ಯೆಗೆ ಶರಣಾದ ಮಹಿಳೆ

ಇದ್ದಕ್ಕಿದ್ದಂತೆ ಆತ್ಮಹತ್ಯೆಗೆ ಶರಣಾದ ಮಹಿಳೆ

ಶಿವಮೊಗ್ಗ: ಮಹಿಳೆಯೋರ್ವರು ಇದ್ದಕ್ಕಿದ್ದಂತೆ ನೇಣುಬಿಗಿದುಕೊಂಡು ಆತ್ಮಹತ್ಯೆಗೆ ಶರಣಾಗಿರುವ ಘಟನೆ ಶಿವಮೊಗ್ಗ ಜಿಲ್ಲೆಯ ಸೊರಬ ತಾಲೂಕಿನ ವಿದ್ಯುತ್ ನಗರದಲ್ಲಿ ನಡೆದಿದೆ.

30 ವರ್ಷದ ಅಕ್ಷತಾ ಆತ್ಮಹತ್ಯೆಗೆ ಶರಣಾದ ಮಹಿಳೆ. ಭದ್ರಾವತಿ ಮೂಲದ ಅಕ್ಷತಾ ಚಂದ್ರಗುತ್ತಿ ಗ್ರಾಮದ ಸಂತೋಷ್ ಅವರನ್ನು ವಿವಾಹವಾಗಿ ವಿದ್ಯುತ್ ನಗರದಲ್ಲಿ ವಾಸವಾಗಿದ್ದರು. ಅಕ್ಷತಾ ಬ್ಯೂಟಿ ಪಾರ್ಲರ್ ನಡೆಸುತ್ತಿದ್ದರು.

ಕೆಲ ದಿನಗಳಿಂದ ಹೊಟ್ಟೆ ನೋವಿನಿಂದ ಬಳಲುತ್ತಿದ್ದರು ಎನ್ನಲಾಗಿದೆ. ಇದೀಗ ಏಕಾಏಕಿ ಮನೆಯಲ್ಲಿಯೇ ನೇಣಿಗೆ ಕೊರಳೊಡ್ಡಿದ್ದಾರೆ. ಸೊರಬ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

📱 ಬ್ರೇಕಿಂಗ್ ನ್ಯೂಸ್ ಬೇಗ ಬೇಕೆ?KannadaDunia App ಡೌನ್‌ಲೋಡ್ ಮಾಡಿ, ತಾಜಾ ಸುದ್ದಿ ಮೊದಲು ಪಡೆಯಿರಿ.
APP ತೆರೆಯಿರಿ

 

For Latest News Updates, Join Our Whatsapp Community🚩
RELATED ARTICLES

Most Popular