HomeKarnatakaದೇವಸ್ಥಾನದ ಲಿಫ್ಟ್ ನಲ್ಲಿ ಸಿಲುಕಿದ್ದ ನಿವೃತ್ತ ಇಂಜಿನಿಯರ್ ದುರಂತ ಸಾವು

ದೇವಸ್ಥಾನದ ಲಿಫ್ಟ್ ನಲ್ಲಿ ಸಿಲುಕಿದ್ದ ನಿವೃತ್ತ ಇಂಜಿನಿಯರ್ ದುರಂತ ಸಾವು

ಶಿವಮೊಗ್ಗ: ದೇವಸ್ಥಾನದ ಲಿಫ್ಟ್ ನಲ್ಲಿ ಸಿಲುಕಿ ಅಸ್ವಸ್ಥಗೊಂಡಿದ್ದ ನಿವೃತ್ತ ಇಂಜಿನಿಯರ್ ಓರ್ವರು ತೀವ್ರ ಅಸ್ವಸ್ಥಗೊಂಡು ಸಾವನ್ನಪಿರುವ ಘಟನೆ ಶಿವಮೊಗ್ಗದಲ್ಲಿ ನಡೆದಿದೆ.

ಶಿವಮೊಗ್ಗ ನಗರದ ದತ್ತಾತ್ರೇಯ ಸ್ವಾಮಿ ದೇವಸ್ಥಾನದ ಲಿಫ್ಟ್‌ನಲ್ಲಿ ಸಿಲುಕಿ ನಿವೃತ್ತ ಇಂಜಿನಿಯರ್ ಕುಮಾರಸ್ವಾಮಿ (80) ಅಸ್ವಸ್ಥಗೊಂಡಿದ್ದರು. ಭಾನುವಾರ ದೇವಸ್ಥಾನಕ್ಕೆ ತೆರಳಿದ್ದ ವೇಳೆ ಈ ಅವಘಡ ನಡೆದಿತ್ತು.

ಲಿಫ್ಟ್‌ನಲ್ಲಿ ಮೇಲೆ ತೆರಳಲು ಬಟನ್ ಒತ್ತಿ ಒಳಹೋದಾಗ, ಮೇಲಿಂದ ಬಂದ ಲಿಫ್ಟ್‌ನಲ್ಲಿ ಅವರು ಸಿಲಿಕಿದ್ದರು. ಅಗ್ನಿಶಾಮಕ ದಳದ ಸಿಬ್ಬಂದಿ ಅವರನ್ನು ರಕ್ಷಿಸಿದ್ದರು. ಅಸ್ವಸ್ಥಗೊಅಂಡಿದ್ದ ಕುಮಾರಸ್ವಾಮಿ ಅವರನ್ನು ಶಿವಮೊಗ್ಗದ ಮೆಗ್ಗಾನ್ ಆಸ್ಪತ್ರೆಗೆ ದಾಖಲಿಸಲಾಗಿತ್ತು. ಆದರೆ ಚಿಕಿತ್ಸೆ ಫಲಿಸದೆ ಅವರು ಸಾವನ್ನಪ್ಪಿದ್ದಾರೆ. ಜಯನಗರ ಪೊಲೀಸ್ ಠಾಣೆಯಲ್ಲಿ ಈ ಸಂಬಂಧ ಪ್ರಕರಣ ದಾಖಲಾಗದೆ.

📱 ಬ್ರೇಕಿಂಗ್ ನ್ಯೂಸ್ ಬೇಗ ಬೇಕೆ?KannadaDunia App ಡೌನ್‌ಲೋಡ್ ಮಾಡಿ, ತಾಜಾ ಸುದ್ದಿ ಮೊದಲು ಪಡೆಯಿರಿ.
APP ತೆರೆಯಿರಿ

For Latest News Updates, Join Our Whatsapp Community🚩
RELATED ARTICLES

LEAVE A REPLY

Please enter your comment!
Please enter your name here

Most Popular