HomeKarnatakaಪತಿ ಸಾವಿನ ಸುದ್ದಿ ಕೇಳಿ ಪತ್ನಿಯೂ ಹೃದಯಾಘಾತದಿಂದ ನಿಧನ; ಸಾವಿನಲ್ಲಿಯೂ ಒಂದಾದ ವೃದ್ಧ ದಂಪತಿ

ಪತಿ ಸಾವಿನ ಸುದ್ದಿ ಕೇಳಿ ಪತ್ನಿಯೂ ಹೃದಯಾಘಾತದಿಂದ ನಿಧನ; ಸಾವಿನಲ್ಲಿಯೂ ಒಂದಾದ ವೃದ್ಧ ದಂಪತಿ

ಶಿವಮೊಗ್ಗ: ಪತಿ ಸಾವನ್ನಪ್ಪಿದ ವಿಷಯ ತಿಳಿಯುತ್ತಿದ್ದಂತೆ ಹೃದಯಾಘಾತದಿಂದ ಪತ್ನಿಯೂ ಕೊನೆಯುಸಿರೆಳೆದಿದ್ದು, ವೃದ್ಧ ದಂಪತಿ ಸಾವಿನಲ್ಲಿಯೂ ಒಂದಾಗಿರುವ ಘಟನೆ ಶಿವಮೊಗ್ಗ ಜಿಲ್ಲೆಯ ಹೊಸನಗರ ತಾಲೂಕಿನ ಸಾವಂತೂರು ಗ್ರಾಮದಲ್ಲಿ ನಡೆದಿದೆ.

ವಯೋಸಹಜ ಕಾಯಿಲೆಯಿಂದ ಬಳಲುತ್ತಿದ್ದ 90 ವರ್ಷದ ಹೊಳೆಯಪ್ಪ ಇಂದು ಬೆಳಿಗ್ಗೆ ಮೃತಪಟ್ಟಿದ್ದಾರೆ. ಜೀವನ ಸಂಗಾತಿ ಪತಿ ಬದುಕಿನ ಮುಸ್ಸಂಜೆಯಲ್ಲಿಯೂ ಜೊತೆಗಿದ್ದು ಕೊನೆ ಕ್ಷಣದಲ್ಲಿ ಇನ್ನಿಲ್ಲ ಎಂಬ ಸುದ್ದಿ ಕೇಳುತ್ತಿದ್ದಂತೆ ಪತ್ನಿ ಗಂಗಮ್ಮ (80) ಆಘಾತಕ್ಕೊಳಗಾಗಿದ್ದು, ಹೃದಯಾಘಾತದಿಂದ ಪತಿ ಹಿಂದೆಯೇ ಇಹಲೋಕ ತ್ಯಜಿಸಿದ್ದಾರೆ.

ಮೃತ ದಂಪತಿಗೆ ಇಬ್ಬರು ಗಂಡು ಮಕ್ಕಳು. ಐವರು ಹೆಣ್ಣು ಮಕ್ಕಳು. ಕಷ್ಟ-ಸುಖ, ಏಳು ಬೀಳಿನಲ್ಲಿಯೂ ಜೊತೆಯಾಗಿ ಪಯಣಿಸಿ ಸುದೀರ್ಘ ದಾಂಪತ್ಯ, ಅನ್ಯೋನ್ಯತೆಯಿಂದ ಇದ್ದ ದಂಪತಿ ಸಾರ್ಥಕ ಬದುಕು ಪೂರೈಸಿ ಇದೀಗ ಸಾವಿನಲ್ಲಿಯೂ ಒಂದಾಗಿದ್ದಾರೆ.

📱 ಬ್ರೇಕಿಂಗ್ ನ್ಯೂಸ್ ಬೇಗ ಬೇಕೆ?KannadaDunia App ಡೌನ್‌ಲೋಡ್ ಮಾಡಿ, ತಾಜಾ ಸುದ್ದಿ ಮೊದಲು ಪಡೆಯಿರಿ.
APP ತೆರೆಯಿರಿ

For Latest News Updates, Join Our Whatsapp Community🚩
RELATED ARTICLES

Most Popular