HomeLive NewsBIG NEWS: ಕಾಡಾನೆ ದಾಳಿ: ಭದ್ರಾವತಿ ವಿಐಎಸ್ಎಲ್ ವಸತಿಗೃಹ ಕಾವಲುಗಾರ ಬಲಿ

BIG NEWS: ಕಾಡಾನೆ ದಾಳಿ: ಭದ್ರಾವತಿ ವಿಐಎಸ್ಎಲ್ ವಸತಿಗೃಹ ಕಾವಲುಗಾರ ಬಲಿ

ಶಿವಮೊಗ್ಗ: ಶಿವಮೊಗ್ಗದಲ್ಲಿ ಕಾಡಾನೆ ದಾಳಿಗೆ ವಿಶ್ವೇಶ್ವರಯ್ಯ ಕಬ್ಬಣ ಹಾಗೂ ಉಕ್ಕು ಕಾರ್ಖಾನೆಯ ವಸತಿಗೃಹದ ಕಾವಲುಗಾರ ಬಲಿಯಾಗಿರುವ ಘಟನೆ ನಡೆದಿದೆ.

ಭದ್ರಾವತಿ ತಾಲೂಕಿನ ಕೆಂಚಮ್ಮನ ಗುಡ್ಡದಲ್ಲಿ ಈ ಘಟನೆ ನಡೆದಿದೆ. ಒಂಟಿ ಸಲಗದ ದಾಳಿಗೆ ವಸತಿಗೃಹದ ಕಾವಲುಗಾರ ಕುಮಾರ್ (50) ಮೃತಪಟ್ಟಿದ್ದಾರೆ.

📱 ಬ್ರೇಕಿಂಗ್ ನ್ಯೂಸ್ ಬೇಗ ಬೇಕೆ?KannadaDunia App ಡೌನ್‌ಲೋಡ್ ಮಾಡಿ, ತಾಜಾ ಸುದ್ದಿ ಮೊದಲು ಪಡೆಯಿರಿ.
APP ತೆರೆಯಿರಿ

ವಸತಿಗೃಹದ ಚೆಕ್ ಪೋಸ್ಟ್ ಬಳಿ ಇದ್ದ ಕಾವಲುಗಾರನ ಮೇಲೆ ತಡರಾತ್ರಿ ಕಾಡಾನೆ ದಾಳಿ ನಡೆಸಿದೆ. ಗಂಭೀರವಾಗಿ ಗಾಯಗೊಂಡಿದ್ದ ಕುಮಾರ್ ಸ್ಥಳದಲ್ಲೇ ಸಾವನ್ನಪ್ಪಿದ್ದಾರೆ.

ಮೃತ ಕುಮಾರ್ ಬಂಡಿಗುಡ್ಡದ ನಿವಾಸಿ. ಇಲ್ಲಿನ ವಿಐಎಸ್ಎಲ್ ವಸತಿಗೃಘಗಳ ಕಾವಲುಗಾರರಾಗಿ ಕೆಲಸ ಮಾಡುತ್ತಿದ್ದರು. ಘಟನಾ ಸ್ಥಳಕ್ಕೆ ಭದ್ರಾವತಿ ವಲಯ ಅರಣ್ಯ ಅಧಿಕಾರಿ ಭೇತಿ ನೀಡಿ ಪರಿಶೀಲನೆ ನಡೆಸಿದ್ದಾರೆ

For Latest News Updates, Join Our Whatsapp Community🚩
RELATED ARTICLES

Most Popular