ಶಿವಮೊಗ್ಗ: ಶಿವಮೊಗ್ಗದ ಸೋಗಾನೆಯಲ್ಲಿರುವ ಜೈಲಿಗೆ ಬಾಳೆಗೊನೆಯಲ್ಲಿ ಗಾಂಜಾ, ಸಿಗರೇಟ್ ಪೂರೈಸುತ್ತಿದ್ದ ಘಟನೆ ಬೆಳಕಿಗೆ ಬಂದಿದೆ.
ಆಟೋ ಚಾಲಕನೊಬ್ಬ ಬಾಳೆಗೊನೆಯಲ್ಲಿ ಗಾಂಜಾ, ಸಿಗರೇಟ್ ಗಳನ್ನು ತುಂಬಿ ಸೋಗಾನೆ ಜೈಲಿನ ಗೇಟಿನ ಬಳಿ ತಂದಿಟ್ಟಿದ್ದಾನೆ. ಪರಿಶೀಲನೆ ನಡೆಸಿದ ವೇಳೆ ಬಾಳೆಗೊನೆಯಲ್ಲಿ ಗಾಂಜಾ, ಸಿಗರೇಟ್ ಇರುವುದು ಕಂಡು ಕಾರಾಗೃಹ ಸಿಬ್ಬಂದಿಗಳೇ ಶಾಕ್ ಆಗಿದ್ದಾರೆ.
ಕೆ.ಎಸ್.ಐ.ಎಸ್.ಎಫ್ ಇನ್ಸ್ ಪ್ರೆಕ್ಟರ್ ಜಗದೀಶ್ ನೇತೃತ್ವದ ತಂಡ ಜೈಲಿನ ಗೇಟ್ ನಲ್ಲಿದ್ದ ಬಾಳೆಗೊನೆ ಪರಿಶೀಲನೆ ನಡೆಸಿದಾಗ ಗಾಂಜಾ, ಸಿಗರೇಟ್ ಪತ್ತೆಯಾಗಿದೆ. ಬಾಳೆ ದಿಂಡಿನ್ನು ಕೊರೆದು ಅದರಲ್ಲಿ ಗಾಂಜಾ ಹಾಗೂ ಸಿಗರೇಟ್ ಗಳನ್ನು ಸುತ್ತಿ ಇಡಲಾಗಿತ್ತು.
120 ಗ್ರಾಂ ಗಾಂಜಾ ಹಾಗೂ 40 ಸಿಗರೇಟ್ ಗಳನ್ನು ಜಪ್ತಿ ಮಾಡಲಾಗಿದೆ. ಆಟೋ ಚಾಲಕನ್ನು ಹಿಡಿದು ವಿಚಾರಿಸಿದಾಗ ಜೈಲಿನ ಕ್ಯಾಂಟೀನ್ ಅವರ ಸೂಚನೆ ಮೇರೆಗೆ ತಂದಿರುವುದಾಗಿ ತಿಳಿಸಿದ್ದಾನೆ.
