HomeKarnatakaBREAKING NEWS: ಶಿವಮೊಗ್ಗದಲ್ಲಿ ಮತ್ತೊಂದು ಅವಘಡ; ಬ್ಯಾಗ್ ನಲ್ಲಿದ್ದ ವಸ್ತು ಏಕಾಏಕಿ ಸ್ಫೋಟ; ಹಲವರಿಗೆ ಗಾಯ

BREAKING NEWS: ಶಿವಮೊಗ್ಗದಲ್ಲಿ ಮತ್ತೊಂದು ಅವಘಡ; ಬ್ಯಾಗ್ ನಲ್ಲಿದ್ದ ವಸ್ತು ಏಕಾಏಕಿ ಸ್ಫೋಟ; ಹಲವರಿಗೆ ಗಾಯ

ಶಿವಮೊಗ್ಗ: ಬ್ಯಾಗ್ ನಲ್ಲಿದ್ದ ವಸ್ತು ಇದ್ದಕ್ಕಿದ್ದಂತೆ ಸ್ಫೋಟಗೊಂಡು ಹಲವರು ಗಾಯಗೊಂಡಿರುವ ಘಟನೆ ಶಿವಮೊಗ್ಗ ಜಿಲ್ಲೆಯ ಶಿಕಾರಿಪುರ ತಾಲೂಕಿನ ಶಿರಾಳಕೊಪ್ಪದಲ್ಲಿ ನಡೆದಿದೆ.

ಬೆಡ್ ಶೀಟ್ ಮಾರಲು ಬಂದಿದ್ದ ಅಂಥೋಣಿಗೆ ಗಂಭೀರ ಗಾಯಗಳಾಗಿವೆ. ಹಲವು ಬೆಡ್ ಶೀಟ್ ವ್ಯಾಪಾರಿಗಳಿಗೂ ಸಣ್ಣಪುಟ್ಟ ಗಾಯಗಳಾಗಿವೆ.

ಉಮೇಶ್ ಎಂಬಾತ ಅಂಥೋಣಿ ಎಂಬುವವರ ಬಳಿ ಬ್ಯಾಗ್ ಇಟ್ಟು ತೆರಳಿದ್ದರು. ಈ ವೇಳೆ ಬ್ಯಾಗ್ ನಲ್ಲಿದ್ದ ವಸ್ತು ಸ್ಫೋಟಗೊಂಡಿದ್ದು ಬೆಡ್ ಶೀಟ್ ವ್ಯಾಪಾರಿಗಳು ಗಾಯಗೊಂಡಿದ್ದಾರೆ.

📱 ಬ್ರೇಕಿಂಗ್ ನ್ಯೂಸ್ ಬೇಗ ಬೇಕೆ?KannadaDunia App ಡೌನ್‌ಲೋಡ್ ಮಾಡಿ, ತಾಜಾ ಸುದ್ದಿ ಮೊದಲು ಪಡೆಯಿರಿ.
APP ತೆರೆಯಿರಿ

ಗಾಯಾಳುಗಳನ್ನು ಶಿರಾಳಕೊಪ್ಪ ಆಸ್ಪತ್ರೆಗೆ ದಾಖಲಿಸಲಾಗಿದೆ. ಹಂದಿ ಬೇಟೆಗೆಂದು ತಂದಿದ್ದ ಬ್ಯಾಗ್ ನಲ್ಲಿದ್ದ ವಸ್ತು ಸ್ಫೋಟಗೊಂಡು ಈ ಅವಘಡ ಸಂಭವಿಸಿದೆ ಎನ್ನಲಾಗಿದೆ. ಸ್ಥಳಕ್ಕೆ ಪೊಲೀಸರು ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ.

For Latest News Updates, Join Our Whatsapp Community🚩
RELATED ARTICLES

Most Popular