HomeKarnatakaಆಗಸದಲ್ಲೇ 5 ಸುತ್ತು ಹಾಕಿದ ಮಾಜಿ ಸಿಎಂ ಯಡಿಯೂರಪ್ಪ ಇದ್ದ ಇಂಡಿಗೋ ವಿಮಾನ

ಆಗಸದಲ್ಲೇ 5 ಸುತ್ತು ಹಾಕಿದ ಮಾಜಿ ಸಿಎಂ ಯಡಿಯೂರಪ್ಪ ಇದ್ದ ಇಂಡಿಗೋ ವಿಮಾನ

ಶಿವಮೊಗ್ಗ: ಮಾಜಿ ಸಿಎಂ ಬಿ.ಎಸ್.ಯಡಿಯೂರಪ್ಪ ಪ್ರಯಾಣಿಸಿದ್ದ ಇಂಡಿಗೋ ವಿಮಾನ ಆಗಸದಲ್ಲಿಯೇ 5 ಸುತ್ತು ಹಾರಾಡುತ್ತಾ ಕೆಲ ಸಮಯದ ಬಳಿಕ ಲ್ಯಾಂಡ್ ಆದ ಘಟನೆ ಶಿವಮೊಗ್ಗದಲ್ಲಿ ನಡೆದಿದೆ.

ಬೆಂಗಳೂರಿನಿಂದ ಬೆಳಿಗ್ಗೆ 9:50ಕ್ಕೆ ಹೊರಟಿದ್ದ ಇಂಡಿಗೋ ವಿಮಾನ ಬೆಳಿಗ್ಗೆ 11:5ಕ್ಕೆ ಶಿವಮೊಗ್ಗ ಏರ್ ಪೋರ್ಟ್ ನಲ್ಲಿ ಇಳಿಯಬೇಕಿತ್ತು. ಆದರೆ ಮೋಡಕವಿದ ವಾತಾವರಣ, ಹವಾಮಾನ ವೈಪರಿತ್ಯದಿಂದಾಗಿ ವಿಮಾನ ಲ್ಯಾಂಡ್ ಮಾಡಲು ಸಾಧ್ಯವಾಗದೇ ಆಗಸದಲ್ಲಿಯೇ 5 ಸುತ್ತು ಹಾರಾಟ ನಡೆಸಿದೆ. ಬಳಿಕ ಕೆಲ ಸಮಯದ ಬಳಿಕ ವಿಮಾನ ಲ್ಯಾಂಡ್ ಆಗಿದೆ.

📱 ಬ್ರೇಕಿಂಗ್ ನ್ಯೂಸ್ ಬೇಗ ಬೇಕೆ?KannadaDunia App ಡೌನ್‌ಲೋಡ್ ಮಾಡಿ, ತಾಜಾ ಸುದ್ದಿ ಮೊದಲು ಪಡೆಯಿರಿ.
APP ತೆರೆಯಿರಿ

ಮೋಡ ಕವಿದ ವಾತಾವರಣವಿದ್ದ ಕಾರಣಕ್ಕೆ ವಿಮಾನವನ್ನು ಲ್ಯಾಂಡ್ ಮಾಡಲು ವಿಳಂಬವಾಗಿದೆ. ವಾತಾವರಣ ಸರಿಯಾದ ಬಳಿಕ 20 ನಿಮಿಷ ತಡವಾಗಿ ವಿಮಾನ ಶಿವಮೊಗ್ಗ ಏರ್ ಪೋರ್ಟ್ ನಲ್ಲಿ ಇಳಿದಿದೆ.

ಕೆಲ ದಿನಗಳ ಹಿಂದಷ್ಟೇ ಹವಾಮಾನ ವೈಪರಿತ್ಯದಿಂದ ಇಂಡಿಗೋ ವಿಮಾನ ಶಿವಮೊಗ್ಗದಲ್ಲಿ ಲ್ಯಾಂಡ್ ಮಾಡಲು ಸಾಧ್ಯವಾಗದೇ ಬೆಂಗಳೂರಿಗೆ ವಾಪಾಸ್ ಆಗಿತ್ತು.

For Latest News Updates, Join Our Whatsapp Community🚩
RELATED ARTICLES

Most Popular