HomeKarnatakaGOOD NEWS: ಶಿವಮೊಗ್ಗ ಏರ್ ಪೋರ್ಟ್ ನಿಂದ ಮತ್ತೊಂದು ಸೌಲಭ್ಯ; ಇಂದಿನಿಂದ ತಿರುಪತಿ, ಹೈದರಾಬಾದ್ ಗೋವಾಗೆ...

GOOD NEWS: ಶಿವಮೊಗ್ಗ ಏರ್ ಪೋರ್ಟ್ ನಿಂದ ಮತ್ತೊಂದು ಸೌಲಭ್ಯ; ಇಂದಿನಿಂದ ತಿರುಪತಿ, ಹೈದರಾಬಾದ್ ಗೋವಾಗೆ ವಿಮಾನ ಸೇವೆ ಆರಂಭ

ಶಿವಮೊಗ್ಗ: ಪ್ರಯಾಣಿಕರಿಗೆ ಮತ್ತೊಂದು ಗುಡ್ ನ್ಯೂಸ್. ಮಲೆನಾಡ ಹೆಬ್ಬಾಗಿಲು ಶಿವಮೊಗ್ಗ ಏರ್ ಪೋರ್ಟ್ ನಿಂದ ಇಂದಿನಿಂದ ಮೂರು ನಗರಗಳಿಗೆ ಸ್ಟಾರ್ ಏರ್ ವಿಮಾನ ಸೌಲಭ್ಯ ಆರಂಭವಾಗಿದೆ.

ಶಿವಮೊಗ್ಗ ವಿಮಾನ ನಿಲ್ದಾಣದಿಂದ ಗೋವಾ, ಹೈದರಾಬಾದ್ ಹಾಗೂ ತಿರುಪತಿಗೆ ಇಂದಿನಿಂದ ಸ್ಟಾರ್ ಏರ್ ತನ್ನ ಸೇವೆ ಆರಂಭಿಸಿದೆ. ಮೂರು ನಗರಗಳಿಗೂ ಪ್ರತಿ ಮಂಗಳವಾರ, ಬುಧವಾರ, ಗುರುವಾರ ಹಾಗೂ ಶನಿವಾರ ವಿಮಾನ ಹಾರಾಟ ಸೌಲಭ್ಯವಿರುತ್ತದೆ.

📱 ಬ್ರೇಕಿಂಗ್ ನ್ಯೂಸ್ ಬೇಗ ಬೇಕೆ?KannadaDunia App ಡೌನ್‌ಲೋಡ್ ಮಾಡಿ, ತಾಜಾ ಸುದ್ದಿ ಮೊದಲು ಪಡೆಯಿರಿ.
APP ತೆರೆಯಿರಿ

ಇಂದು ಹೈದರಾಬಾದ್ ನಿಂದ ಮೊದಲ ಸ್ಟಾರ್ ಏರ್ ವಿಮಾನ ಶಿವಮೊಗ್ಗ ಏರ್ ಪೋರ್ಟ್ ಗೆ ಬಂದಿಳಿದಿದ್ದು, ಸಂಸದ ಬಿ.ವೈ.ರಾಘವೇಂದ್ರ ಬರಮಾಡಿಕೊಂಡರು. ಇದೇ ವೇಳೆ ಗೋವಾ, ಹೈದರಾಬಾದ್, ತಿರುಪತಿಗೆ ವಿಮಾನ ಹಾರಾಟಕ್ಕೆ ಚಾಲನೆ ನೀಡಲಾಯಿತು.

ಈ ವೇಳೆ ಮಾತನಾಡಿದ ಸಂಸದ ಬಿ.ವೈ.ರಾಘವೇಂದ್ರ ಶಿವಮೊಗ್ಗ ಜಿಲ್ಲೆಯ ಸರ್ವಾಂಗೀಣ ಅಭಿವೃದ್ಧಿ ನಿಟ್ಟಿನಲ್ಲಿ ಇಂದಿನಿಂದ ಮತ್ತೊಂದು ವಿಮಾನ ಸೇವೆ ಆರಂಭವಾಗಿದೆ. ತಿರುಪತಿ, ಹೈದರಾಬಾದ್ ಹಾಗೂ ಗೋವಾಗೆ ಉಡಾನ್ ಯೋಜನೆಯಡಿ ವಿಮಾನ ಹಾರಾಟ ಆರಂಭಿಸಲಾಗಿದೆ. ಜಿಲ್ಲೆಗೆ ವಿಮಾನ ಸೇವೆ ಕಲ್ಪಿಸಿದ ಪ್ರಧಾನಿ ನರೇಂದ್ರ ಮೋದಿ, ಮಾಜಿ ಸಿಎಂ ಬಿ.ಎಸ್.ಯಡಿಯೂರಪ್ಪನವರಿಗೆ ಧನ್ಯವಾದಗಳು ಎಂದು ತಿಳಿಸಿದರು.

 

For Latest News Updates, Join Our Whatsapp Community🚩
RELATED ARTICLES

Most Popular