ಶಿವಮೊಗ್ಗ: ಪಾಗಲ್ ಪ್ರೇಮಿಯೊಬ್ಬ ಯುವತಿಗೆ ಬಿಯರ್ ಬಾಟಲ್ ನಿಂದ ಇರಿದು ಹತ್ಯೆ ನಡೆಸಲು ಯತ್ನಿಸಿರುವ ಘಟನೆ ಶಿವಮೊಗ್ಗ ಜಿಲ್ಲೆಯ ತೀರ್ಥಹಳ್ಳಿ ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ ನಡೆದಿದೆ.
ಅಪೂರ್ವ ಹಲ್ಲೆಗೊಳಗಾಗಿರುವ ಯುವತಿ. ಸ್ವರೂಪ್ ಯುವತಿಗ್ರೆ ಬಿಯರ್ ಬಾಟಲ್ ನಿಂದ ಇರಿದಿರುವ ಯುವಕ. ಪ್ರೇಮಿಗಳ ದಿನಾಚರಣೆಯಂದು ಯುವಕ ಸ್ವರೂಪ್, ಅಪೂರ್ವಳಿಗೆ ಪ್ರೇಮ ನಿವೇದನೆ ಮಾಡಿದ್ದ. ಆದರೆ ಅಪೂರ್ವ ಆತನ ಪ್ರೀತಿ ನಿರಾಕರಿಸಿದ್ದಾಳೆ.
ತನ್ನ ಪ್ರೀತಿ ನಿರಾಕರಿಸಿದ್ದಕ್ಕೆ ಇಂದು ಯುವತಿಯನ್ನು ಅಡ್ದಗಟ್ಟಿದ್ದ ಪಾಗಲ್ ಪ್ರೇಮಿ ಸ್ವರೂಪ್, ಬಿಯರ್ ಬಾಟಲ್ ನಿಂದ ಮನಬಂದಂತೆ ಯುವತಿಗೆ ಇರಿದಿದ್ದಾನೆ. ಯುವತಿಯ ಕೈ, ಕುತ್ತಿಗೆ ಭಾಗದಲ್ಲಿ ಗಂಭೀರ ಗಾಯಗಳಾಗಿವೆ.
ಗಂಭೀರವಾಗಿ ಹಲ್ಲೆಗೊಳಗಾಗಿರುವ ಯುವತಿಯನ್ನು ಹೆಚ್ಚಿನ ಚಿಕಿತ್ಸೆಗಾಗಿ ಮಣಿಪಾಲ್ ಆಸ್ಪತ್ರೆಗೆ ದಾಖಲಿಸಲಾಗಿದೆ. ತೀರ್ಥಹಳ್ಳಿ ಪೊಲೀಸರು ಆರೋಪಿ ಯುವಕ ಸ್ವರೂಪ್ ನನ್ನು ವಶಕ್ಕೆ ಪಡೆದಿದ್ದಾರೆ.

