HomeKarnatakaಜೂ.28 ಕ್ಕೆ ಶಿವಮೊಗ್ಗ ಜಿಲ್ಲಾ ಸಹಕಾರ ಕೇಂದ್ರ ಬ್ಯಾಂಕಿನ ಚುನಾವಣೆ : 27 ಆಭ್ಯರ್ಥಿಗಳು ಕಣಕ್ಕೆ..!

ಜೂ.28 ಕ್ಕೆ ಶಿವಮೊಗ್ಗ ಜಿಲ್ಲಾ ಸಹಕಾರ ಕೇಂದ್ರ ಬ್ಯಾಂಕಿನ ಚುನಾವಣೆ : 27 ಆಭ್ಯರ್ಥಿಗಳು ಕಣಕ್ಕೆ..!

ಶಿವಮೊಗ್ಗ : ಶಿವಮೊಗ್ಗ ಜಿಲ್ಲಾ ಸಹಕಾರ ಕೇಂದ್ರ ಬ್ಯಾಂಕಿನ ಆಡಳಿತ ಮಂಡಳಿ ನಿರ್ದೇಶಕರ ಚುನಾವಣೆ 2024 ಕ್ಕೆ ಸಂಬಂಧಿಸಿದಂತೆ 12 ಕ್ಷೇತ್ರಗಳಿಗೆ ಜೂನ್ 28 ರಂದು ಬೆಳಗ್ಗೆ 9.00 ರಿಂದ ಸಂಜೆ 4.00 ರ ವರೆಗೆ ಮತದಾನ ನಡೆಯಲಿದೆ.

2028-29 ನೇ ಸಾಲಿನ 05 ವರ್ಷಗಳ ಅವಧಿಯಲ್ಲಿನ ಚುನಾವಣೆಗೆ ಉದೇದುವಾರಿಕೆ ವಾಪಸ್ಸು ಪಡೆದ ನಂತರ ಅಂತಿವಾಗಿ ಚುನಾವಣಾ ಕಣದಲ್ಲಿ ಒಟ್ಟು 27 ಅಭ್ಯರ್ಥಿಗಳು ಉಳಿದಿದ್ದಾರೆ.

ಪ್ರಾಥಮಿಕ ಕೃಷಿ ಪತ್ತಿನ ಸಹಕಾರ ಸಂಘ ನಿ.ಶಿವಮೊಗ್ಗ ತಾಲ್ಲೂಕು ಕ್ಷೇತ್ರದಿಂದ ಕೆ.ಪಿ ದುಗ್ಗಪ್ಪಗೌಡ, ಶಿವನಂಜಪ್ಪ.ಜೆ, ಪ್ರಾಥಮಿಕ ಕೃಷಿ ಪತ್ತಿನ ಸಹಕಾರ ಸಂಘ ನಿ. ಭದ್ರಾವತಿ ತಾಲ್ಲೂಕು ಕ್ಷೇತ್ರದಿಂದ ಹೆಚ್.ಎಲ್. ಷಡಾಕ್ಷರಿ, ಸಿ.ಹನುಮಂತಪ್ಪ, ಪ್ರಾಥಮಿಕ ಕೃಷಿ ಪತ್ತಿನ ಸಹಕಾರ ಸಂಘ ನಿ, ತೀರ್ಥಹಳ್ಳಿ ತಾ. ಕ್ಷೇತ್ರದಿಂದ ಬಸವಾನಿ ವಿಜಯದೇವ್, ಕೆ.ಎಸ್.ಶಿವಕುಮಾರ್, ಪ್ರಾ ಕೃ ಪ ಸ ಸಂಘ ನಿ ಸಾಗರ ತಾಲ್ಲೂಕು ಕ್ಷೇತ್ರದಿಂದ ಗೋಪಾಲಕೃಷ್ಣ ಬೇಳೂರು, ರತ್ನಾಕರ ಹೊನಗೋಡು, ಪ್ರಾ ಕೃ ಪ ಸ ಸಂಘ ನಿ ಶಿಕಾರಿಪುರ ತಾಲ್ಲೂಕು ಕ್ಷೇತ್ರದಿಂದ ಅಗಡಿ ಅಶೋಕ, ಎಸ್.ಪಿ ಚಂದ್ರಶೇಖರಗೌಡ, ಪ್ರಾ ಕೃ ಪ ಸ ಸಂಘ ನಿ ಸೊರಬ ತಾಲ್ಲೂಕು ಕ್ಷೇತ್ರದಿಂದ ಕೆ.ಪಿ. ರುದ್ರಗೌಡ, ಶಿವಮೂರ್ತಿಗೌಡ, ತಾಲ್ಲೂಕು ಕೃಷಿ ಉತ್ಪನ್ನ ಮಾರಾಟ ಸಹಕಾರ ಸಂಘ ಹಾಘೂ ಇತರೆ ಮಾರಾಟ ಮತ್ತು ಸಂಸ್ಕರಣ ಸಹಕಾರ ಸಂಘಗಳು ಶಿವಮೊಗ್ಗ ಉಪ ವಿಭಾಗದಿಂದ ಆರ್.ಎಂ. ಮಂಜುನಾಥಗೌಡ, ವಿರೂಪಾಕ್ಷಪ್ಪ ಜಿ.ಈ, ತಾಲ್ಲೂಕು ಕೃಷಿ ಉತ್ಪನ್ನ ಮಾರಾಟ ಸಹಕಾರ ಸಂಘ ಹಾಘೂ ಇತರೆ ಮಾರಾಟ ಮತ್ತು ಸಂಸ್ಕರಣ ಸಹಕಾರ ಸಂಘಗಳು ಸಾಗರ ಉಪ ವಿಭಾಗದಿಂದ ಬಿ.ಡಿ ಭೂಕಾಂತ್, ಜಿ.ಎಸ್.ಸುಧೀರ್, ಪಟ್ಟಣ ಸಹಕಾರ ಬ್ಯಾಂಕುಗಳ ಹಾಗೂ ವ್ಯವಸಾಯೇತರ ಪತ್ತಿನ ಸಹಕಾರ ಸಂಘಗಳು ಶಿವಮೊಗ್ಗ ಉಪವಿಭಾಗದಿಂದ ಎಸ್.ಪಿ.ದಿನೇಶ, ಮರಿಯಪ,್ಪ ಪಟ್ಟಣ ಸಹಕಾರ ಬ್ಯಾಂಕುಗಳ ಹಾಗೂ ವ್ಯವಸಾಯೇತರ ಪತ್ತಿನ ಸಹಕಾರ ಸಂಘಗಳು ಸಾಗರ ಉಪವಿಭಾಗದಿಂದ ಎಸ್.ಕೆ, ಬಸವರಾಜ್ ಡಿ.ಎಲ್, ರವೀಂದ್ರ ಹೆಚ್.ಎಸ್, ಬ್ಯಾಂಕಿನ ಕಾರ್ಯ ವ್ಯಾಪ್ತಿಯಲ್ಲಿ ಬರುವ ಇನ್ನಿತರ ಸಹಕಾರ ಸಂಘಗಳು ಶಿವಮೊಗ್ಗ ಉಪವಿಭಾಗದಿಂದ ಆನಂದ ಡಿ, ಕೆ.ಎಲ್.ಜಗದೀಶ್ವರ್, ಹೆಚ್.ಬಿ ದಿನೇಶ್, ವiಹಾಲಿಂಗಯ್ಯ ಶಾಸ್ತ್ರಿ ಎಸ್.ಎನ್, ಜೆ.ಪಿ ಯೋಗೇಶ್, ಟಿ. ಶಿವಶಂಕರಪ್ಪ, ಹರೀಶ್ ಎನ್.ಡಿ ಇವರುಗಳು ಅಂತಿಮ ಕಣದಲ್ಲಿದ್ದಾರೆ ಎಂದು ಶಿವಮೊಗ್ಗ ಜಿಲ್ಲಾ ಸಹಕಾರ ಕೇಂದ್ರ ಬ್ಯಾಂಕ್ ರಿಟರ್ನಿಂಗ್ ಅಧಿಕಾರಿ ಹಾಗೂ ಶಿವಮೊಗ್ಗ ಉಪವಿಭಾಗಾಧಿಕಾರಿಗಳಾದ ಸತ್ಯನಾರಾಯಣ ಬಿ.ಹೆಚ್ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

📱 ಬ್ರೇಕಿಂಗ್ ನ್ಯೂಸ್ ಬೇಗ ಬೇಕೆ?KannadaDunia App ಡೌನ್‌ಲೋಡ್ ಮಾಡಿ, ತಾಜಾ ಸುದ್ದಿ ಮೊದಲು ಪಡೆಯಿರಿ.
APP ತೆರೆಯಿರಿ

 

For Latest News Updates, Join Our Whatsapp Community🚩
ranjith
ranjith
Ranjith S S has a decade of experience in digital media. covering stories that spark conversations across the internet, Breaking news, viral moments and celebrity updates to everyday news that gets people talking.
RELATED ARTICLES

Most Popular