HomeLatest News51ರ ಪ್ರಾಯದಲ್ಲೂ 16ರ ಹರೆಯದ ಫಿಟ್ನೆಸ್: ಅಂತರರಾಷ್ಟ್ರೀಯ ಯೋಗ ದಿನದಂದು ಕಠಿಣ ವರ್ತುಲಾಸನ ಮಾಡಿ ಬೆರಗುಗೊಳಿಸಿದ...

51ರ ಪ್ರಾಯದಲ್ಲೂ 16ರ ಹರೆಯದ ಫಿಟ್ನೆಸ್: ಅಂತರರಾಷ್ಟ್ರೀಯ ಯೋಗ ದಿನದಂದು ಕಠಿಣ ವರ್ತುಲಾಸನ ಮಾಡಿ ಬೆರಗುಗೊಳಿಸಿದ ಶಿಲ್ಪಾ ಶೆಟ್ಟಿ ಏನಿದರ ಬೆನಿಫಿಟ್ಸ್?

ಬೆಂಗಳೂರು: ಜೂನ್ 21ರ ಇಂದು ಇಡೀ ವಿಶ್ವವೇ ಯೋಗದ ಮ್ಯಾಜಿಕ್‌ಗೆ ಫಿದಾ ಆಗಿ ಯೋಗ ದಿನವನ್ನು ಆಚರಿಸುತ್ತಿದೆ. ದೈಹಿಕ, ಮಾನಸಿಕ ಮತ್ತು ಆಧ್ಯಾತ್ಮಿಕ ಆರೋಗ್ಯವನ್ನು ಹೆಚ್ಚಿಸುವ ಈ ಪ್ರಾಚೀನ ಕಲೆಗೆ ಬಾಲಿವುಡ್‌ನಲ್ಲಿ ಯಾರಾದರೂ ಬ್ರ್ಯಾಂಡ್ ಅಂಬಾಸಿಡರ್ ಇದ್ದಾರೆ ಅಂದರೆ ಅದು ಖಂಡಿತಾ ಕರಾವಳಿ ಬೆಡಗಿ ಶಿಲ್ಪಾ ಶೆಟ್ಟಿ

ಪ್ರಸ್ತುತ 51 ವರ್ಷ ವಯಸ್ಸಾಗಿದ್ದರೂ ತಮಗೆ ಇನ್ನು 16 ವರ್ಷ ಪ್ರಾಯ ಅನ್ನುವಂತೆ ಸಖತ್ ಫಿಟ್ ಆಗಿರುವ ಶಿಲ್ಪಾ ಶೆಟ್ಟಿ, ಕೋಟ್ಯಂತರ ಜನರಿಗೆ ವೆಲ್‌ನೆಸ್ ಐಕಾನ್ ಆಗಿದ್ದಾರೆ. ಆರೋಗ್ಯಕರ ಅಡುಗೆ ರೆಸಿಪಿಗಳಿಂದ ಹಿಡಿದು ಕಠಿಣ ವರ್ಕೌಟ್ ವಿಡಿಯೋಗಳ ಮೂಲಕ ಸದಾ ಸೋಶಿಯಲ್ ಮೀಡಿಯಾದಲ್ಲಿ ಆಕ್ಟಿವ್ ಆಗಿರುವ ಶಿಲ್ಪಾ, ಈ ಬಾರಿ ಅಂತರರಾಷ್ಟ್ರೀಯ ಯೋಗ ದಿನದ ಅಂಗವಾಗಿ ಅತ್ಯಂತ ಕಠಿಣ ಹಾಗೂ ಸುಧಾರಿತ ಯೋಗ ಭಂಗಿ ವರ್ತುಲಾಸನ (Vartulasana) ಮಾಡುವ ಮೂಲಕ ಅಭಿಮಾನಿಗಳಿಗೆ ಭರ್ಜರಿ ಫಿಟ್ನೆಸ್ ಮೋಟಿವೇಶನ್ ನೀಡಿದ್ದಾರೆ

https://www.instagram.com/reel/DYL7zqXMw3-/?utm_source=ig_web_copy_link&igsh=NTc4MTIwNjQ2YQ==

📱 ಬ್ರೇಕಿಂಗ್ ನ್ಯೂಸ್ ಬೇಗ ಬೇಕೆ?KannadaDunia App ಡೌನ್‌ಲೋಡ್ ಮಾಡಿ, ತಾಜಾ ಸುದ್ದಿ ಮೊದಲು ಪಡೆಯಿರಿ.
APP ತೆರೆಯಿರಿ

ಶಿಲ್ಪಾ ಶೆಟ್ಟಿ ಸೀಕ್ರೆಟ್ ವರ್ತುಲಾಸನ?

ಶಿಲ್ಪಾ ಶೆಟ್ಟಿ ಅವರು ಇತ್ತೀಚೆಗೆ ತಮ್ಮ ಇನ್‌ಸ್ಟಾಗ್ರಾಮ್ ಖಾತೆಯಲ್ಲಿ ವಿಡಿಯೋ ಒಂದನ್ನು ಶೇರ್ ಮಾಡಿದ್ದಾರೆ. ಅದರಲ್ಲಿ ಅವರು ಅತ್ಯಂತ ಸುಲಭವಾಗಿ ಮತ್ತು ಪಕ್ಕಾ ಕಂಟ್ರೋಲ್‌ನೊಂದಿಗೆ ‘ವರ್ತುಲಾಸನ’ ಭಂಗಿಯನ್ನು ಪ್ರದರ್ಶಿಸಿದ್ದಾರೆ. ಈ ವಿಡಿಯೋದಲ್ಲಿ ಶಿಲ್ಪಾ ಅವರು ತಮ್ಮ ದೇಹವನ್ನು ವೃತ್ತಾಕಾರವಾಗಿ ಮೇಲಕ್ಕೆ ಎತ್ತಿ, ಇಡೀ ಬಾಡಿಯನ್ನು ಬ್ಯಾಲೆನ್ಸ್ ಮಾಡಿದ್ದಾರೆ.

ನೋಡಲು ಇದು ತುಂಬಾ ಸರಳ ಮತ್ತು ಆಕರ್ಷಕವಾಗಿ ಕಂಡರೂ, ಈ ಆಸನ ಮಾಡುವುದು ಅಷ್ಟು ಸುಲಭವಲ್ಲ ಇದು ಇಂಟರ್‌ಮಿಡಿಯೆಟ್ ಮತ್ತು ಅಡ್ವಾನ್ಸ್ಡ್ ಹಂತದ ಯೋಗ ಭಂಗಿಯಾಗಿದ್ದು, ಇದನ್ನು ಮಾಡಲು ದೇಹದಲ್ಲಿ ತೀವ್ರವಾದ ಫ್ಲೆಕ್ಸಿಬಿಲಿಟಿ (ನಮ್ಯತೆ), ಕೋರ್ ಸ್ಟ್ರೆಂತ್ (ಹೊಟ್ಟೆಯ ಸ್ನಾಯುಗಳ ಬಲ) ಮತ್ತು ಅದ್ಭುತವಾದ ಸ್ಥಿರತೆ (Stability) ಇರಬೇಕಾಗುತ್ತದೆ.

https://www.instagram.com/reel/DX56SpPyrED/?utm_source=ig_web_copy_link&igsh=NTc4MTIwNjQ2YQ==

ವರ್ತುಲಾಸನ ಮಾಡೋದ್ರಿಂದ ಏನೆಲ್ಲಾ ಲಾಭಗಳಿವೆ?

ಸ್ವತಃ ಶಿಲ್ಪಾ ಶೆಟ್ಟಿ ಅವರೇ ವಿವರಿಸಿರುವ ಪ್ರಕಾರ, ದಿನನಿತ್ಯದ ಯೋಗಾಭ್ಯಾಸದಲ್ಲಿ ಈ ವರ್ತುಲಾಸನವನ್ನು ಸೇರಿಸಿಕೊಳ್ಳುವುದರಿಂದ ದೇಹಕ್ಕೆ ಈ ಕೆಳಗಿನ ಪ್ರಯೋಜನಗಳು ಸಿಗುತ್ತವೆ:

ಫ್ಲೆಕ್ಸಿಬಿಲಿಟಿ: ಈ ಆಸನವು ನಮ್ಮ ಬೆನ್ನೆಲುಬನ್ನು (Spine) ಚೆನ್ನಾಗಿ ಸ್ಟ್ರೆಚ್ ಮಾಡಿ ಗಟ್ಟಿಗೊಳಿಸುತ್ತದೆ. ಅಷ್ಟೇ ಅಲ್ಲದೆ, ಕಾಲಿನ ಹ್ಯಾಮ್‌ಸ್ಟ್ರಿಂಗ್ ಮತ್ತು ಕಾಫ್ ಸ್ನಾಯುಗಳ ಚಲನಶೀಲತೆಯನ್ನು ಹೆಚ್ಚಿಸಿ ಇಡೀ ದೇಹವು ಚುರುಕಾಗುವಂತೆ ಮಾಡುತ್ತದೆ.

ಮೆಟಾಬಾಲಿಸಂ ಮತ್ತು ಥೈರಾಯ್ಡ್ ನಿಯಂತ್ರಣ: ವರ್ತುಲಾಸನ ಮಾಡುವುದರಿಂದ ದೇಹದ ಪ್ರಮುಖ ಗ್ರಂಥಿಯಾದ ಥೈರಾಯ್ಡ್ (Thyroid) ಸ್ಟಿಮ್ಯುಲೇಟ್ ಆಗುತ್ತದೆ. ಇದರಿಂದಾಗಿ ದೇಹದ ಮೆಟಾಬಾಲಿಸಂ ರೇಟ್ ಸುಧಾರಿಸಿ, ತೂಕ ನಿಯಂತ್ರಣಕ್ಕೆ ಹೆಲ್ಪ್ ಆಗುತ್ತದೆ.

ಉತ್ತಮ ಜೀರ್ಣಕ್ರಿಯೆ ಮತ್ತು ರಕ್ತಸಂಚಾರ: ಈ ಭಂಗಿಯು ಹೊಟ್ಟೆಯ ಭಾಗದ ಮೇಲೆ ಒತ್ತಡ ಹೇರುವುದರಿಂದ ಜೀರ್ಣಕ್ರಿಯೆ ಸೂಪರ್ ಫಾಸ್ಟ್ ಆಗುತ್ತದೆ. ಜೊತೆಗೆ ಇಡೀ ದೇಹಕ್ಕೆ ರಕ್ತ ಪರಿಚಲನೆ (Blood Circulation) ಸಖತ್ ಆಗಿ ಸುಧಾರಿಸುತ್ತದೆ.

ಪರ್ಫೆಕ್ಟ್ ಬಾಡಿ ಪೋಸ್ಚರ್: ಇವತ್ತಿನ ಐಟಿ ಉದ್ಯೋಗಿಗಳಲ್ಲಿ ಬೆನ್ನು ಬಾಗುವ ಸಮಸ್ಯೆ ಕಾಮನ್ ಆಗಿದೆ. ಆದರೆ ಈ ಆಸನವು ಹೆಗಲ ಮೂಳೆಗಳನ್ನು (Shoulder Blades) ಎಂಗೇಜ್ ಮಾಡಿ, ಮೇಲ್ಬೆನ್ನನ್ನು ಬಲಪಡಿಸುವುದರಿಂದ ನಿಮ್ಮ ಬಾಡಿ ಪೋಸ್ಚರ್ ನೆಟ್ಟಗಾಗಲು ಇದು ಬೆಸ್ಟ್ ಮೆಡಿಸನ್

For Latest News Updates, Join Our Whatsapp Community🚩
Abinandan
Abinandan
ನಿವೇದಿತಾ ಬಿ.ಎ.. ಬಿ.ಎಡ್ ಪದವೀಧರರು. ಡಿಜಿಟಲ್ ಪತ್ರಿಕೋದ್ಯಮದಲ್ಲಿ ಕಳೆದ 4 ವರ್ಷಗಳಿಂದ ಸಕ್ರಿಯರಾಗಿದ್ದಾರೆ. Revenufacts ವೆಬ್‌ಸೈಟ್‌ನಲ್ಲಿ 3 ವರ್ಷ ಹಾಗೂ ಕರುನಾಡು ಸುದ್ದಿ ಮಾಧ್ಯಮದಲ್ಲಿ 1 ವರ್ಷ ಕಾರ್ಯನಿರ್ವಹಿಸಿದ ಅನುಭವ ಹೊಂದಿದ್ದಾರೆ. ಆರೋಗ್ಯ, ವಾಣಿಜ್ಯ, ಲೈಫ್‌ಸ್ಟೈಲ್ ವಿಭಾಗದಲ್ಲಿ ವಿಶೇಷ ಪರಿಣತಿ ಹೊಂದಿದ್ದಾರೆ. Nivedita is a skilled digital content creator with a strong academic background in B.A. and B.Ed. 4 years of experience in digital journalism.
RELATED ARTICLES

LEAVE A REPLY

Please enter your comment!
Please enter your name here

Most Popular