ಮಗಳ ಕ್ಯಾನ್ಸರ್‌ ಚಿಕಿತ್ಸೆಗೆ ಕೂಡಿಟ್ಟಿದ್ದ ಹಣವೆಲ್ಲಾ ಖಾಲಿ: ಆದರೂ ತಾಯಿಗೆ ಹುಡುಕಿಕೊಂಡು ಬಂತು ಅದೃಷ್ಟ

ಮಗಳ ಕ್ಯಾನ್ಸರ್‌ ಚಿಕಿತ್ಸೆಗೆಂದು ತನ್ನ ಜೀವಿತದ ಉಳಿತಾಯವನ್ನೆಲ್ಲಾ ಧಾರೆ ಎರೆದ ಮಹಿಳೆಯೊಬ್ಬರ ಮಾತೃ ವಾತ್ಸಲ್ಯಕ್ಕೆ ಖುದ್ದು ಭಗವಂತನೇ ಒಲಿದು ಆಕೆಯ ಅದೃಷ್ಟದ ಬಾಗಿಲು ತೆರೆದಿದ್ದಾನೆ.

ಫ್ಲಾರಿಡಾದ ಲೆಕ್ಲ್ಯಾಂಡ್ ನಗರದ ಗೆರಾಲ್ಡಿನ್ ಹೆಸರಿನ ಈ ಮಹಿಳೆ ತಮ್ಮ ಮಗಳ ಕ್ಯಾನ್ಸರ್‌ ಚಿಕಿತ್ಸೆಯ ಬಳಿಕ, $2,000,000 ಬೋನಸ್‌ ಕ್ಯಾಶ್‌ವರ್ಡ್ ಸ್ಕ್ರಾಚ್‌-ಆಫ್‌-ಗೇಮ್’ ಲಾಟರಿ ಟಿಕೆಟ್‌ಗಳನ್ನು ಖರೀದಿ ಮಾಡಿದ್ದಾರೆ. ಈ ಲಾಟರಿಯ ಕಟ್ಟಕಡೆಯ ಟಿಕೆಟ್ ಖರೀದಿ ಮಾಡಿದ ಗೆರಾಲ್ಡ್‌ಗೆ, 2 ದಶಲಕ್ಷ (16.42 ಕೋಟಿ ರೂ) ಬಹುಮಾನ ಒಲಿದು ಬಂದಿದೆ.

“ಲೇಕ್ಲ್ಯಾಂಡ್‌ನ ಗೆರಾಲ್ಡಿನ್ ಗೆಂಬ್ಲೆಟ್ $2,000,000 ಬೋನಸ್ ಕ್ಯಾಶ್‌ವರ್ಡ್‌ನ ಸ್ಕ್ರಾಚ್‌ ಆಫ್ ಗೇಮ್‌ನ ಕೊನೆಯ ಟಿಕೆಟ್ ಖರೀದಿಸಿದ ಬಳಿಕ, ಕ್ರಾಸ್‌ವರ್ಡ್ ಮೇಲಿನ ಆಕೆಯ ಪ್ರೀತಿಗೆ 2 ದಶಲಕ್ಷ ಡಾಲರ್‌ ಅಗ್ರ ಬಹುಮಾನವೇ ಒಲಿದಿದೆ. ಇದು ನಿಜಕ್ಕೂ ಗೆಲುವಿನ  ಆರಂಭ ಅಷ್ಟೇ!” ಎಂದು ಫ್ಲಾರಿಡಾ ಲಾಟರಿ ಟ್ವೀಟ್ ಮಾಡಿದೆ.

“ಮೊದಲಿಗೆ ಲಾಟರಿ ಅಂಗಡಿಯಾತ ಟಿಕೆಟ್‌ಗಳೆಲ್ಲಾ ಖಾಲಿಯಾಗಿವೆ ಎಂದಿದ್ದ. ಕ್ರಾಸ್‌ವರ್ಡ್ ಆಟಗಳ ಮೇಲಿನ ನನ್ನ ಪ್ರೀತಿಯಿಂದಾಗಿ ಆತನಿಗೆ ಮತ್ತೊಮ್ಮೆ ಪರೀಕ್ಷಿಸಲು ಕೋರಿದೆ. ಆಗ ಆತನಿಗೆ ಕೊನೆಯ ಟಿಕೆಟ್ ಸಿಕ್ಕಿದೆ!” ಎಂದು ಗೆರಾಲ್ಡಿನ್ ತಿಳಿಸಿದ್ದಾರೆ.

ಸ್ತನ ಕ್ಯಾನ್ಸರ್‌ ಪೀಡಿತಳಾಗಿದ್ದ ಪುತ್ರಿಗೆ ವೈದ್ಯಕೀಯ ಚಿಕಿತ್ಸೆಗೆಂದು ಕೂಡಿಟ್ಟಿದ್ದ ಹಣವನ್ನೆಲ್ಲಾ ಖರ್ಚು ಮಾಡಿದ್ದ ಈ ತ್ಯಾಗಮಯಿ ತಾಯಿಗೆ ಅಭಿನಂದನೆಗಳ ಮಹಾಪೂರಗಳೇ ಹರಿದು ಬರುತ್ತಿವೆ.

https://twitter.com/floridalottery/status/1644388931528425523?ref_src=twsrc%5Etfw%7Ctwcamp%5Etweetembed%7Ctwterm%5E1644388931528425523%

https://twitter.com/terrywolfe58/status/1645256492423979011?ref_src=twsrc%5Etfw%7Ctwcamp%5Etweetembed%7Ctwterm%5E1645256492423979011%7Ctwgr%5E79f21590afd1a115cf6a0013d58d4bf1dff064cb%7Ctwcon%5Es1_&ref_url=https%3A%2F%2Fwww.news18.com%2Fbuzz%2Fshe-spent-life-savings-on-daughters-cancer-treatment-and-then-won-rs-16-crore-lottery-7519321.html

https://twitter.com/willingfollower/status/1645110401124663302?ref_src=twsrc%5Etfw%7Ctwcamp%5Etweetembed%7Ctwterm%5E1645110401124663302%7Ctwgr%5E79f21590afd1a115cf6a0013d58d4bf1dff064cb%7Ctwcon%5Es1_&ref_url=https%3A%2F%2Fwww.news18.com%2Fbuzz%2Fshe-spent-life-savings-on-daughters-cancer-treatment-and-then-won-rs-16-crore-lottery-7519321.html

Share This Article

Latest News

ಬಸನಗೌಡ ಪಾಟೀಲ್ ಯತ್ನಾಳ್ ಉಚ್ಚಾಟನೆಯಿಂದ ಬಿಜೆಪಿಗೆ ಹಿನ್ನಡೆಯಾಗುತ್ತದಾ ?

View Results

Loading ... Loading ...

Most Read